ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃಕಪ್ ಮಹಿಳಾ ಬ್ಯಾಸ್ಕೆಟ್‌ಬಾಲ್: ಫೈನಲ್‌ಗೆ ಮೌಂಟ್ಸ್, ಬೀಗಲ್ಸ್

ಎಸ್‌ಎಮ್‌ಎನ್‌ ಸ್ಮಾರಕ ಟ್ರೋಫಿ ರಾಜ್ಯ ಮಾತೃಕಪ್ ಮಹಿಳಾ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌
Last Updated 7 ಮಾರ್ಚ್ 2022, 14:25 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತಮ ಆಟವಾಡಿದ ಮೌಂಟ್ಸ್ ಕ್ಲಬ್ ಮತ್ತು ಬೀಗಲ್ಸ್ ಬಿ.ಸಿ. ತಂಡಗಳು ಎಸ್‌.ಎಮ್‌.ಎನ್. ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಮಾತೃಕಪ್‌ ಮಹಿಳಾ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಫೈನಲ್‌ಗೆ ಲಗ್ಗೆಯಿಟ್ಟಿವೆ.

ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಸೂಪರ್ ಲೀಗ್ ಪಂದ್ಯದಲ್ಲಿ ಮೌಂಟ್ಸ್ ಕ್ಲಬ್‌ 55–39ರಿಂದ ಡಿವೈಇಎಸ್‌ ಕ್ರೀಡಾ ವಸತಿನಿಲಯ ಮೈಸೂರು ತಂಡವನ್ನು ಪರಾಭವಗೊಳಿಸಿತು. ವಿಜೇತ ತಂಡದ ಪರ ಕೃತಿಕಾ 12, ಗೋಮೇಧಾ 11 ಮತ್ತು ರೋಶಿನಿ 10 ಸ್ಕೋರ್ ದಾಖಲಿಸಿದರು. ಮೈಸೂರು ತಂಡದ ಯಶಸ್ವಿನಿ ಮತ್ತು ಮೇಘನಾ ತಲಾ 14 ಸ್ಕೋರ್ ಗಳಿಸಿದರು.

ಇನ್ನೊಂದು ಪಂದ್ಯದಲ್ಲಿ ಬೀಗಲ್ಸ್ ಬಿ.ಸಿ 57–32ರಿಂದ ರಾಜ್‌ಮಹಲ್ ತಂಡವವನ್ನು ಮಣಿಸಿದರು, ಬೀಗಲ್ಸ್ ತಂಡದ ಸಂಜನಾ ಎನ್‌. ಕುಮಾರ್ (24) ಮತ್ತು ಚಂದನಾ (15) ಮಿಂಚಿದರು. ರಾಜ್‌ಮಹಲ್ ತಂಡದ ಐಶ್ವರ್ಯ 15 ಸ್ಕೋರ್ ದಾಖಲಿಸಿದರು.

ಮಂಗಳವಾರ ನಡೆಯುವ ಫೈನಲ್‌ನಲ್ಲಿ ಬೀಗಲ್ಸ್ – ಮೌಂಟ್ಸ್ ಮುಖಾಮುಖಿಯಾಗಲಿವೆ. ಮೂರು ಮತ್ತು ನಾಲ್ಕನೇ ಸ್ಥಾನ ನಿರ್ಧರಿಸಲು ಡಿವೈಇಎಸ್ ಮೈಸೂರು ಮತ್ತು ರಾಜ್‌ಮಹಲ್ ಬಿಸಿ ಆಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT