ಮಿನಿ ವಾಲಿಬಾಲ್: ಕರ್ನಾಟಕಕ್ಕೆ ಜಯ

ಸೋಮವಾರ, ಮೇ 27, 2019
33 °C

ಮಿನಿ ವಾಲಿಬಾಲ್: ಕರ್ನಾಟಕಕ್ಕೆ ಜಯ

Published:
Updated:

ಶಿರಡಿ: ಕರ್ನಾಟಕ ಬಾಲಕರ ತಂಡವು ಇಲ್ಲಿ ನಡೆಯುತ್ತಿರುವ 27ನೇ ರಾಷ್ಟ್ರೀಯ ಮಿನಿ ವಾಲಿಬಾಲ್ ಟೂರ್ನಿಯಲ್ಲಿ ದೆಹಲಿ ವಿರುದ್ಧ ಜಯಿಸಿತು.

ಮಂಗಳವಾರ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡವು 25-20, 25-17, 25-17ರಿಂದ ದೆಹಲಿ ವಿರುದ್ಧ ಜಯಿಸಿತು. ರಾಜ್ಯ ತಂಡಕ್ಕೆ ಒಲಿದ ಎರಡನೇ ಜಯ ಇದಾಗಿದೆ.

ಇನ್ನೊಂದು ಪಂದ್ಯದಲ್ಲಿ ಕರ್ನಾಟಕ ತಂಡವು 25–22, 25–21, 26–16ರಿಂದ ಛತ್ತೀಸಗಡದ ವಿರುದ್ಧ ಗೆದ್ದಿತು. ಮತ್ತೊಂದು ಪಂದ್ಯದಲ್ಲಿ ತಮಿಳುನಾಡು ತಂಡವು 19-25, 25-12, 25-17, 21-25, 15-07ರಿಂದ ಕರ್ನಾಟಕವನ್ನು ಸೋಲಿಸಿತು.

ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ತಂಡವು 25–15, 25–18, 25–17ರಿಂದ ಜಮ್ಮು–ಕಾಶ್ಮೀರ್ ವಿರುದ್ಧ ಜಯಿಸಿತು. ಇನ್ನೊಂದು ಪಂದ್ಯದಲ್ಲಿ ಪಶ್ಚಿಮ ಬಂಗಾಳವು 25–11, 25–6, 25–15ರಿಂದ  ಕರ್ನಾಟಕದ ವಿರುದ್ಧ ಜಯಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !