ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಡ್‌ನೈಟ್‌ ಮ್ಯಾರಥಾನ್ 7ರಂದು

Last Updated 27 ನವೆಂಬರ್ 2019, 20:21 IST
ಅಕ್ಷರ ಗಾತ್ರ

ಬೆಂಗಳೂರು: ಮಿಡ್‍ನೈಟ್ ಮ್ಯಾರಥಾನ್‍ 13ನೇ ಆವೃತ್ತಿಯ ಸ್ಪರ್ಧೆಗಳು ಡಿಸೆಂಬರ್ 7ರಂದು ನಡೆಯಲಿವೆ. ವೈಟ್‌ಫೀಲ್ಡ್‌ನ ಕೆಟಿಪಿಒದಲ್ಲಿ ನಡೆಯಲಿರುವ ಮ್ಯಾರಥಾನ್‌ನ ವಿವರ ಮತ್ತು ಧ್ಯೇಯವಾಕ್ಯವನ್ನು ಬುಧವಾರ ನಗರದಲ್ಲಿ ಬಿಡುಗಡೆ ಮಾಡಲಾಯಿತು.

ಸಂಜೆ 6.30ಕ್ಕೆ 5-ಕೆ ಓಟದ ಮೂಲಕ ಸ್ಪರ್ಧೆಗಳು ಆರಂಭಗೊಳ್ಳಲಿದ್ದು ರಾತ್ರಿ 11ಕ್ಕೆ ಫಿಟ್‍ನೆಸ್ ಸ್ಟಾರ್ಟಪ್ ರಿಲೆಯೊಂದಿಗೆ ಮುಕ್ತಾಯಗೊಳ್ಳಲಿವೆ. ಅರ್ಧ ಮ್ಯಾರಥಾನ್ ಮತ್ತು ಮ್ಯಾರಥಾನ್‌ನಲ್ಲಿ 500ಕ್ಕೂ ಹೆಚ್ಚು ಸೈನಿಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಲಾಗಿದ್ದು ’ಡಿಜಿಟಲ್ ಇಂಡಿಯಾಗಾಗಿ ಓಟ’ ಎಂಬ ಧ್ಯೇಯವಾಕ್ಯವನ್ನು ಈ ಬಾರಿ ಆಯ್ಕೆ ಮಾಡಲಾಗಿದೆ ಎಂದು ವಿವರಿಸಲಾಗಿದೆ.

‘ವೃತ್ತಿಪರ ಓಟಗಾರರು, ಅಂತರರಾಷ್ಟ್ರೀಯ ಅಥ್ಲೀಟ್‍ಗಳು, ಕ್ರೀಡಾ ಪ್ರೋತ್ಸಾಹಕರು, ವಿವಿಧ ಕಂಪನಿಗಳ ಪ್ರತಿನಿಧಿಗಳು ಹಾಗೂ ಎನ್‍ಜಿಒ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಈ ವರೆಗೆ 2500ಕ್ಕೂ ಹೆಚ್ಚು ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಆಸಕ್ತರು www.midnightmarathon.inಗೆ ಲಾಗಿನ್ ಆಗಬಹುದು’ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT