ಭಾನುವಾರ, ಜುಲೈ 3, 2022
27 °C

ರಾಷ್ಟ್ರೀಯ ರೋಡ್ ಸೈಕ್ಲಿಂಗ್‌: ಕರ್ನಾಟಕ ತಂಡ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಂಬೈನಲ್ಲಿ ಇದೇ ಐದರಿಂದ ಎಂಟರವರೆಗೆ ನಡೆಯಲಿರುವ ರಾಷ್ಟ್ರೀಯ ಸೀನಿಯರ್, ಜೂನಿಯರ್ ಮತ್ತು ಸಬ್ ಜೂನಿಯರ್ ರೋಡ್ ಸೈಕ್ಲಿಂಗ್ ಚಾಂಪಿಯನ್‍ಷಿಪ್‍ಗೆ ರಾಜ್ಯ ತಂಡಗಳನ್ನು ಮಂಗಳವಾರ ಪ್ರಕಟಿಸಲಾಗಿದೆ.

22 ಬಾಲಕರು ಹಾಗೂ 15 ಬಾಲಕಿಯರನ್ನು ಒಳಗೊಂಡ ತಂಡ ಬುಧವಾರ ಪ್ರಯಾಣ ಬೆಳೆಸಲಿದೆ ಎಂದು ರಾಜ್ಯ ಅಮೆಚೂರ್ ಸೈಕ್ಲಿಂಗ್ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀಶೈಲ ಎಂ ಕುರಣಿ ತಿಳಿಸಿದ್ದಾರೆ.‌

ತಂಡಗಳು: ಪುರುಷ ಹಾಗೂ ಬಾಲಕರ ವಿಭಾಗ: ಸುಜಲ್‌ ಜಾಧವ್, ರಾಹುಲ್‌ ರಾಠೋಡ್‌, ಪ್ರತಾಪ ಪಡಚಿ, ಉದಯ ಗುಳೇದ, ಅನಿಲ ಕಾಳಪ್ಪಗೋಳ, ಮನೋಜ್‌ ಭಾಟಿ ಮತ್ತು ಶ್ರೀಶೈಲ ವೀರಾಪುರ (ಎಲ್ಲರೂ ವಿಜಯಪುರ ಕ್ರೀಡಾನಿಲಯ), ಸಂಪತ್‌ ಪಾಸಮೇಲ, ಮಲ್ಲಿಕಾರ್ಜುನ ಯಾದವಾಡ, (ಬಾಗಲಕೋಟೆ ಜಿಲ್ಲೆ), ನಿತೀಶ್‌ ಪೂಜಾರ, ವಿಶ್ವನಾಥ ಗಡಾದ, ಅಭಿಷೇಕ್‌ ಮರನೂರ, ಸಂತೋಷ ವಿಜಾಪುರ, ಗಣೇಶ ಕುಡಿಗಾನೂರ ಮತ್ತು ಯಲಗೂರಪ್ಪ ಗಡ್ಡಿ (ವಿಜಯಪುರ ಜಿಲ್ಲೆ), ನವೀನ್‌ ಜಾನ್, ನವೀನ್‌ ರಾಜ್, ಕಿರ‌ಣ್‌ ಕುಮಾರ್‌ ರಾಜು, ಗಗನ್‌ ರೆಡ್ಡಿ (ಬೆಂಗಳೂರು ಜಿಲ್ಲೆ), ವೈಶಾಖ ಕೆ.ವಿ (ಮೈಸೂರು ಜಿಲ್ಲೆ), ವಿನೋದ ಪಂಡ್ರಿ (ಗದಗ ಜಿಲ್ಲೆ) ಶೆಟ್ಟೆಪ್ಪ ಗಸ್ತಿ (ಬೆಳಗಾವಿ ಜಿಲ್ಲೆ); ಮ್ಯಾನೇಜರ್‌: ಬಸವರಾಜ ಗುಳೇದ, ಕೋಚ್‌: ಮುತ್ತಪ್ಪ ಮರನೂರ ಮತ್ತು ವಿಠ್ಠಲ ಬೋರ್ಜಿ.

ಮಹಿಳೆಯರು ಮತ್ತು ಬಾಲಕಿಯರ ವಿಭಾಗ: ಅಕ್ಷತಾ ಭೂತನಾಳ, (ವಿಜಯಪುರ ಜಿಲ್ಲೆ) ಪಾಯಲ್ ಚವ್ಹಾಣ, ಸೌಮ್ಯಾ ಅಂತಾಪುರ, ಕಾವೇರಿ ಮುರನಾಳ (ಎಲ್ಲರೂ ವಿಜಯಪುರ ಕ್ರೀಡಾ‌ನಿಲಯ), ಸವಿತಾ ಆಡಗಲ್, ನಂದಾ ಚಿಚಖಂಡಿ (ಬಾಗಲಕೋಟೆ ಕ್ರೀಡಾ ನಿಲಯ), ಕೀರ್ತಿ ರಂಗಸ್ವಾಮಿ (ಬೆಂಗಳೂರು ಜಿಲ್ಲೆ) ಅನುಪಮಾ ಗುಳೇದ, ವಿದ್ಯಾ ಯಾದವಾಡ, ಚೈತ್ರಾ ಬೋರ್ಜಿ, ನಿವೇದಿತಾ ಕೊಕ್ಕನವರ, ಭಾಗ್ಯಶ್ರೀ ಮಠಪತಿ, ಭಾವನಾ ಪಾಟೀಲ, ದಾನಮ್ಮ ಚಿಚಖಂಡಿ, ಸಾವಿತ್ರಿ ಹೆಬ್ಬಾಳಟ್ಟಿ (ಎಲ್ಲರೂ ಬಾಗಲಕೋಟೆ ಜಿಲ್ಲೆ) ಮ್ಯಾನೇಜರ್‌: ಮೌನಪ್ಪ ಬಡಿಗೇರ, ಕೋಚ್‌: ಅಲ್ಕಾ ಫಡತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು