ಭಾನುವಾರ, ಸೆಪ್ಟೆಂಬರ್ 22, 2019
27 °C
100 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ ಚಿನ್ನದ ಸಾಧನೆ ಮಾಡಿದ ಶ್ರೀಹರಿ ನಟರಾಜ್

ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌: ಕರ್ನಾಟಕಕ್ಕೆ ಚಾಂಪಿಯನ್ ಪಟ್ಟ

Published:
Updated:
Prajavani

ಭೋಪಾಲ್‌: ಕರ್ನಾಟಕದ ಶ್ರೀಹರಿ ನಟರಾಜ್ ಮತ್ತೊಂದು ದಾಖಲೆಯ ಸಂಭ್ರಮದ ಅಲೆಯಲ್ಲಿ ಮಿಂದರು; ಚಿನ್ನ ಗಳಿಸಿ ಮಿಂಚಿದರು. ಇಲ್ಲಿ ಬುಧವಾರ ಕೊನೆಗೊಂಡ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನ 100 ಮೀಟರ್ಸ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಅವರು ಕೂಟ ದಾಖಲೆಯೊಂದಿಗೆ ಮೊದಲಿಗರಾದರು. ಈ ಮೂಲಕ ತಮ್ಮದೇ ಸಾಧನೆಯನ್ನು ಉತ್ತಮಪಡಿಸಿಕೊಂಡರು.

ಕಳೆದ ವರ್ಷ ತಿರುವನಂತಪುರದಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲಿ ಶ್ರೀಹರಿ 56.53 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು. ಬುಧವಾರ 55.63 ಸೆಕೆಂಡುಗಳಲ್ಲಿ ಅಂತಿಮ ಸ್ಪರ್ಧೆ ಮುಗಿಸಿದರು. ಎಸ್‌ಎಸ್‌ಸಿಬಿಯ ಮಧು ಪಿ.ಎಸ್ ಮತ್ತು ಕರ್ನಾಟಕದ ರಕ್ಷಿತ್ ಯು.ಶೆಟ್ಟಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಮಹಿಳೆಯರ 800 ಮೀಟರ್ಸ್‌ ಫ್ರೀಸ್ಟೈಲ್‌ನಲ್ಲಿ ಪೊಲೀಸ್‌ನ ರಿಚಾ ಮಿಶ್ರಾ 9 ನಿಮಿಷ 22.50 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನ ಗೆದ್ದರು. ಆದರೆ ತಮ್ಮದೇ ಹೆಸರಿನಲ್ಲಿದ್ದ ದಾಖಲೆಯನ್ನು (9:6.31) ಹಿಂದಿಕ್ಕಲು ಅವರಿಗೆ ಸಾಧ್ಯವಾಗಲಿಲ್ಲ. ಎರಡು ಸೆಕೆಂಡುಗಳ ಅಂತರದಲ್ಲಿ ಗುರಿ ಮುಟ್ಟಿದ ಕರ್ನಾಟಕದ ಖುಷಿ ದಿನೇಶ್ ಬೆಳ್ಳಿಗೆ ತೃಪ್ತಿಪಟ್ಟುಕೊಂಡರು.

ಕೊನೆಯ ದಿನದ ಫಲಿತಾಂಶಗಳು: ಪುರುಷರ 100 ಮೀ ಬ್ಯಾಕ್‌ಸ್ಟ್ರೋಕ್‌: ಶ್ರೀಹರಿ ನಟರಾಜ್‌ (ಕರ್ನಾಟಕ)–1. ಕಾಲ: 55.63 ಸೆ (ಕೂಟ ದಾಖಲೆ), ಮಧು ಪಿ.ಎಸ್‌ (ಎಸ್‌ಎಸ್‌ಸಿಬಿ)–2, ರಕ್ಷಿತ್ ಯು.ಶೆಟ್ಟಿ (ಕರ್ನಾಟಕ)–3; 100 ಮೀ ಬ್ರೆಸ್ಟ್‌ ಸ್ಟ್ರೋಕ್‌: ಲಿಖಿತ್ ಎಸ್‌.ಪಿ (ಕರ್ನಾಟಕ)–1. ಕಾಲ: 1ನಿಮಿಷ 2.69 ಸೆ, ಧನುಷ್ ಎಸ್‌ (ತಮಿಳುನಾಡು)–2, ಎಂ.ಲೋಹಿತ್‌ (ಆರ್‌ಎಸ್‌ಪಿಬಿ)–3; 200 ಮೀ ಫ್ರೀಸ್ಟೈಲ್‌: ಕುಶಾಗ್ರ ರಾವತ್ (ದೆಹಲಿ)–1. ಕಾಲ: 1ನಿಮಿಷ 53.44 ಸೆಕೆಂಡು, ಆನಂದ್ ಎ.ಎಸ್‌ (ಎಸ್‌ಎಸ್‌ಸಿಬಿ)–1, ಆ್ಯರನ್ ಫರ್ನಾಂಡಿಸ್‌ (ಮಹಾರಾಷ್ಟ್ರ)–3; 200 ಮೀ ಬಟರ್‌ಫ್ಲೈ: ಸಾಜನ್ ಪ್ರಕಾಶ್‌ (ಪೊಲೀಸ್‌)–1. ಕಾಲ: 2ನಿ, 00.13ಸೆ, ಸುಪ್ರಿಯಾ ಮೊಂಡಲ್‌ (ಆರ್‌ಎಸ್‌ಪಿಬಿ)–2, ತನಿಶ್‌ ಜಾರ್ಜ್‌ ಮ್ಯಾಥ್ಯೂ (ಕರ್ನಾಟಕ)–3.

ಮಹಿಳೆಯರ ವಿಭಾಗ: 100 ಮೀ ಫ್ರೀಸ್ಟೈಲ್‌: ಕೆನಿಶಾ ಗುಪ್ತಾ (ಮಹಾರಾಷ್ಟ್ರ)–1. ಕಾಲ: 58.26 ಸೆ (ಕೂಟ ದಾಖಲೆ; ಹಿಂದಿನ ದಾಖಲೆ ಶಿವಾನಿ ಕಟಾರಿಯಾ ಹರಿಯಾಣ, 2017 ಕಾಲ:58.51ಸೆ), ಶಿವಾನಿ ಕಟಾರಿಯಾ (ಹರಿಯಾಣ)–2, ಸಾಧ್ವಿ ದುರಿ (ಮಹಾರಾಷ್ಟ್ರ)–3; 100 ಮೀ ಬ್ರೆಸ್ಟ್‌ ಸ್ಟ್ರೋಕ್‌: ಕರೀನಾ ಶಂಗ್ತ (ಮಹಾರಾಷ್ಟ್ರ)–1. ಕಾಲ: 1 ನಿಮಿಷ 14.97 ಸೆ, ಸಲೋನಿ ದಲಾಲ್ (ಕರ್ನಾಟಕ)–2, ಚಾಹತ್ ಅರೋರ (ಪಂಜಾಬ್‌)–3; 100 ಮೀ ಬ್ಯಾಕ್‌ಸ್ಟ್ರೋಕ್‌: ರಿಧಿಮಾ ಕುಮಾರ್‌ (ಕರ್ನಾಟಕ)–1. ಕಾಲ: 1ನಿ7.19ಸೆ, ಸುವನಾ ಭಾಸ್ಕರ್ (ಕರ್ನಾಟಕ)–2, ಸೌಬೃತಿ ಮೊಂಡಲ್‌ (ಪಶ್ಚಿಮ ಬಂಗಾಳ)–3; 200 ಮೀ ಬಟರ್‌ಫ್ಲೈ: ಅಪೇಕ್ಷಾ ಫರ್ನಾಂಡಿಸ್‌ (ಮಹಾರಾಷ್ಟ್ರ)–1. ಕಾಲ: 2ನಿ23.17ಸೆ, ಅನ್ವೇಷಾ ಗಿರೀಶ್ (ಕರ್ನಾಟಕ)–2, ಶಕ್ತಿ ಬಿ (ತಮಿಳುನಾಡು)–3; 800 ಮೀ ಫ್ರೀಸ್ಟೈಲ್‌: ರಿಚಾ ಮಿಶ್ರಾ (ಪೊಲೀಸ್)–1. ಕಾಲ: 9 ನಿಮಿಷ 22.50, ಖುಷಿ ದಿನೇಶ್‌ (ಕರ್ನಾಟಕ)–2, ಭವ್ಯಾ ಸಚ್‌ದೇವ್‌ (ದೆಹಲಿ)–3.

Post Comments (+)