ಸೋಮವಾರ, ಆಗಸ್ಟ್ 19, 2019
28 °C

ಮೌಂಟ್ಸ್‌ಗೆ ಪ್ರಶಸ್ತಿ

Published:
Updated:

ಬೆಂಗಳೂರು: ಮೌಂಟ್ಸ್‌ ಕ್ಲಬ್‌ ತಂಡ ಮೇಯರ್‌ ಕಪ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದೆ.

ಭಾನುವಾರ ನಡೆದ ಸಬ್‌ ಜೂನಿ ಯರ್‌ ಬಾಲಕಿಯರ ಫೈನಲ್‌ನಲ್ಲಿ ಮೌಂಟ್ಸ್‌ ಕ್ಲಬ್‌ 45–28ರಲ್ಲಿ ವಿಮಾನ ಪುರ ಕ್ಲಬ್‌ ಎದುರು ಗೆದ್ದಿತು.

ಬಾಲಕರ ವಿಭಾಗದ ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ಬೀಗಲ್ಸ್‌ ಕ್ಲಬ್‌ 50–48ರಲ್ಲಿ ಜಯನಗರ ಕ್ಲಬ್‌ ತಂಡವನ್ನು ಮಣಿಸಿತು.

ಸೀನಿಯರ್‌ ಪುರುಷರ ವಿಭಾಗದ ಫೈನಲ್‌ನಲ್ಲಿ ಬ್ಯಾಂಕ್‌ ಆಫ್‌ ಬರೋಡ 80–74ರಲ್ಲಿ ಎಎಸ್‌ಸಿ ಸೆಂಟರ್‌ ತಂಡ ವನ್ನು ಸೋಲಿಸಿತು. ಮಹಿಳಾ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಡಿವೈಇಎಸ್‌ ವಿದ್ಯಾನಗರ 67–35ರಲ್ಲಿ ಮೌಂಟ್ಸ್‌ ಕ್ಲಬ್‌ ತಂಡದ ಎದುರು ವಿಜಯಿಯಾಯಿತು.

Post Comments (+)