ಶುಕ್ರವಾರ, ನವೆಂಬರ್ 22, 2019
26 °C
ಗುಂಟೂರಿನಲ್ಲಿ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್‌; ತೆಲಂಗಾಣದ ಮಹೇಶ್ವರಿ ದಾಖಲೆ

ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್‌: ಕರ್ನಾಟಕದ ರಮ್ಯಶ್ರೀಗೆ ಬೆಳ್ಳಿ

Published:
Updated:

ಗುಂಟೂರು: ಕರ್ನಾಟಕದ  ರಮ್ಯಶ್ರೀ ಜೈನ್ ಇಲ್ಲಿ ನಡೆಯುತ್ತಿರುವ 35ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ  16 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರು.

ಬುಧವಾರ ನಡೆದ  ಬಾಲಕಿಯರ ಜಾವೆಲಿನ್ ಸ್ಪರ್ಧೆಯಲ್ಲಿ ಅವರು 41.33 ಮೀಟರ್ಸ್‌ ದೂರಕ್ಕೆ ಜಾವೆಲಿನ್ ಎಸೆದು ಎರಡನೇ ಸ್ಥಾನ ಪಡೆದುಕೊಂಡರು. ಉತ್ತರ ಪ್ರದೇಶದ ಪ್ರತೀಕ್ಷಾ ಪಟೇಲ್ ಅವರು 43.08 ಮೀಟರ್ಸ್‌ ಜಾವೆಲಿನ್ ಎಸೆದು ಮೊದಲ ಸ್ಥಾನ ಗಳಿಸಿದರು. ನೂತನ ಕೂಟ ದಾಖಲೆಯನ್ನೂ ಮಾಡಿದರು. 2017ರಲ್ಲಿ ಜ್ಯೋತಿ (41.24 ಮೀ) ಮಾಡಿದ್ದ ದಾಖಲೆಯನ್ನು ಅವರು ಮೀರಿದರು. ರಮ್ಯಶ್ರೀ ಕೂಡ ಜ್ಯೋತಿಗಿಂತ ಹೆಚ್ಚಿನ ಸಾಧನೆಯನ್ನು ಮಾಡಿದರು.

20 ವರ್ಷದೊಳಗಿನ ಬಾಲಕಿಯರ 3000 ಮೀ ಸ್ಟೀಪಲ್‌ಚೇಸ್ ವಿಭಾಗದಲ್ಲಿ ತೆಲಂಗಾಣದ ಜಿ. ಮಹೇಶ್ವರಿ  ತಮ್ಮ ದಾಖಲೆಯನ್ನು ಬರೆದರು. ಅವರು (10ನಿ,34.10ಸೆ)  ಹೋದ ಸಲಕ್ಕಿಂತ ವೇಗವಾಗಿ ಗುರಿ ಮುಟ್ಟಿದರು. 2017ರಲ್ಲಿ ಲಖನೌನಲ್ಲಿ ನಡೆದಿದ್ದ ಕೂಟದಲ್ಲಿ ನಂದಿನಿ ಗುಪ್ತಾ (10ನಿ,53.91ಸೆ) ಅವರ ದಾಖಲೆಯನ್ನು ಮಹೇಶ್ವರಿ ಮುರಿದರು.

ಬಾಲಕರ 20 ವರ್ಷದೊಳಗಿನವರ ಟ್ರಿಪಲ್ ಜಂಪ್ ವಿಭಾಗದಲ್ಲಿ ತಮಿಳುನಾಡಿನ ಪ್ರವೀಣ ಚತುರ್ವೇದಿ ಚಿನ್ನದ ಪದಕ ಗೆದ್ದರು. ತಮ್ಮ ಅಂತಿಮ ಜಂಪ್‌ನಲ್ಲಿ ಅವರು 15.84 ಮೀಟರ್ಸ್‌ ಜಿಗಿದರು. ತಮ್ಮ ಮೊದಲ ಐದು ಜಿಗಿತಗಳಿಗಿಂತಲೂ ಉತ್ತಮ ಸಾಧನೆ ಮಾಡಿ ಚಿನ್ನಕ್ಕೆ ಕೊರಳೊಡ್ಡಿದರು. ಆಂಧ್ರಪ್ರದೇಶದ ಗೇಲಿ ವೆನಿಸ್ಟರ್ ಮತ್ತು ತಮಿಳುನಾಡಿನ ಇ. ಅರವಿಂತ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದರು.

ಪ್ರತಿಕ್ರಿಯಿಸಿ (+)