ಭಾನುವಾರ, ಏಪ್ರಿಲ್ 2, 2023
33 °C
ಬೆಂಗಳೂರಿನಲ್ಲಿ ಇಂದಿನಿಂದ

ರಾಷ್ಟ್ರೀಯ ಜೂನಿಯರ್‌ ಬ್ಯಾಸ್ಕೆಟ್‌ಬಾಲ್: ಆತ್ಮವಿಶ್ವಾಸದಲ್ಲಿ ಕರ್ನಾಟಕ ತಂಡಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆತಿಥೇಯ ಕರ್ನಾಟಕ ತಂಡಗಳು ಶನಿವಾರ ಇಲ್ಲಿ ಆರಂಭವಾಗಲಿರುವ 72ನೇ ರಾಷ್ಟ್ರೀಯ ಜೂನಿಯರ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿವೆ.

ಕರ್ನಾಟಕ ಬ್ಯಾಸ್ಕೆಟ್‌ಬಾಲ್‌ ಸಂಸ್ಥೆಯು (ಕೆಬಿಎ) ಭಾರತ ಬ್ಯಾಸ್ಕೆಟ್‌ ಬಾಲ್‌ ಫೆಡರೇಷನ್‌ (ಬಿಎಫ್‌ಐ) ಸಹಯೋಗದಲ್ಲಿ ಆಯೋಜಿಸಿರುವ ಟೂರ್ನಿಯ ಪಂದ್ಯಗಳು ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. 

ಜನವರಿ 27ರ ವರೆಗೆ ನಡೆಯುವ ಟೂರ್ನಿಯಲ್ಲಿ ಬಾಲಕ ಮತ್ತು ಬಾಲಕಿ ಯರ ವಿಭಾಗದಲ್ಲಿ ತಲಾ 16 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

ಶನಿವಾರ ನಡೆಯುವ ಮೊದಲ ಪಂದ್ಯದಲ್ಲಿ ಆತಿಥೇಯ ಬಾಲಕರು ಮಣಿ ಪುರ ತಂಡವನ್ನು ಹಾಗೂ ಬಾಲಕಿಯರು ಆಂಧ್ರ ತಂಡವನ್ನು ಎದುರಿಸಲಿದ್ದಾರೆ.

‘ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಸುಮಾರು 400 ಸ್ಪರ್ಧಿಗಳು, 80 ಕೋಚ್‌ಗಳು ಮತ್ತು 50 ತಾಂತ್ರಿಕ ಅಧಿಕಾರಿಗಳು ಪಾಲ್ಗೊಳ್ಳುವರು’ ಎಂದು ಕೆಬಿಎ ಉಪಾಧ್ಯಕ್ಷ ಆರ್‌.ರಾಜನ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಿಎಫ್‌ಐ ತಾಂತ್ರಿಕ ಸಮಿತಿ ಮುಖ್ಯಸ್ಥ ನಾರ್ಮನ್‌ ಐಸಾಕ್, ಕೆಬಿಎ ಪದಾಧಿಕಾರಿಗಳಾದ ಎಸ್‌.ಗುಣಶೇಖರ, ಆರ್‌.ಪ್ರಕಾಶ್‌, ಎಚ್‌.ಶ್ರೀನಿವಾಸಮೂರ್ತಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಕರ್ನಾಟಕ ತಂಡಗಳು
ಬಾಲಕರು:
ಎಸ್‌.ಸಂಕೇತ್‌, ಎಂ.ಅಮರ್ತ್ಯ, ನಿಹಾಲ್, ಎಂ.ಬಿ.ಶಶಾಂಕ್‌ ಗೌಡ, ಪ್ರಿಯಾನ್ಶು, ಅವಿನಾಶ್‌ ನಾಯಕ್, ಎನ್‌.ಎಂ.ವಿಷ್ಣು, ಆರ್‌.ನಿತಿನ್‌ ಕುಮಾರ್, ಕುಶಾಲ್‌ ಗೌಡ, ಗೋಸ್ವಾಮಿ ಶಿವಂ, ಎಸ್‌.ಭುವನ್, ಕೆ.ಲಿಂಗೇಶ್. ಕೋಚ್‌: ಉಮಾಶಂಕರ್, ಮ್ಯಾನೇಜರ್‌: ಗುಣಶೇಖರ್‌

ಬಾಲಕಿಯರು: ನಿಹಾರಿಕಾ ರೆಡ್ಡಿ, ಮೇಖಲಾ ಗೌಡ, ಆದ್ಯಾ ಪಿ. ಐತಾಳ್, ಹನಾ ಬಾಬಿ ಜೇಕಬ್‌, ಆದ್ಯಾ ನಾಗಲಿಂಗ, ಆದ್ಯಾ ಗೌಡ, ಐಶ್ವರ್ಯಾ ಎಸ್‌., ಅದಿತಿ ನಾಗರಾಜನ್, ಎಂ.ಕೆ.ಯಶಸ್ವಿನಿ, ಪ್ರೀತಿ ಎಂ., ಪ್ರಿಯಾಂಕಾ, ಎನ್‌.ಖುಷಿ. ಕೋಚ್‌: ಕೆ.ಸತ್ಯನಾರಾಯಣ, ಮ್ಯಾನೇಜರ್‌: ಜೆ.ವಾಣಿಶ್ರೀ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು