ಸೋಮವಾರ, ನವೆಂಬರ್ 30, 2020
19 °C

ರಾಷ್ಟ್ರೀಯ ಟೇಬಲ್‌ ಟೆನಿಸ್‌ ಶಿಬಿರ ಆರಂಭ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : ಮುಂದಿನ ವರ್ಷ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಟೇಬಲ್‌ ಟೆನಿಸ್‌ ಶಿಬಿರವು ಹರಿಯಾಣದ ಸೋನೆಪತ್‌ನಲ್ಲಿ ಬುಧವಾರ ಆರಂಭವಾಯಿತು. ಏಳು ತಿಂಗಳುಗಳ ಬಳಿಕ ಪುನರಾರಂಭಗೊಂಡಿರುವ ಶಿಬಿರದಲ್ಲಿ ಮೊದಲ ದಿನ ಒಂಬತ್ತು ಆಟಗಾರರು ಭಾಗವಹಿಸಿದ್ದರು.

42 ದಿನಗಳು ನಡೆಯಲಿರುವ ಶಿಬಿರದಲ್ಲಿ ಪಾಲ್ಗೊಳ್ಳಲು ಕರ್ನಾಟಕದ ಅರ್ಚನಾ ಕಾಮತ್ ಸೇರಿದಂತೆ 11 ಅಥ್ಲೀಟ್‌ಗಳು ಹಾಗೂ ಅವರ ಕೋಚ್‌ಗಳು ಒಪ್ಪಿಕೊಂಡಿದ್ದಾರೆ. ಡಿಸೆಂಬರ್‌ 9ರಂದು ಶಿಬಿರ ಮುಕ್ತಾಯಗೊಳ್ಳಲಿದೆ.

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ನಾಲ್ಕು ಬಾರಿ ಚಿನ್ನದ ಪದಕ ಗೆದ್ದಿರುವ ಅಚಂತ ಶರತ್‌ ಕಮಲ್‌ ಹಾಗೂ ಅನುಷಾ ಕುಟುಂಬಳೆ ಅವರು ಗುರುವಾರ ಶಿಬಿರವನ್ನು ಸೇರಿಕೊಳ್ಳಲಿದ್ದಾರೆ.

ಅನುಭವಿ ಆಟಗಾರರಾದ ಜಿ.ಸತ್ಯನ್‌ ಹಾಗೂ ಹರ್ಮಿತ್‌ ದೇಸಾಯಿ ಈ ತಿಂಗಳ ಆರಂಭದಲ್ಲಿ ಯೂರೋಪ್‌ಗೆ ತೆರಳಿದ್ದು, ತರಬೇತಿ ಮತ್ತು ಅಲ್ಲಿಯ ಲೀಗ್‌ಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಭಾರತಕ್ಕೆ ಮರಳಿದ ಬಳಿಕ ಅವರು ಶಿಬಿರಕ್ಕೆ ಹಾಜರಾಗಲಿದ್ದಾರೆ.

ಶಿಬಿರ ನಡೆಯುವ ಸ್ಥಳಗಳಲ್ಲಿ, ಕ್ರೀಡಾ ಸಚಿವಾಲಯ ಹಾಗೂ ಭಾರತ ಕ್ರೀಡಾ ಪ್ರಾಧಿಕಾರಗಳು (ಸಾಯ್‌) ಕೋವಿಡ್‌ –19 ತಡೆಗಾಗಿ ಸೂಚಿಸಿರುವ ನಿಯಮಗಳು ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು