ಗುರುವಾರ , ಅಕ್ಟೋಬರ್ 24, 2019
21 °C

ಬಾಕ್ಸಿಂಗ್‌: ಆಶಿಶ್‌ಗೆ ಆಘಾತ ನೀಡಿದ ರೋಹಿತ್‌

Published:
Updated:

ಬದ್ದಿ, ಹಿಮಾಚಲ ಪ್ರದೇಶ: ಆಶಿಶ್‌ ಕುಮಾರ್‌ಗೆ ಆಘಾತ ನೀಡಿದ ರೋಹಿತ್‌ ಟೋಕಸ್‌, ರಾಷ್ಟ್ರೀಯ ಪುರುಷರ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಮಂಗಳವಾರ ನಡೆದ 75 ಕೆ.ಜಿ.ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ರೋಹಿತ್‌ 4–1 ಪಾಯಿಂಟ್ಸ್‌ನಿಂದ ಗೆದ್ದರು. ಆಶಿಶ್‌ ಅವರು ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕ ಜಯಿಸಿದ್ದರು.

63 ಕೆ.ಜಿ.ವಿಭಾಗದಲ್ಲಿ ರಿಂಗ್‌ಗೆ ಇಳಿದಿದ್ದ ಶಿವ ಥಾಪಾ ನಾಲ್ಕರ ಘಟ್ಟ ಪ್ರವೇಶಿಸಿದರು. ಕ್ವಾರ್ಟರ್‌ ಫೈನಲ್‌ನಲ್ಲಿ ಶಿವ 4–0 ಪಾಯಿಂಟ್ಸ್‌ನಿಂದ ನವದೆಹಲಿಯ ಯೋಗೇಶ್‌ ಟೋಕಸ್‌ ಅವರನ್ನು ಸೋಲಿಸಿದರು.

57 ಕೆ.ಜಿ.ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಸಚಿನ್‌ ಸಿವಾಚ್‌ 5–0ರಲ್ಲಿ ತೆಲಂಗಾಣದ ಮೈಕಲ್‌ ಡಾಮಿನಿಕ್‌ ಅವರನ್ನು ಮಣಿಸಿದರು. ಸಚಿನ್‌ ಅವರು 2016ರಲ್ಲಿ ನಡೆದಿದ್ದ ವಿಶ್ವ ಯೂತ್‌ ಬಾಕ್ಸಿಂಗ್‌ ಚಾಂ‍ಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)