ಶುಕ್ರವಾರ, ಡಿಸೆಂಬರ್ 6, 2019
19 °C

ಐಒಎಸ್‌ ಜೊತೆ ಒಪ್ಪಂದ ಮುಂದುವರಿಸಿದ ಮೇರಿ ಕೋಮ್‌

Published:
Updated:
Deccan Herald

ನವದೆಹಲಿ : ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಆರು ಬಾರಿ ಪ್ರಶಸ್ತಿ ಗೆದ್ದು ದಾಖಲೆ ನಿರ್ಮಿಸಿರುವ ಭಾರತದ ಬಾಕ್ಸರ್‌ ಮೇರಿ ಕೋಮ್‌ ಅವರು ಇನ್ಫಿನಿಟಿ ಆಪ್ಟಿಮಲ್‌ ಸೊಲ್ಯುಷನ್ಸ್‌ (ಐಒಎಸ್‌) ಜೊತೆ ವಾಣಿಜ್ಯ ಒಪ್ಪಂದವನ್ನು ಮುಂದುವರಿಸಿದ್ದಾರೆ. 2009ರಿಂದ ಅವರ ವಾಣಿಜ್ಯ ವ್ಯವಹಾರಗಳನ್ನು ಈ ಸಂಸ್ಥೆ ನೋಡಿಕೊಳ್ಳುತ್ತಿತ್ತು.

‘ಹತ್ತು ವರ್ಷಗಳಿಂದ ನಾನು ಆಟದ ಮೇಲಷ್ಟೇ ಗಮನ ಇರಿಸಿದ್ದೆ. ವಾಣಿಜ್ಯ ಸಂಬಂಧಿ ಕಾರ್ಯಗಳ ಜವಾಬ್ದಾರಿಯನ್ನು ಐಒಎಸ್ ವಹಿಸಿಕೊಂಡಿತ್ತು. ಸಮರ್ಪಕವಾಗಿ ಅದನ್ನು ನಡೆಸಿಕೊಂಡು ಬಂದ ಕಾರಣ ಒಪ್ಪಂದವನ್ನು ಮುಂದುವರಿಸಲು ನಿರ್ಧರಿಸಿದ್ದೇನೆ’ ಎಂದು ಮೇರಿ ಹೇಳಿದ್ದಾರೆ.

ವಿಜೇಂದರ್ ಸಿಂಗ್‌, ಹಿಮಾ ದಾಸ್‌, ಮಣಿಕಾ ಭಾತ್ರಾ, ಮೀರಾಬಾಯಿ ಚಾನು, ಮನ್‌ಪ್ರೀತ್‌ ಸಿಂಗ್‌ ಮತ್ತು ಜಿನ್ಸನ್ ಜಾನ್ಸನ್‌ ಅವರ ಜೊತೆಯೂ ಈ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು