ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಥುನ್, ರಘು ಮುನ್ನಡೆ

ಇನ್ಫೋಸಿಸ್ ಫೌಂಡೇಷನ್ ಇಂಡಿಯನ್ ಇಂಟರ್‌ನ್ಯಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್
Last Updated 21 ಅಕ್ಟೋಬರ್ 2021, 18:00 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯರ ವಿಭಾಗದಲ್ಲಿ ಕರ್ನಾಟಕದ ಆರು ಮತ್ತು ಪುರುಷರ ವಿಭಾಗದಲ್ಲಿ ಮೂವರು ಆಟಗಾರರು ಇಲ್ಲಿ ನಡೆಯುತ್ತಿರುವ ಇನ್ಫೋಸಿಸ್ ಫೌಂಡೇಷನ್ ಇಂಡಿಯನ್ – ಇಂಟರ್‌ನ್ಯಾಷನಲ್ ಚಾಲೆಂಜ್ ಬ್ಯಾಡ್ಮಿಂಟ್ ಟೂರ್ನಿಯಲ್ಲಿ ಮುನ್ನಡೆ ಸಾಧಿಸಿದರು.

ಪ್ರಕಾಶ್ ಪಡುಕೋಣೆ ಅಕಾಡೆಮಿಯ ಆಶ್ರಯದಲ್ಲಿ ಪಡುಕೋಣೆ–ದ್ರಾವಿಡ್ ಸ್ಪೋರ್ಟ್ಸ್‌ ಎಕ್ಸ್‌ಲೆನ್ಸ್‌ ಸೆಂಟರ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಗುರುವಾರ ಕರ್ನಾಟಕದ ಮಿಥುನ್ ಮಂಜುನಾಥ್ ಮತ್ತು ರಘು ಮರಿಸ್ವಾಮಿ ಪುರುಷರ ವಿಭಾಗದಲ್ಲಿ ಮುನ್ನಡೆ ಸಾಧಿಸಿದ ಪ್ರಮುಖರು.

ಫಲಿತಾಂಶಗಳು:

ಮೊದಲ ಸುತ್ತು: ಪುರುಷರು: ಕರ್ನಾಟಕದ ರಘು ಮರಿಸ್ವಾಮಿ 19–21, 21–16, 21–19ರಿಂದ ಅರುಣೇಶ್ ಹರಿ ವಿರುದ್ಧ; ಕರ್ನಾಟಕದ ಮಿಥುನ್ ಮಂಜುನಾಥ್ 21–5, 21–14 ರಿಂದ ಗೋಪಾಲಕೃಷ್ಣರೆಡ್ಡಿ ದುಂಡಿ ವಿರುದ್ಧ; ಎಸ್. ಭಾರ್ಗವ್ 21–14, 21–17ರಿಂದ ಹೇಮಂತ್ ಗೌಡ ಎದುರು ಜಯಿಸಿದರು.

ಮಹಿಳೆಯರ ಸಿಂಗಲ್ಸ್: ಕರ್ನಾಟಕದ ಆಕರ್ಷಿ ಕಶ್ಯಪ್ 21–19, 21–15ರಿಂದ ಮೇಧಾ ಶಶಿಧರನ್ ವಿರುದ್ಧ; ಕರ್ನಾಟಕದ ಶೀತಲ್ ದಿವಾಕರ್ 21–9, 21–15ರಿಂದ ವಿಭಾ ಮರಳೂರು ಎದುರು; ಕವಿಪ್ರಿಯಾ ಸೆಲ್ವಂ 21–17, 21–18ರಿಂದ ಕರ್ನಾಟಕದ ಗಾಯತ್ರಿ ರಾಣಿ ಜೈಸ್ವಾಲ್ ಎದುರು; ಶಿವಾನಿ ಆಂಜೆಲಿನಾ ಪಾಥಿ 21–16, 22–20ರಿಂದ ಅಖಿಲಾ ಆನಂದ್ ಎದುರು; ಧ್ರುತಿ ಯತೀಶ್ 21–13, 21–11ರಿಂದ ಶಿವಾನಿ ವೈಷ್ಣವಿ ದೇವಿ ವಿರುದ್ಧ; ವಿಜೇತಾ ಹರೀಶ್ 22–20, 21–13ರಿಂದ ಅನುರಾ ಪ್ರಭುದೇಸಾಯಿ ಎದುರೂ; ಕೀರ್ತಿ ಭಾರದ್ವಾಜ್ 21–17, 21–16ರಿಂದ ಶ್ರೀಲಂಕಾದ ರಾಣಿತಮಾ್ ಲಿಯಾಂಗೆ ವಿರುದ್ಧ; ರಶ್ಮಿ ಗಣೇಶ್ 19–21, 21–8, 21–12ರಿಂದ ರುದ್ರಾಣಿ ಗಣೇಶ್ ವಿರುದ್ಧವೂ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT