ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್‌: ಎಂಇಜಿ, ಜೆಎಸ್‌ಸಿ ಜಯಭೇರಿ

Last Updated 24 ಡಿಸೆಂಬರ್ 2021, 15:16 IST
ಅಕ್ಷರ ಗಾತ್ರ

ಬೆಂಗಳೂರು: ಎಂಇಜಿ ಮತ್ತು ಜೆಎಸ್‌ಸಿ ತಂಡಗಳು ರಾಜ್ಯ ಅಸೋಸಿಯೇಷನ್ ಕಪ್‌ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಶುಕ್ರವಾರ ಭರ್ಜರಿ ಜಯ ದಾಖಲಿಸಿದವು.

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪುರುಷರ ವಿಭಾಗದ ಪಂದ್ಯದಲ್ಲಿ ಎಂಇಜಿ 103–63ರಲ್ಲಿ ಧಾರವಾಡದ ರೋವರ್ಸ್ ತಂಡವನ್ನು ಮಣಿಸಿತು. ಮಧ್ಯಂತರ ಅವಧಿಯಲ್ಲಿ 60–32ರ ಮುನ್ನಡೆಯಲ್ಲಿದ್ದ ಎಂಇಜಿ ದ್ವಿತೀಯಾರ್ಧದಲ್ಲೂ ಅಮೋಘ ಆಟ ಮುಂದುವರಿಸಿತು. ಎಂಇಜಿ ಪರ ಮಯೂರ್ 17 ಮತ್ತು ರೋವರ್ಸ್‌ಗಾಗಿ ತೇಜಸ್ 21 ಪಾಯಿಂಟ್ ಕಲೆ ಹಾಕಿದರು.

ಮಹಿಳೆಯರ ವಿಭಾಗದಲ್ಲಿ ಜೆಎಸ್‌ಸಿ 79–36ರಲ್ಲಿ ನ್ಯಾಷನಲ್ಸ್ ಮೈಸೂರು ತಂಡವನ್ನು ಮಣಿಸಿತು. ಅದಿತಿ (20 ಪಾಯಿಂಟ್ಸ್‌) ಮತ್ತು ಆದ್ಯ (16) ಜೆಎಸ್‌ಸಿ ಪರ ಮಿಂಚಿದರೆ ನ್ಯಾಷನಲ್ಸ್ ತಂಡಕ್ಕಾಗಿ ದಿಯಾ 15 ಪಾಯಿಂಟ್ ಗಳಿಸಿದರು.

ಪುರುಷರ ವಿಭಾಗದ ಇತರ ಪಂದ್ಯಗಳಲ್ಲಿ ಎಎಸ್‌ಸಿ 98–68ರಲ್ಲಿ ಬಿ.ಸಿ ಬಿ.ಸಿಯನ್ನು ಸೋಲಿಸಿತು. ಡಿವೈಇಎಸ್‌ ಬೆಂಗಳೂರು 66–32ರಲ್ಲಿ ಎಂಸಿಎಚ್‌ಎಸ್‌ ವಿರುದ್ಧ, ಐಬಿಬಿಸಿ 83–54ರಲ್ಲಿ ಕೆಎಸ್‌ಪಿ ವಿರುದ್ಧ, ವೈಎಂಎಂಎ 56–55ರಲ್ಲಿ ಬ್ರದರ್ಸ್ ಬಿಸಿ ವಿಜಯಪುರ ವಿರುದ್ಧ, ವಿವೇಕ್ಸ್‌ ಎಸ್‌ಸಿ 120–79ರಲ್ಲಿ ಪಿನಾಕಿನಿ ಬಿ.ಜಿ ವಿರುದ್ಧ, ಮಂಗಳೂರು ಬಿ.ಸಿ 79–68ರಲ್ಲಿ ಬೀಗಲ್ಸ್ ಬಿ.ಸಿ ವಿರುದ್ಧ, ಬ್ಯಾಂಕ್‌ ಆಫ್ ಬರೋಡ 82–33ರಲ್ಲಿ ರಾಜ್‌ಕುಮಾರ್ ಬಿ.ಸಿ ವಿರುದ್ಧ ಜಯ ಗಳಿಸಿತು.

ಮಹಿಳೆಯರ ವಿಭಾಗದಲ್ಲಿ ಡಿವೈಇಎಸ್‌ ವಿದ್ಯಾನಗರ 49–17ರಲ್ಲಿ ವಿವೇಕ್ಸ್‌ ಎಸ್‌ಸಿಯನ್ನು, ಬೀಗಲ್ಸ್‌ ಬಿ.ಸಿ 48–35ರಲ್ಲಿ ಸಿ.ಜೆ.ಸಿಯನ್ನು, ರಾಜ್‌ಮಹಲ್ ಎಸ್‌ಸಿ 65–51ರಲ್ಲಿ ಡಿವೈಇಎಸ್‌ ವಿಜಯಪುರವನ್ನು, ರಾಜ್‌ಕುಮಾರ್ ಬಿ.ಸಿ 49–24ರಲ್ಲಿ ಎಂ.ಎನ್‌.ಕೆ ರಾವ್‌ ಪಾರ್ಕ್‌ ಬಿ.ಸಿಯನ್ನು, ಡಿವೈಇಎಸ್ ಮಂಡ್ಯ 49–40ರಲ್ಲಿ ಮೈಸೂರು ಬಿ.ಸಿಯನ್ನು ಸೋಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT