ಸೋಮವಾರ, ಏಪ್ರಿಲ್ 19, 2021
32 °C

ಒಲಿಂಪಿಕ್ಸ್‌ಗೆ ನೇತ್ರಾ ಕುಮನನ್‌

ಪಿಟಿಐ‌ Updated:

ಅಕ್ಷರ ಗಾತ್ರ : | |

ನವದೆಹಲಿ: ತಮಿಳುನಾಡಿನ ನೇತ್ರಾ ಕುಮನನ್ ಅವರು ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ ಭಾರತದ ಮೊದಲ ಮಹಿಳಾ ಸೇಯ್ಲರ್ ಎಂಬ ಗೌರವ ತಮ್ಮದಾಗಿಸಿಕೊಂಡರು. ಒಮಾನ್‌ನಲ್ಲಿ ಬುಧವಾರ ನಡೆದ ಏಷ್ಯಾ ವಲಯದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಅಗ್ರ ಸ್ಥಾನ ಗಳಿಸುವುದರೊಂದಿಗೆ ಅವರು ಟೋಕಿಯೊ ಟಿಕೆಟ್ ಗಿಟ್ಟಿಸಿಕೊಂಡರು.

ಚೆನ್ನೈನಲ್ಲಿ ನೆಲೆಸಿರುವ 23 ವರ್ಷದ ನೇತ್ರಾ ಎದುರಾಳಿ ರಮ್ಯಾ ಸರವಣನ್ ಅವರಿಗಿಂತ 21 ಪಾಯಿಂಟ್‌ಗಳ ಮುನ್ನಡೆಯೊಂದಿಗೆ ಅಗ್ರಪಟ್ಟಕ್ಕೇರಿದರು. ಗುರುವಾರ ಅಂತಿಮ ಹಂತದ ಸ್ಪರ್ಧೆ ನಡೆಯಲಿದೆ.  

ಭಾರತದ ಇನ್ನೂ ಇಬ್ಬರು ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ಸಾಧ್ಯತೆ ಇದ್ದು ಅವರಲ್ಲಿ ಒಬ್ಬರು ಗಣಪತಿ ಕೇಳಪಂಡ ಚೆಂಗಪ್ಪ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು