ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್‌ಷಿಪ್‌: ದಾಖಲೆ ಬರೆದ ಹಷಿಕಾ, ರಿಧಿಮಾ

ತಂಡ ವಿಭಾಗದಲ್ಲೂ ಕರ್ನಾಟಕ ದಾಖಲೆ
Last Updated 16 ಜುಲೈ 2022, 18:29 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಹಷಿಕಾ ರಾಮಚಂದ್ರ ಮತ್ತು ರಿಧಿಮಾ ವೀರೇಂದ್ರ ಕುಮಾರ್ ಅವರು ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು.

ಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿರುವ ಕೂಟದ 12ರಿಂದ 14 ವರ್ಷದೊಳಗಿನವರ ಬಾಲಕಿಯರ 200 ಮೀ. ಫ್ರೀಸ್ಟೈಲ್‌ ವಿಭಾಗದಲ್ಲಿ ಹಷಿಕಾ 2 ನಿಮಿಷ 5.65 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಈ ಹಿಂದಿನ ದಾಖಲೆಭವ್ಯಾ ಸಚದೇವ್‌(ಕಾಲ: 2 ನಿ. 10.81ಸೆ.) ಅವರ ಹೆಸರಿನಲ್ಲಿತ್ತು.

15ರಿಂದ 17 ವರ್ಷದೊಳಗಿನವರ100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ರಿಧಿಮಾ 1 ನಿ. 4.96 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನಕ್ಕೆ ಮುತ್ತಿಟ್ಟರು. ಈ ಹಿಂದಿನ ಗುಜರಾತ್‌ನ ಮಾನಾ ಪಟೇಲ್‌ (ಕಾಲ: 1 ನಿ. 5ಸೆ.) ಅವರ ಹೆಸರಿನಲ್ಲಿತ್ತು.

ಫಲಿತಾಂಶಗಳು: ಬಾಲಕಿಯರು: 12-14 ವರ್ಷ: 200 ಮೀಟರ್ಸ್ ಫ್ರೀಸ್ಟೈಲ್‌: ಹಷಿಕಾ ರಾಮಚಂದ್ರ–1, ಕಾಲ:2 ನಿ. 5.65 ಸೆ. (ಕೂಟ ದಾಖಲೆ), ಧೀನಿಧಿ ದೇಸಿಂಗು–2 (ಇಬ್ಬರೂ ಕರ್ನಾಟಕ), ದೀಪ್ತಿ ತಿಲಕ್‌ (ಮಹಾರಾಷ್ಟ್ರ)–3. 100 ಮೀ. ಬ್ರೆಸ್ಟ್‌ಸ್ಟ್ರೋಕ್‌: ಮಾನವಿ ವರ್ಮಾ(ಕರ್ನಾಟಕ)–1, ಕಾಲ: 1 ನಿ. 16.82 ಸೆ. ವೇನಿಕಾ ಪಾರೀಖ್‌ (ಗುಜರಾತ್)–2, ವಿಹಿತಾ ನಯನಾ–3 (ಕರ್ನಾಟಕ). 15ರಿಂದ 17 ವರ್ಷ: 100 ಮೀ. ಬ್ರೆಸ್ಟ್‌ಸ್ಟ್ರೋಕ್‌: ಅಪೇಕ್ಷಾ ಫರ್ನಾಂಡೀಸ್‌ (ಮಹಾರಾಷ್ಟ್ರ)–1, ಕಾಲ: 1 ನಿ.12.83 ಸೆ. ಸಾನ್ವಿ ರಾವ್‌–2, ಎಸ್‌. ಲಾಕ್ಷ್ಯಾ–3 (ಇಬ್ಬರೂ ಕರ್ನಾಟಕ), 100 ಮೀ. ಬ್ಯಾಕ್‌ಸ್ಟ್ರೋಕ್‌: ರಿಧಿಮಾ ವೀರೇಂದ್ರ ಕುಮಾರ್ (ಕರ್ನಾಟಕ, ಕೂಟ ದಾಖಲೆ)–1, ಕಾಲ: 1 ನಿ. 4.96 ಸೆ. ಸಂಜನಾ ಪ್ರಭುಗಾಂವಕರ್(ಗೋವಾ)–2, ನೀನಾ ವೆಂಕಟೇಶ್ (ಕರ್ನಾಟಕ)–3.

ಬಾಲಕರು: 12ರಿಂದ 14 ವರ್ಷ: 100 ಮೀ. ಬ್ರೆಸ್ಟ್‌ಸ್ಟ್ರೋಕ್‌: ಆರ್‌. ನವನೀತ್ ಗೌಡ (ಕರ್ನಾಟಕ)–1, ಕಾಲ: 1 ನಿ.12.14 ಸೆ. ನಿತೀಶ್ ಎಂ.ಎಸ್‌. (ತಮಿಳುನಾಡು)–2, ಧೃವ ಸೆಜ್ವಾಲ್‌ (ದೆಹಲಿ)–3. 100 ಮೀ. ಬ್ಯಾಕ್‌ಸ್ಟ್ರೋಕ್‌: ಸುಹಾಸ್‌ ಪ್ರೀತಂ (ತೆಲಂಗಾಣ, ನೂತನ ದಾಖಲೆ)–1, ಕಾಲ: 1 ನಿ. 1.29 ಸೆ. ಇಶಾನ್ ಮೆಹ್ರಾ (ಕರ್ನಾಟಕ)–2, ಕ್ರಿಶ್ ಜೈನ್‌ (ಹರಿಯಾಣ)–3. 15ರಿಂದ 17 ವರ್ಷ: 100 ಮೀ. ಬ್ಯಾಕ್‌ಸ್ಟ್ರೋಕ್‌: ಉತ್ಕರ್ಷ್ ಪಾಟೀಲ್‌ (ಕರ್ನಾಟಕ)–1, ಕಾಲ: 57.78 ಸೆ. ಸಾಹಿಲ್ ಲಾಸ್ಕರ್ (ಬಂಗಾಳ)–2, ವಿಶೇಷ್ (ತಮಿಳುನಾಡು)–3

ತಂಡ ವಿಭಾಗ: ಬಾಲಕರ 4X100 ಮೀ. ಫ್ರೀಸ್ಟೈಲ್:15ರಿಂದ 17 ವರ್ಷದೊಳಗಿನ ವಿಭಾಗ: ಮಹಾರಾಷ್ಟ್ರ–1, ಕಾಲ: 3 ನಿ. 37.64 ಸೆ., ಕರ್ನಾಟಕ–2, ತಮಿಳುನಾಡು–3. 12ರಿಂದ 14ರಿಂದ ವರ್ಷದೊಳಗಿನವರ ವಿಭಾಗ: ಕರ್ನಾಟಕ–1, ಕೂಟ ದಾಖಲೆ, ಕಾಲ: 3 ನಿ. 48.38 ಸೆ. ಅಸ್ಸಾಂ–2, ತೆಲಂಗಾಣ–3

ಬಾಲಕಿಯರು: 4X100 ಮೀ. ಫ್ರೀಸ್ಟೈಲ್: 15ರಿಂದ 17 ವರ್ಷ: ಮಹಾರಾಷ್ಟ್ರ–1, ಕೂಟ ದಾಖಲೆ, ಕಾಲ: 4 ನಿ. 1.76 ಸೆ. ಕರ್ನಾಟಕ–2, ಬಂಗಾಳ–3. 12ರಿಂದ 14 ವರ್ಷ: ಕರ್ನಾಟಕ–1, ಕೂಟ ದಾಖಲೆ, ಕಾಲ: 4 ನಿ.5.13 ಸೆ. ಮಹಾರಾಷ್ಟ್ರ–2, ತಮಿಳುನಾಡು–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT