ಬುಧವಾರ, ಆಗಸ್ಟ್ 10, 2022
25 °C
ರಾಷ್ಟ್ರೀಯ ಸಬ್‌ಜೂನಿಯರ್ ಈಜು ಚಾಂಪಿಯನ್‌ಷಿಪ್‌: ಕರ್ನಾಟಕಕ್ಕೆ ಎರಡನೇ ಸ್ಥಾನ

ಚಿನ್ನಕ್ಕೆ ಮುತ್ತಿಟ್ಟ ಶರಣ್‌ ಶ್ರೀಧರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶರಣ್ ಶ್ರೀಧರ್‌ ರಾಷ್ಟ್ರೀಯ ಸಬ್‌ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕಕ್ಕೆ ಚಿನ್ನದ ಪದಕ ತಂದುಕೊಟ್ಟರು.

ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಭಾನುವಾರ ಕೊನೆಗೊಂಡ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಈಜುಪಟುಗಳು ಐದು ಚಿನ್ನ, ಎಂಟು ಬೆಳ್ಳಿ, ಹತ್ತು ಕಂಚು ಸೇರಿ ಒಟ್ಟು 23 ಪದಕ ಗೆದ್ದು ಪದಕಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದರು. ಮಹಾರಾಷ್ಟ್ರ 10 ಚಿನ್ನ, ಮೂರು ಬೆಳ್ಳಿ ಮತ್ತು ನಾಲ್ಕು ಕಂಚು (ಒಟ್ಟು 17) ಜಯಿಸಿ ಅಗ್ರಸ್ಥಾನ ಪಡೆಯಿತು.

ಭಾನುವಾರ ಬಾಲಕರ 400 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ಶರಣ್‌ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಅವರು 4 ನಿಮಿಷ 47.14 ಸೆಕೆಂಡುಗಳಲ್ಲಿ ಗುರಿ ತಲುಪಿದರು. 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ (ಕಾಲ: 1 ನಿ. 14.63 ಸೆ.) ಕಂಚು ತಮ್ಮದಾಗಿಸಿಕೊಂಡರು.

50 ಮೀ. ಬಟರ್‌ಫ್ಲೈ (32.80 ಸೆ.) ವಿಭಾಗದಲ್ಲಿ ರೆಯಾಂಶ್ ಕಾಂತಿ ಬೆಳ್ಳಿ ಗೆದ್ದರು. ಅಲ್ಲದೆ 50 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ (40.48 ಸೆ.) ಕಂಚು ಜಯಿಸಿದರು.

50 ಮೀ. ಬಟರ್‌ಫ್ಲೈ ಸ್ಪರ್ಧೆಯ ಬಾಲಕಿಯರ ವಿಭಾಗದಲ್ಲಿ ಅಲಿಸ್ಸಾ ಸ್ವೀಡಲ್ ರೆಗೊ ಕೂಡ ಬೆಳ್ಳಿ ಜಯಿಸಿದರು. ಅವರು 33.98 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. 50 ಮೀ. ಫ್ರೀಸ್ಟೈಲ್‌ನಲ್ಲಿ (30.90 ಸೆ.) ಬೆಳ್ಳಿ ಗೆದ್ದರು.

ಡೈವಿಂಗ್‌ನಲ್ಲಿ ರಾಜ್ಯದ ಪೂರ್ವಿಕಾ ವೆಂಕಟೇಶ್‌ ಮೂರು ಕಂಚು ಜಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು