ಗುರುವಾರ , ಅಕ್ಟೋಬರ್ 24, 2019
21 °C
ರಾಷ್ಟ್ರೀಯ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌

ಫೈನಲ್‌ಗೆ ಶಿವ, ಸಚಿನ್‌

Published:
Updated:

ಬದ್ದಿ, ಹಿಮಾಚಲ ಪ್ರದೇಶ: ಶಿವ ಥಾಪಾ ಹಾಗೂ ಸಚಿನ್‌ ಸಿವಾಚ್‌ ರಾಷ್ಟ್ರೀಯ ಎಲೀಟ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ಫೈನಲ್‌ಗೆ ಕಾಲಿಟ್ಟಿದ್ದಾರೆ.

ರೈಲ್ವೇಸ್‌ ತಂಡದ ಸಚಿನ್‌ 57 ಕೆಜಿ ವಿಭಾಗದ ಪಂದ್ಯದಲ್ಲಿ ಪಂಜಾಬ್‌ನ ಸಾಗರ್‌ ಚಾಂದ್‌ ಎದುರು 5–0ಯಿಂದ ಗೆದ್ದರೆ, ಅಸ್ಸಾಂನ ಶಿವ (63 ಕೆಜಿ) ಕೂಡ ಹೋದ ಆವೃತ್ತಿಯ ಬೆಳ್ಳಿ ಪದಕ ವಿಜೇತ  ಉತ್ತರ ಪ್ರದೇಶದ ಅಭಿಷೇಕ್‌ ಯಾದವ್‌ ವಿರುದ್ಧ ಏಕಪಕ್ಷೀಯ ಜಯ ಸಾಧಿಸಿದರು.

ಫೈನಲ್‌ ಪಂದ್ಯದಲ್ಲಿ ಶಿವ ಅವರು ಸರ್ವೀಸಸ್‌ನ ಆಕಾಶ್‌ ಎದುರು ಸ್ಪರ್ಧಿಸುವರು. ಆಕಾಶ್‌ ಅಂಕುಶ್‌ ದಹಿಯಾ ಅವರನ್ನು 3–2ರಿಂದ ಮಣಿಸಿ ಫೈನಲ್‌ ತಲುಪಿದರು.

ಬಾಂಟಮ್‌ವೇಟ್ ವಿಭಾಗದ ಸೆಮಿಫೈನಲ್‌ನಲ್ಲಿ ಕಾಮನ್‌ವೆಲ್ತ್‌ ಗೇಮ್ಸ್‌ ಕಂಚು ವಿಜೇತ ಮೊಹಮ್ಮದ್‌ ಹುಸ್ಸಾಮುದ್ದೀನ್‌ ಅವರು ರಾಜಸ್ತಾನದ ರೋಷನ್‌ ಸೇನ್‌ ಎದುರು 5–0ಯಿಂದ ಗೆದ್ದರು. ಸರ್ವೀಸಸ್‌ನ ಹುಸ್ಸಾಮುದ್ದೀನ್‌ ಅವರು ಸಚಿನ್‌ ಅವರನ್ನು ಫೈನಲ್‌ನಲ್ಲಿ ಎದುರಿಸುವರು.

ಸರ್ವೀಸಸ್‌ನ ಎಂಟು ಮತ್ತು ರೈಲ್ವೇಸ್‌ ತಂಡದ ಐವರು ಬಾಕ್ಸರ್‌ಗಳು ಫೈನಲ್‌ ಪ್ರವೇಶಿಸಿದ್ದಾರೆ.

ಸರ್ವೀಸಸ್‌ ತಂಡ ಹೋದ ವರ್ಷದ ಆವೃತ್ತಿಯಲ್ಲಿ 8 ಚಿನ್ನದ ಪದಕಗಳನ್ನು ಗಳಿಸಿ ಅಗ್ರಸ್ಥಾನ ಅಲಂಕರಿಸಿತ್ತು. ಈ ಬಾರಿಯೂ ಅದೇ ರೀತಿಯ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ. 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)