ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಕಿಯೊ ಪ್ಯಾರಾಲಿಂಪಿಕ್ಸ್: ಕೊರೊನಾ ಸೋಂಕಿತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ

Last Updated 24 ಆಗಸ್ಟ್ 2021, 13:08 IST
ಅಕ್ಷರ ಗಾತ್ರ

ಟೋಕಿಯೊ: ಹೈಜಂಪ್ ಪಟು ಮಾರಿಯಪ್ಪನ್ ತಂಗವೇಲು ಅವರು ಕೊರೊನಾ ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕ ಹೊಂದಿದ ಕಾರಣ ಪ್ಯಾರಾಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗುವ ಅವಕಾಶ ಕಳೆದುಕೊಂಡರು. ಅವರ ಬದಲಾಗಿ ಶಾಟ್‌ಪಟ್‌ ಪಟು ಟೆಕ್‌ ಚಂದ್‌ ಅವರು ಪಥಸಂಚಲನದಲ್ಲಿ ತಂಡವನ್ನು ಮುನ್ನಡೆಸಿದರು.

ಟೋಕಿಯೊಗೆ ವಿಮಾನದಲ್ಲಿ ತೆರಳುವ ವೇಳೆ ಮಾರಿಯಪ್ಪನ್, ಸೋಂಕಿತನ ಸಂರ್ಪಕಕ್ಕೆ ಬಂದಿದ್ದು, ಅವರೊಂದಿಗೆ ಇತರ ಐವರು ಅಥ್ಲೀಟ್‌ಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಡಿಸ್ಕಸ್‌ ಥ್ರೊ ಪಟು ವಿನೋದ್ ಕುಮಾರ್ ಕೂಡ ಇದರಲ್ಲಿ ಸೇರಿದ್ದಾರೆ.

‘ವಿಮಾನದಲ್ಲಿ ಪ್ರಯಾಣಿಸುವ ವೇಳೆ ನಮ್ಮ ಆರು ಮಂದಿ ಅಥ್ಲೀಟ್‌ಗಳು ಕೋವಿಡ್‌ ಇರುವ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದರೆಂದು ಪ್ಯಾರಾಲಿಂಪಿಕ್‌ ಕೋವಿಡ್‌ ನಿಯಂತ್ರಣ ಕಚೇರಿಯಿಂದ ಮಾಹಿತಿ ಬಂದಿದೆ. ಆರು ಮಂದಿಯಲ್ಲಿ ಮಾರಿಯಪ್ಪನ್ ಮತ್ತು ವಿನೋದ್ ಕುಮಾರ್ ಕೂಡ ಇದ್ದಾರೆ‘ ಎಂದು ಭಾರತದ ಚೆಫ್ ಡಿ ಮಿಷನ್‌ ಗುರುಶರಣ್ ಸಿಂಗ್‌ ಹೇಳಿದ್ದಾರೆ.

ಭಾರತದ ಪ್ಯಾರಾಲಿಂಪಿಕ್ ಸಮಿತಿಯು (ಪಿಸಿಐ) ಈ ಮೊದಲು ನೀಡಿದ ಮಾಹಿತಿಯಲ್ಲಿ ಟೆಕ್ ಚಂದ್ ಅವರನ್ನು ಜಾವೆಲಿನ್ ಥ್ರೊ ಪಟು ಎಂದು ಗುರುತಿಸಿತ್ತು. ಆದಾಗ್ಯೂ, ನಂತರ ಅವರು ಶಾಟ್‌ಪಟ್‌ನಲ್ಲಿ ಸ್ಪರ್ಧಿಸುತ್ತಾರೆ ಎಂದು ಮಾಹಿತಿಯನ್ನು ಸರಿಪಡಿಸಲಾಯಿತು.

ಮಾರಿಯಪ್ಪನ್ ಮತ್ತು ವಿನೋದ್ ಅವರ ಕೋವಿಡ್‌ ಫಲಿತಾಂಶದ ವರದಿ ಸದ್ಯಕ್ಕೆ ನೆಗೆಟಿವ್ ಬಂದಿದ್ದು ತಮ್ಮ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಗುರುಶರಣ್ ಸಿಂಗ್‌ ಹೇಳಿದ್ದಾರೆ.

ಭಾರತದ ಅಥ್ಲೆಟಿಕ್ಸ್ ಕೋಚ್‌ ಸತ್ಯನಾರಾಯಣ ಕೂಡ ಈ ಬೆಳವಣಿಗೆಯನ್ನು ಖಚಿತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT