ನಾಳೆಯಿಂದ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌

7

ನಾಳೆಯಿಂದ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌

Published:
Updated:

ಬೆಂಗಳೂರು: ರಾಜ್ಯ ಅಮೆಚೂರ್‌ ನೆಟ್‌ಬಾಲ್‌ ಸಂಸ್ಥೆ, ಬಿಎಂಎಸ್‌ ಮಹಿಳಾ ಕಾಲೇಜು ಸಹಯೋಗದಲ್ಲಿ ಆಯೋಜಿಸಿರುವ ಜೂನಿಯರ್‌ ಮಹಿಳೆಯರ ರಾಜ್ಯ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌ ಜನವರಿ ಐದು ಮತ್ತು ಆರರಂದು ನಡೆಯಲಿದೆ.

ಮೈಸೂರು ಜಿಲ್ಲಾ ನೆಟ್‌ಬಾಲ್‌ ಸಂಸ್ಥೆ ಸಹಯೋಗದಲ್ಲಿ ಜೂನಿಯರ್‌ ಪುರುಷರ ರಾಜ್ಯ ನೆಟ್‌ಬಾಲ್‌ ಲೀಗ್ ಹುಣಸೂರಿನ ಗಾವಡಗೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜನವರಿ 12 ಮತ್ತು 13ರಂದು ನಡೆಯಲಿದೆ. 

ಪಂಜಾಬ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಜೂನಿಯರ್‌ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌ಗೆ ರಾಜ್ಯ ತಂಡವನ್ನು ಈ ಲೀಗ್‌ನಲ್ಲಿ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರಿಗೆ ಹತ್ತು ದಿನ ತರಬೇತಿ ಶಿಬಿರ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !