ಮಂಗಳೂರಿನಲ್ಲಿ ಮುಯ್‌ಥಾಯ್‌ ಚಾಂಪಿಯನ್‌ಷಿಪ್‌ ನಾಳೆ

7

ಮಂಗಳೂರಿನಲ್ಲಿ ಮುಯ್‌ಥಾಯ್‌ ಚಾಂಪಿಯನ್‌ಷಿಪ್‌ ನಾಳೆ

Published:
Updated:

ಮಂಗಳೂರು: ಕರ್ನಾಟಕ ರಾಜ್ಯ ಮುಯ್‌ಥಾಯ್‌ ಅಸೋಸಿಯೇಷನ್‌ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮುಯ್‌ಥಾಯ್‌ ಅಸೋಸಿಯೇಷನ್‌ ಸಹಭಾಗಿತ್ವದಲ್ಲಿ ಇದೇ 7ರಂದು ನಗರದ ಆಫೀಸರ್ಸ್‌ ಕ್ಲಬ್‌ನಲ್ಲಿ ರಾಜ್ಯ ಮುಯ್‌ಥಾಯ್‌ ಚಾಂಪಿಯನ್‌ಷಿಪ್‌ ನಡೆಯಲಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ರಾಜ್ಯ ಮುಯ್‌ಥಾಯ್‌ ಅಸೋಸಿಯೇಷನ್‌ ಅಧ್ಯಕ್ಷ ರಾಜಗೋಪಾಲ್ ರೈ, ‘19 ವರ್ಷದ ಒಳಗಿನ ಮತ್ತು ನಂತರದ ಎರಡು ವರ್ಗಗಳಲ್ಲಿ ಪಂದ್ಯಾವಳಿ ನಡೆಯಲಿದೆ. ಕ್ರೀಡಾಪಟುಗಳ ತೂಕದ ಆಧಾರದಲ್ಲಿ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ಇದೆ. ರಾಜ್ಯದಲ್ಲಿ ಮುಯ್‌ಥಾಯ್‌ ಕ್ರೀಡೆಯ ತರಬೇತಿ ನೀಡುತ್ತಿರುವ 25 ಕ್ಲಬ್‌ಗಳಿವೆ.
100ಕ್ಕೂ ಹೆಚ್ಚು ಪಟುಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದರು.

ಈ ಪಂದ್ಯಾವಳಿಯು ನವೆಂಬರ್‌ 14ರಿಂದ 18ರವರೆಗೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆಯುವ ರಾಷ್ಟ್ರೀಯ ಮುಯ್‌ಥಾಯ್‌ ಚಾಂಪಿಯನ್‌ಷಿಪ್‌ ಮತ್ತು 2019ರ ಫೆಬ್ರುವರಿ 7ರಿಂದ 14ರವರೆಗೆ ಮಂಗಳೂರಿನಲ್ಲಿ ನಡೆಯುವ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಗೆ ಅರ್ಹತಾ ಸುತ್ತು ಇದ್ದಂತೆ. ರಾಜ್ಯ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಸ್ಥಾನ ಪಡೆದವರು ರಾಷ್ಟ್ರೀಯ ಸ್ಪರ್ಧೆಗೆ ಅರ್ಹತೆ ಪಡೆಯುತ್ತಾರೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !