ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌: ರಿಧಿಮಾಗೆ ಚಿನ್ನ–ಶ್ರೀಹರಿ, ಕುಶಾಗ್ರ ದಾಖಲೆ

Last Updated 26 ಅಕ್ಟೋಬರ್ 2021, 21:06 IST
ಅಕ್ಷರ ಗಾತ್ರ

ಬೆಂಗಳೂರು: ಆತಿಥೇಯ ಕರ್ನಾಟಕದ ಶ್ರೀಹರಿ ನಟರಾಜ್ ಮತ್ತು ದೆಹಲಿಯ ಕುಶಾಗ್ರ ರಾವತ್ ಅವರು ರಾಜ್ಯ ಈಜು ಸಂಸ್ಥೆ ಅಶ್ರಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಮಂಗಳವಾರ ದಾಖಲೆ ಬರೆದರು.

ಪುರುಷರ 100 ಮೀಟರ್ಸ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಶ್ರೀಹರಿ ನಟರಾಜ್ 55.10 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಮೊದಲಿಗರಾದರು. ಕರ್ನಾಟಕದವರೇ ಆದ ಶಿವ ಎಸ್‌. 57.60 ಸೆಕೆಂಡುಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಗಳಿಸಿದರು. ಈ ವಿಭಾಗದ ಮೂರನೇ ಸ್ಥಾನ ಗೋವಾದ ಕ್ಷೇವಿಯರ್ ಮೈಕೆಲ್ ಡಿ‘ಸೋಜಾ ಪಾಲಾಯಿತು. ಕುಶಾಗ್ರ ರಾವತ್ ಪುರುಷರ 400 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ 3 ನಿಮಿಷ 53.68 ಸೆಕೆಂಡುಗಳಲ್ಲಿ ಗುರಿ ತಲುಪಿ ದಾಖಲೆ ಬರೆದರು. ಅವರಿಗೆ ಪ್ರಬಲ ಪೈಪೋಟಿ ನೀಡಿದ ಕಾರ್ನಾಟಕದ ಅನೀಶ್ ಗೌಡ ಮತ್ತು ಶಾನ್ ಗಂಗೂಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು. ಅನೀಶ್ 3:59.66 ನಿಮಿಷಗಳಲ್ಲಿ ಮತ್ತು ಶಾನ್ 4:00.14 ನಿಮಿಷದಲ್ಲಿ ಗುರಿ ಮುಟ್ಟಿದರು.

ಮೊದಲ ದಿನದ ಫಲಿತಾಂಶಗಳು:ಪುರುಷರ 400 ಮೀಟರ್ಸ್ ಫ್ರೀಸ್ಟೈಲ್‌: ಕುಶಾಗ್ರ ರಾವತ್ (ದೆಹಲಿ)–1. ಕಾಲ:3:53.68 (ಕೂಟ ದಾಖಲೆ), ಅನೀಶ್ ಗೌಡ (ಕರ್ನಾಟಕ)2, ಶಾನ್ ಗಂಗೂಲಿ (ಕರ್ನಾಟಕ)–3; ಪುರುಷರ 200 ಮೀ ಬ್ರೆಸ್ಟ್‌ಸ್ಟ್ರೋಕ್‌: ಲೋಹಿತ್ ಎಂ (ಆರ್‌ಎಸ್‌ಪಿಬಿ). ಕಾಲ: 2:19.00, ಧನುಷ್ ಎಸ್‌ (ತಮಿಳುನಾಡು)–2, ಅರುಣ್ ಎಸ್‌ (ಎಸ್‌ಎಸ್‌ಸಿಬಿ)–3; 100 ಮೀ ಬ್ಯಾಕ್‌ಸ್ಟ್ರೋಕ್: ಶ್ರೀಹರಿ ನಟರಾಜ್ (ಕರ್ನಾಟಕ)–1. ಕಾಲ:55.10 , ಶಿವ ಎಸ್‌ (ಕರ್ನಾಟಕ)–2, ಕ್ಷೇವಿಯರ್ ಮೈಕೆಲ್ ಡಿ‘ಸೋಜ (ಗೋವಾ)–3; 50 ಮೀ ಬಟರ್‌ಫ್ಲೈ: ಸಜನ್ ಪ್ರಕಾಶ್ (‍ಪೊಲೀಸ್). ಕಾಲ: 24.90, ಮಿಹಿರ್ ಆಮ್ರೆ (ಮಹಾರಾಷ್ಟ್ರ), ಆದಿತ್ಯ ಡಿ (ತಮಿಳುನಾಡು)–2, ಬಿಕ್ರಂ ಚಂಗ್‌ಮೈ (ಅಸ್ಸಾಂ)–4; 4ಷ200 ಫ್ರೀಸ್ಟೈಲ್‌: ಕರ್ನಾಟಕ (ಸಂಭವ್‌, ಅನೀಶ್‌, ತನಿಶ್‌, ಶ್ರೀಹರಿ)–1. ಕಾಲ: 7:37.65 (ಕೂಟ ದಾಖಲೆ)–1, ದೆಹಲಿ–2, ಎಸ್‌ಎಸ್‌ಸಿಬಿ–3.

ಮಹಿಳೆಯರ400 ಮೀಟರ್ಸ್ ಫ್ರೀಸ್ಟೈಲ್‌: ಶಿವಾಂಗಿ ಶರ್ಮಾ (ಅಸ್ಸಾಂ)–1. ಕಾಲ:4:31.86, ಅನ್ಯಾ ವಾಲ (ಮಹಾರಾಷ್ಟ್ರ)–2, ಪ್ರಾಚಿ ಟೋಕಸ್‌ (ದೆಹಲಿ)–3, 200 ಮೀ ಬ್ರೆಸ್ಟ್‌ ಸ್ಟ್ರೋಕ್‌: ಅಪೇಕ್ಷಾ ಫರ್ನಾಂಡಿಸ್‌ (ಮಹಾರಾಷ್ಟ್ರ)–1. ಕಾಲ: 2:42.97, ಲಿನೇಶಾ ಎ.ಕೆ (ಕರ್ನಾಟಕ)–2, ಕಲ್ಯಾಣಿ ಸಕ್ಷೇನಾ (ಗುಜರಾತ್)–3; 100 ಮೀ ಬ್ಯಾಕ್‌ಸ್ಟ್ರೋಕ್‌: ರಿಧಿಮಾ ವೀರೇಂದ್ರ ಕುಮಾರ್ (ಕರ್ನಾಟಕ)–1. ಕಾಲ: 1:04.40, ಮಾನಾ ಪಟೇಲ್‌ (ಗುಜರಾತ್‌)–2, ನೀನಾ ವೆಂಕಟೇಶ್‌ (ಕರ್ನಾಟಕ)–3; 50 ಮೀ ಬಟರ್‌ಫ್ಲೈ: ಋಜುತಾ ಖಾಡೆ (ಮಹಾರಾಷ್ಟ್ರ)–1. ಕಾಲ: 28.38, ದಿವ್ಯಾ ಸತೀಜ (ಹರಿಯಾಣ)–2, ನೀನಾ ವೆಂಕಟೇಶ್ (ಕರ್ನಾಟಕ)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT