ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಟ್ಟಕಲ್ಲಪ್ಪ ಅಖಿಲ ಭಾರತ ಈಜು ಚಾಂಪಿಯನ್‌ಷಿಪ್: ಬಿಎಸಿಯ ಶಿವ, ರಿಧಿಮಾ ಮಿಂಚು

ಇದೇ ಮೊದಲ ಬಾರಿ ನಡೆದ ‘ಸ್ಕಿನ್ಸ್’
Last Updated 12 ನವೆಂಬರ್ 2022, 19:45 IST
ಅಕ್ಷರ ಗಾತ್ರ

ಬೆಂಗಳೂರು: ಬಸವನಗುಡಿ ಈಜು ಕೇಂದ್ರದ ಎಸ್‌.ಶಿವ ಮತ್ತು ರಿಧಿಮಾ ವೀರೇಂದ್ರಕುಮಾರ್‌ ಅವರು ನೆಟ್ಟಕಲ್ಲಪ್ಪ ಈಜು ಕೇಂದ್ರದ (ಎನ್‌ಎಸಿ) ದಶಮಾನೋತ್ಸವ ಅಂಗವಾಗಿ ಆಯೋಜಿಸಿರುವ ‘ನೆಟ್ಟಕಲ್ಲಪ್ಪ ಅಖಿಲ ಭಾರತ ಈಜು ಚಾಂಪಿಯನ್‌ಷಿಪ್’ನ ಮೊದಲ ದಿನ ಗಮನ ಸೆಳೆದರು.

ಬೆಂಗಳೂರಿನ ಉತ್ತರಹಳ್ಳಿ ಮುಖ್ಯರಸ್ತೆ, ಪದ್ಮನಾಭನಗರದಲ್ಲಿರುವ ಈಜು ಕೇಂದ್ರದಲ್ಲಿ ಶನಿವಾರ ನಡೆದ ಪುರುಷರ 50 ಮೀ. ಬ್ಯಾಕ್‌ಸ್ಟ್ರೋಕ್‌, 50 ಮೀ. ಬಟರ್‌ಫ್ಲೈ ಮತ್ತು 18 ವರ್ಷಕ್ಕಿಂತ ಮೇಲಿನವರ 200 ಮೀ. ಮೆಡ್ಲೆ ವಿಭಾಗದಲ್ಲಿ ಶಿವ ಚಿನ್ನದ ಪದಕ ಜಯಿಸಿದರು.

ರಿಧಿಮಾ ಅವರು ಮಹಿಳೆಯರ 50 ಮೀ. ಬ್ಯಾಕ್‌ಸ್ಟ್ರೋಕ್ ಮತ್ತು 50 ಮೀ. ಬಟರ್‌ಫ್ಲೈ ವಿಭಾಗಗಳಲ್ಲಿ ಅಗ್ರಸ್ಥಾನ ಪಡೆದರು.

ಮೊದಲ ದಿನದ ಫಲಿತಾಂಶ: ಪುರುಷರು (ಮುಕ್ತ ವಿಭಾಗ): 50 ಮೀ. ಬ್ಯಾಕ್‌ಸ್ಟ್ರೋಕ್: ಎಸ್‌.ಶಿವ (ಬಸವನಗುಡಿ ಈಜು ಕೇಂದ್ರ–ಬಿಎಸಿ; ಕಾಲ: 26.36 ಸೆ.)–1, ಸೌಮ್ಯಜಿತ್‌ ಸಹಾ (ಡಾಲ್ಫಿನ್‌ ಅಕ್ವಟಿಕ್ಸ್‌)–2, ಆಕಾಶ್‌ ಮಣಿ (ಬಿಎಸಿ)–3

50 ಮೀ. ಬಟರ್‌ಫ್ಲೈ: ಎಸ್‌.ಶಿವ (ಬಿಎಸಿ; ಕಾಲ: 25.67 ಸೆ)–1, ಪ್ರಥಮ್‌ ಶರ್ಮ (ಡಾಲ್ಫಿನ್‌)–2, ಎನ್‌.ಅರವಿಂದ್ (ಏಸಸ್‌)–3

18 ವರ್ಷಕ್ಕಿಂತ ಮೇಲಿನವರು: 200 ಮೀ. ಮೆಡ್ಲೆ: ಎಸ್‌.ಶಿವ (ಬಿಎಸಿ; ಕಾಲ: 2 ನಿ. 11.40 ಸೆ.)–1, ಸೌಮ್ಯಜಿತ್‌ ಸಹಾ (ಡಾಲ್ಫಿನ್‌)–2, ಧ್ಯಾನ್‌ ಬಾಲಕೃಷ್ಣ (ಬಿಎಸಿ)–3

100 ಮೀ. ಬ್ಯಾಕ್‌ಸ್ಟ್ರೋಕ್: ಸೌಮ್ಯಜಿತ್ ಸಹಾ (ಡಾಲ್ಫಿನ್‌; ಕಾಲ: 1 ನಿ. 00.57 ಸೆ.)–1, ಅರವಿಂದ್‌ ಎನ್‌. (ಏಸಸ್‌), ಬಿ.ಜತಿನ್‌ (ಗ್ಲೋಬಲ್‌ ಸ್ವಿಮ್‌ ಸೆಂಟರ್‌)–3

100 ಮೀ. ಬಟರ್‌ಫ್ಲೈ: ಪವನ್‌ ಗುಪ್ತಾ (ಎಸ್‌ಡಿಎಟಿ ಡಾಲ್ಫಿನ್; ಕಾಲ: 1 ನಿ. 00.20 ಸೆ.)–1, ಮಿತೇಶ್‌ ಕುಂಟೆ (ಎನ್‌ಎಸಿ)–2, ಸುನೀಶ್‌ ಎಸ್‌. (ಗ್ಲೋಬಲ್‌)–3

ಬಾಲಕರ ಗುಂಪು 2: 100 ಮೀ. ಬ್ಯಾಕ್‌ಸ್ಟ್ರೋಕ್: ಕುಶಾಲ್‌ ಕೆ (ಬಿಎಸಿ; ಕಾಲ: 1 ನಿ. 5.23 ಸೆ.)–1, ರಾಘವ್‌ ಸ್ವಚ್ಛಂದಮ್‌ (ನೆಟ್ಟಕಲ್ಲಪ್ಪ ಈಜು ಕೇಂದ್ರ– ಎನ್‌ಎಸಿ)–2, ಸ್ವರೂಪ್ ಸತೀಶ್‌ (ಸೇಂಟ್‌ ಪಾಲ್ಸ್‌ ಇಂಗ್ಲಿಷ್‌ ಹೈಸ್ಕೂಲ್‌)–3

100 ಮೀ. ಬ್ಯಾಕ್‌ಸ್ಟ್ರೋಕ್: ಜೋಶುವಾ ರಾಬರ್ಟ್‌ (ಎಂ.ಪಿ ಅಕ್ವಟಿಕ್ಸ್‌; ಕಾಲ: 1 ನಿ. 25.98 ಸೆ.)–1, ಅಮೋಘ್‌ ಎಸ್‌.ಎಂ. (ನಿಶಾ ಮಿಲೆಟ್ಸ್‌ ಈಜು ಅಕಾಡೆಮಿ)–2, ಡಿ.ಆರ್‌.ಕುಶಾನ್‌ ಗಂಗಾಟ್ಕರ್‌ (ಬಿಎಸಿ)–3

100 ಮೀ. ಬಟರ್‌ಫ್ಲೈ: ಸ್ವರೂಪ್‌ ಸತೀಶ್‌ (ಸೇಂಟ್‌ ಪಾಲ್ಸ್‌ ಇಂಗ್ಲಿಷ್‌ ಸ್ಕೂಲ್‌; ಕಾಲ: 1 ನಿ. 01.56 ಸೆ.)–1, ದರ್ಶನ್‌ ಎಸ್‌. (ಬಿಎಸಿ)–2, ಹರಿಕಾರ್ತಿಕ್‌ ವೇಲು (ಗೋಲ್ಡನ್‌ ಫಿನ್ಸ್‌)–3

ಬಾಲಕರ ಗುಂಪು 1:100 ಮೀ. ಬ್ಯಾಕ್‌ಸ್ಟ್ರೋಕ್: ಆಕಾಶ್‌ ಮಣಿ (ಬಿಎಸಿ; ಕಾಲ: 1 ನಿ. 2.61 ಸೆ.)–1, ಧ್ಯಾನ್‌ ಎಂ. (ಗ್ಲೋಬಲ್‌ ಸ್ವಿಮ್‌ ಸೆಂಟರ್)–2, ಆರ್‌.ಅಕ್ಷಯ ಶೇಟ್‌ (ಗ್ಲೋಬಲ್‌)–3

400 ಮೀ. ಫ್ರೀಸ್ಟೈಲ್‌: ಶಿವಾಂಕ್‌ ವಿಶ್ವನಾಥ್‌ (ರೇ ಸೆಂಟರ್‌; ಕಾಲ: 4 ನಿ. 21.81 ಸೆ.)–1, ನಯನ್‌ ವಿಘ್ನೇಶ್ (ಎನ್‌ಎಸಿ)–2, ಪ್ರಶಂಸ್ ಎಚ್‌.ಎಂ. (ಬಿಎಸಿ)–3

200 ಮೀ. ಮೆಡ್ಲೆ: ನಯನ್‌ ವಿಘ್ನೇಶ್‌ (ಎನ್‌ಎಸಿ; ಕಾಲ: 2 ನಿ.17.31 ಸೆ.)–1, ಶಿವಾಂಕ್‌ ವಿಶ್ವನಾಥ್‌ (ರೇ ಸೆಂಟರ್‌)–2, ಸೂರ್ಯ ಜೋಯಪ್ಪ (ಬಿಎಸಿ)–3

100 ಮೀ. ಬಟರ್‌ಫ್ಲೈ: ಪ್ರಥಮ್‌ ಶರ್ಮಾ (ಡಾಲ್ಫಿನ್‌; ಕಾಲ: 58.74 ಸೆ.)–1, ನಯನ್‌ ವಿಘ್ನೇಶ್‌ (ಎನ್‌ಎಸಿ)–2, ರಿಷಭ್‌ ಸಿಂಗ್‌ (ಡಾಲ್ಫಿನ್)–3

ಮಹಿಳೆಯರು: ಮುಕ್ತ ವಿಭಾಗ: 50 ಮೀ. ಬ್ಯಾಕ್‌ಸ್ಟ್ರೋಕ್‌: ರಿಧಿಮಾ ವೀರೇಂದ್ರಕುಮಾರ್‌ (ಬಿಎಸಿ; ಕಾಲ:30.19 ಸೆ.)–1, ಶಾಲಿನಿ ಆರ್‌ ದೀಕ್ಷಿತ್‌ (ಡಾಲ್ಫಿನ್‌)–2, ಆರುಷಿ ಅಗರವಾಲ್‌ (ಡಾಲ್ಫಿನ್‌)–3.

50 ಮೀ. ಬಟರ್‌ಫ್ಲೈ: ರಿಧಿಮಾ ವೀರೇಂದ್ರಕುಮಾರ್‌ (ಬಿಎಸಿ; ಕಾಲ: 30.25 ಸೆ.)–1, ಸುಹಾಸಿನಿ ಘೋಷ್‌ (ಡಾಲ್ಫಿನ್‌)–2, ನೈಶಾ ಶೆಟ್ಟಿ (ಡಾಲ್ಫಿನ್‌)–3

‌18 ವರ್ಷಕ್ಕಿಂತ ಮೇಲಿನವರು: 200 ಮೀ. ಮೆಡ್ಲೆ: ಶೃಂಗಿ ರಾಜೇಶ್‌ ಬಾಂದೇಕರ್‌ (ಜೈನ್‌ ವಿವಿ: ಕಾಲ: 2 ನಿ. 37.59 ಸೆ.)–1, ಅನುಮತಿ ಚೌಗುಲೆ (ಜೈನ್‌)–2, ನಿಧಿ ಶಶಿಧರ (ಬಿಎಸಿ)–3

100 ಮೀ. ಬ್ಯಾಕ್‌ಸ್ಟ್ರೋಕ್: ಶೃಂಗಿ ರಾಜೇಶ್‌ ಬಾಂದೇಕರ್‌ (ಜೈನ್‌; ಕಾಲ: 1 ನಿ. 11.69 ಸೆ.)–1, ಕ್ಷಿತಿಜಾ ಕೆ. (ಬಿಎಸಿ)–2, ದಿವ್ಯಾ ಘೋಷ್‌ (ಗ್ಲೋಬಲ್‌ ಸ್ವಿಮ್‌ ಸೆಂಟರ್‌)–3

100 ಮೀ. ಬಟರ್‌ಫ್ಲೈ: ಆದ್ಯಾ ನಾಯಕ್ (ರೇ ಸೆಂಟರ್‌; ಕಾಲ: 1 ನಿ. 09.99 ಸೆ.)–1, ಅನುಮತಿ ಚೌಗುಲೆ (ಜೈನ್‌)–2, ಕ್ಷಿತಿಜಾ ಕೆ. (ಬಿಎಸಿ)–3

ಬಾಲಕಿಯರ ಗುಂಪು 1: 100 ಮೀ. ಬ್ಯಾಕ್‌ಸ್ಟ್ರೋಕ್: ಆರುಷಿ ಅಗರವಾಲ್‌ (ಡಾಲ್ಫಿನ್‌; ಕಾಲ: 1 ನಿ. 10.80 ಸೆ.)–1, ಶಾಲಿನಿ ಆರ್‌.ದೀಕ್ಷಿತ್‌ (ಡಾಲ್ಫಿನ್‌)–2, ಆದ್ಯಾ ಮೋಹನ್ (ಬಿಎಸಿ)–3

400 ಮೀ. ಫ್ರೀಸ್ಟ್ರೈಲ್‌: ಅಶ್ಮಿತಾ ಚಂದ್ರ (ಡೆಕ್ಕನ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌; ಕಾಲ: 4 ನಿ. 44.3 ಸೆ)–1, ರಿಧಿಮಾ ವೀರೇಂದ್ರಕುಮಾರ್‌ (ಬಿಎಸಿ)–2, ಅದಿತಿ ಎನ್‌.ಎಂ. (ಬಿಎಸಿ)–3

200 ಮೀ. ಮೆಡ್ಲೆ: ಲಿನೇಶಾ ಎ.ಕೆ (ಗ್ಲೋಬಲ್‌; ಕಾಲ: 2 ನಿ. 37.49 ಸೆ.)–1, ನೈಶಾ ಶೆಟ್ಟಿ (ಡಾಲ್ಫಿನ್‌)–2, ಝಾರಾ ಜಬ್ಬಾರ್‌ (ಡಾಲ್ಫಿನ್‌)–3

100 ಮೀ. ಬಟರ್‌ಫ್ಲೈ: ನೈಶಾ ಶೆಟ್ಟಿ (ಡಾಲ್ಫಿನ್‌; ಕಾಲ: 1 ನಿ. 6.90 ಸೆ.)–1, ತಿತೀಕ್ಷಾ ಎಚ್‌. (ಡಾಲ್ಫಿನ್‌)–2, ಅಶ್ಮಿತಾ ಚಂದ್ರ (ಡೆಕ್ಕನ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌)–3

ಬಾಲಕಿಯರ ಗುಂಪು 2: 100 ಮೀ. ಬ್ಯಾಕ್‌ಸ್ಟ್ರೋಕ್‌: ನೈಶಾ (ಬಿಎಸಿ; ಕಾಲ: 1 ನಿ. 11.26 ಸೆ.)–1, ಸಿದ್ಧಿ ಗೌತಮ್‌ ಶಾ (ಡಾಲ್ಫಿನ್)–2, ದಯನಿತಾ ಎಸ್‌. (ರೇ ಸೆಂಟರ್‌)–3

100 ಮೀ. ಬಟರ್‌ಫ್ಲೈ: ಸುಹಾಸಿನಿ ಘೋಷ್‌ (ಡಾಲ್ಫಿನ್‌; ಕಾಲ: 1 ನಿ. 09.64 ಸೆ.)–1, ಜನ್ಯಾ ಬಿ.ಎಸ್‌. (ಬಿಎಸಿ)–2, ಸ್ಮೃತಿ ಚೇತನ್‌ (ಬಿಎಸಿ) –3

ನೆಟ್ಟಕಲ್ಲಪ್ಪ ಅಖಿಲ ಭಾರತ ಈಜು ಚಾಂಪಿಯನ್‌ಷಿಪ್‌ನ ಉದ್ಘಾಟನಾ ಸಮಾರಂಭದಲ್ಲಿ (ಎಡದಿಂದ) ಕೆ.ಎನ್‌. ಗುರುಸ್ವಾಮಿ ಎಜುಕೇಶನಲ್‌ ಮತ್ತು ಚಾರಿಟಬಲ್ ಟ್ರಸ್ಟ್‌ ಚೇರ್ಮನ್‌ ಕೆ.ಎನ್‌. ತಿಲಕ್‌ ಕುಮಾರ್, ಕರ್ನಾಟಕ ಒಲಿಂಪಿಕ್‌ ಸಂಸ್ಥೆ ಅಧ್ಯಕ್ಷ ಕೆ.ಗೋವಿಂದರಾಜ್, ಕಾರ್ಯದರ್ಶಿ ಅನಂತರಾಜು, ಒಲಿಂಪಿಯನ್‌ ಈಜುಪಟು ಸಜನ್‌ ಪ್ರಕಾಶ್‌ ಹಾಗೂ ನೆಟ್ಟಕಲ್ಲಪ್ಪ ಈಜುಕೇಂದ್ರದ ನಿರ್ದೇಶಕರಾದ ಸುಜಾತಾ ತಿಲಕ್‌ ಕುಮಾರ್‌ ಪಾಲ್ಗೊಂಡರು –ಪ್ರಜಾವಾಣಿ ಚಿತ್ರ
ನೆಟ್ಟಕಲ್ಲಪ್ಪ ಅಖಿಲ ಭಾರತ ಈಜು ಚಾಂಪಿಯನ್‌ಷಿಪ್‌ನ ಉದ್ಘಾಟನಾ ಸಮಾರಂಭದಲ್ಲಿ (ಎಡದಿಂದ) ಕೆ.ಎನ್‌. ಗುರುಸ್ವಾಮಿ ಎಜುಕೇಶನಲ್‌ ಮತ್ತು ಚಾರಿಟಬಲ್ ಟ್ರಸ್ಟ್‌ ಚೇರ್ಮನ್‌ ಕೆ.ಎನ್‌. ತಿಲಕ್‌ ಕುಮಾರ್, ಕರ್ನಾಟಕ ಒಲಿಂಪಿಕ್‌ ಸಂಸ್ಥೆ ಅಧ್ಯಕ್ಷ ಕೆ.ಗೋವಿಂದರಾಜ್, ಕಾರ್ಯದರ್ಶಿ ಅನಂತರಾಜು, ಒಲಿಂಪಿಯನ್‌ ಈಜುಪಟು ಸಜನ್‌ ಪ್ರಕಾಶ್‌ ಹಾಗೂ ನೆಟ್ಟಕಲ್ಲಪ್ಪ ಈಜುಕೇಂದ್ರದ ನಿರ್ದೇಶಕರಾದ ಸುಜಾತಾ ತಿಲಕ್‌ ಕುಮಾರ್‌ ಪಾಲ್ಗೊಂಡರು –ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT