ಬ್ಯಾಸ್ಕೆಟ್‌ಬಾಲ್‌: ಭಾರತ ತಂಡಕ್ಕೆ ಗೆಲುವು

7

ಬ್ಯಾಸ್ಕೆಟ್‌ಬಾಲ್‌: ಭಾರತ ತಂಡಕ್ಕೆ ಗೆಲುವು

Published:
Updated:

ಒರ್ಲಾಂಡೊ, ಅಮೆರಿಕ : ಅಮೋಘ ಸಾಮರ್ಥ್ಯ ತೋರಿದ ಭಾರತದ ಬಾಲಕಿಯರ ತಂಡದವರು 14 ವರ್ಷದೊಳಗಿನವರ ಎನ್‌ಬಿಎ ವಿಶ್ವ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದ್ದಾರೆ.

ಗುರುವಾರ ನಡೆದ ಗುಂಪು ಹಂತದ ಅಂತಿಮ ಹಣಾಹಣಿಯಲ್ಲಿ ಭಾರತ ತಂಡ 40–37 ಪಾಯಿಂಟ್ಸ್‌ನಿಂದ ಸಂಯುಕ್ತ ದಕ್ಷಿಣ ಅಮೆರಿಕ ತಂಡವನ್ನು ಪರಾಭವಗೊಳಿಸಿತು. ಟೂರ್ನಿಯಲ್ಲಿ ಭಾರತ ಜಯಿಸಿದ ಮೊದಲ ಪಂದ್ಯ ಇದಾಗಿದೆ.

ಮೊದಲ ಕ್ವಾರ್ಟರ್‌ನ ಆರಂಭದಿಂದಲೇ ಆಕ್ರಮಣಕಾರಿ ಆಟ ಆಡಿದ ಭಾರತ ತಂಡ 12–9ರ ಮುನ್ನಡೆ ಗಳಿಸಿತು. ಎರಡು ಮತ್ತು ಮೂರನೆ ಕ್ವಾರ್ಟರ್‌ಗಳಲ್ಲೂ ತಂಡ ಪ್ರಾಬಲ್ಯ ಮೆರೆಯಿತು. ಆದರೆ ಅಂತಿಮ ಕ್ವಾರ್ಟರ್‌ನಲ್ಲಿ ದಕ್ಷಿಣ ಅಮೆರಿಕ ಒಂಬತ್ತು ಪಾಯಿಂಟ್ಸ್‌ ಗಳಿಸಿ ಗಮನ ಸೆಳೆಯಿತು.

ಭಾರತ ತಂಡದ ಸುನಿಷ್ಕಾ ಕಾರ್ತಿಕ್‌ 17 ಪಾಯಿಂಟ್ಸ್‌ ಕಲೆಹಾಕಿ ಮಿಂಚಿದರು.

ಭಾರತದ ಬಾಲಕರ ತಂಡದವರು 49–56 ಪಾಯಿಂಟ್ಸ್‌ನಿಂದ ದಕ್ಷಿಣ ಅಮೆರಿಕ ಎದುರು ಸೋತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !