ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾಲ್ಫಿನ್‌ ಕೇಂದ್ರಕ್ಕೆ ಸಮಗ್ರ ಪ್ರಶಸ್ತಿ

ನೆಟ್ಟಕಲ್ಲಪ್ಪ ಸ್ಮಾರಕ ಚೊಚ್ಚಲ ಈಜು ಚಾಂಪಿಯನ್‌ಷಿಪ್‌ಗೆ ಉತ್ತಮ ಸ್ಪಂದನೆ
Last Updated 11 ನವೆಂಬರ್ 2019, 9:28 IST
ಅಕ್ಷರ ಗಾತ್ರ

ಬೆಂಗಳೂರು: ನೆಟ್ಟಕಲ್ಲಪ್ಪ ಸ್ಮಾರಕ ಚೊಚ್ಚಲ ಈಜು ಚಾಂ‍ಪಿಯನ್‌ಷಿಪ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಭಾನುವಾರ ನಡೆದ ಚಾಂಪಿಯನ್‌ಷಿಪ್‌ನಲ್ಲಿ ನಗರದ ಪ್ರಮುಖ ಕ್ಲಬ್‌ಗಳ ಒಟ್ಟು 275 ಈಜುಪಟುಗಳು ಪದಕಗಳಿಗಾಗಿ ಪೈಪೋಟಿ ನಡೆಸಿದರು. ಎಲ್ಲಾ ವಿಭಾಗಗಳಲ್ಲೂ ಅಮೋಘ ಸಾಮರ್ಥ್ಯ ತೋರಿದ ಡಾಲ್ಫಿನ್‌ ಈಜು ಕೇಂದ್ರದವರು ಸಮಗ್ರ ಪ್ರಶಸ್ತಿ ಜಯಿಸಿದರು.

59 ವಿಭಾಗಗಳಲ್ಲಿ ಮೊದಲ ಸ್ಥಾನ ಪಡೆದವರು ತಲಾ ₹2,000 ನಗದು ಬಹುಮಾನ ಗಳಿಸಿದರು. ಬೆಳ್ಳಿ ಮತ್ತು ಕಂಚಿನ ಪದಕ ಪಡೆದವರು ಕ್ರಮವಾಗಿ ₹1,500 ಮತ್ತು 1,000 ನಗದು ಬಹುಮಾನವನ್ನು ಜೇಬಿಗಿಳಿಸಿಕೊಂಡರು.

ವೈಯಕ್ತಿಕ ವಿಭಾಗಗಳಲ್ಲಿ ಚಾಂಪಿಯನ್‌ ಆದವರಿಗೆ ತಲಾ ₹ 5,000 ನಗದು ಬಹುಮಾನ ದೊರೆಯಿತು.

‘ಸ್ಪರ್ಧೆ ತುಂಬಾ ಕಠಿಣವಾಗಿತ್ತು. ಇದರ ನಡುವೆಯೂ ‍ಪ್ರತಿ ಕ್ಷಣವನ್ನು ಖುಷಿಯಿಂದಲೇ ಕಳೆದೆ. ಯುವ ಈಜುಪಟುಗಳು ಪ್ರವರ್ಧಮಾನಕ್ಕೆ ಬರಲು ಇಂತಹ ಸ್ಪರ್ಧೆಗಳು ನೆರವಾಗುತ್ತವೆ’ ಎಂದು ಸೀನಿಯರ್‌ ಮಹಿಳಾ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್‌ ಆದ ನೆಟ್ಟಕಲ್ಲಪ್ಪ ಈಜು ಕೇಂದ್ರದ ರಿಯಾ ಸಿಂಗ್‌ ಹೇಳಿದರು.

ಒಲಿಂಪಿಯನ್‌ ಈಜುಪಟು ಶ್ರೀಹರಿ ನಟರಾಜ್‌, ಸೀನಿಯರ್‌ ಪುರುಷರ ವಿಭಾಗದ ವೈಯಕ್ತಿಕ ಪ್ರಶಸ್ತಿ ಗೆದ್ದರು. ಬಿಎಸ್‌ಆರ್‌ಸಿ ಪರ ಕಣಕ್ಕಿಳಿದಿದ್ದ ಅವರು ಮೂರು ಚಿನ್ನ ಮತ್ತು ತಲಾ ಒಂದು ಬೆಳ್ಳಿ ಹಾಗೂ ಕಂಚಿನ ಪದಕಗಳಿಗೆ ಕೊರಳೊಡ್ಡಿದರು. ಬ್ಯಾಕ್‌ಸ್ಟ್ರೋಕ್‌ ಪರಿಣತ ಶ್ರೀಹರಿ ಅವರು ಬ್ರೆಸ್ಟ್‌ಸ್ಟ್ರೋಕ್‌ ವಿಭಾದಲ್ಲಿ ‘ಅದೃಷ್ಟ’ ಪರೀಕ್ಷೆ ನಡೆಸಿದರು.

ವೈಯಕ್ತಿಕ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದವರು
ಪುರುಷರು
ಶ್ರೀಹರಿ ನಟರಾಜ್‌ (ಬಿಎಸ್‌ಆರ್‌ಸಿ)

ಮಹಿಳೆಯರು
ರಿಯಾ ಸಿಂಗ್‌ (ನೆಟ್ಟಕಲ್ಲಪ್ಪ ಈಜು ಕೇಂದ್ರ).

ಬಾಲಕಿಯರು
ಗುಂಪು–1: ಎನ್‌.ವಿದ್ಯಾಶ್ರೀ
ಗುಂಪು–2:ಶಿರಿನ್‌, ನೌಶಗಾ ಶೆಟ್ಟಿ ಮತ್ತು ಎಸ್‌.ಲಕ್ಷ್ಯಾ
ಗುಂಪು–3: ವಿಹಿತಾ ನಯನಾ ಮತ್ತು ಧಿನಿದಿ ದೇಸಿಂಗು.

ಬಾಲಕರು
ಗುಂಪು–2:
ಬಿ.ಜತಿನ್‌ (ಬಿಎಸ್‌ಆರ್‌ಸಿ)
ಗುಂಪು–3: ರೇಣುಕಾಚಾರ್ಯ ಹಾದಿಮನಿ
ಗುಂಪು–4: ಪಿ.ವಿ.ಮೋನಿಷ್‌.

ಫಲಿತಾಂಶಗಳು (ಚಿನ್ನ ಗೆದ್ದವರು)
18 ವರ್ಷ ಮತ್ತು ಮೇಲ್ಪಟ್ಟವರು:
100 ಮೀ. ಬ್ರೆಸ್ಟ್‌ಸ್ಟ್ರೋಕ್‌:ಲಿಖಿತ್‌ ಎಸ್‌.ಪಿ. (ಎನ್‌ಎಸಿ; 1ನಿ.04.68 ಸೆ.)
100 ಮೀ. ಬ್ಯಾಕ್‌ಸ್ಟ್ರೋಕ್‌: ಶ್ರೀಹರಿ ನಟರಾಜ್‌ (ಬಿಎಸ್‌ಆರ್‌ಸಿ, 58ನಿ.11 ಸೆ.)
200 ಮೀ. ಮೆಡ್ಲೆ: ಶಿವ ಎಸ್‌. (ಬಿಎಸಿ, 2ನಿ.11.16 ಸೆ.)
100 ಮೀ. ಬಟರ್‌ಫ್ಲೈ: ಶ್ರೀಹರಿ ನಟರಾಜ್‌ (ಬಿಎಸ್‌ಆರ್‌ಸಿ, 57.47 ಸೆ.)
100 ಮೀ. ಫ್ರೀಸ್ಟೈಲ್‌: ಶ್ರೀಹರಿ ನಟರಾಜ್‌ (ಬಿಎಸ್‌ಆರ್‌ಸಿ, 57.40 ಸೆ.).

ಗುಂಪು–1
100 ಮೀ. ಬ್ರೆಸ್ಟ್‌ಸ್ಟ್ರೋಕ್‌:
ಸಾಹಿಲ್‌ ಹೂಡ (ಡಾಲ್ಫಿನ್‌ ಅಕ್ವೆಟಿಕ್ಸ್‌)1
200 ಮೀ. ವೈಯಕ್ತಿಕ ಮೆಡ್ಲೆ: ಆರ್‌.ವೈಭವ್‌ ಶೇಟ್‌ (ಬಿಎಸ್‌ಆರ್‌ಸಿ, 2ನಿ.24.09 ಸೆ)
100 ಮೀ. ಬ್ಯಾಕ್‌ಸ್ಟ್ರೋಕ್‌: ಆದಿತ್ಯ ಬೋಪಣ್ಣ (ಎನ್‌ಎಸಿ, 1ನಿ.05.47 ಸೆ.)
4x100 ಮೀ. ಫ್ರೀಸ್ಟೈಲ್‌: ಎನ್‌ಎಸಿ (3ನಿ.53.69 ಸೆ.)
100 ಮೀ. ಬಟರ್‌ಫ್ಲೈ: ಜತಿನ್‌ ಬಿ. (ಬಿಎಸ್‌ಆರ್‌ಸಿ, 1ನಿ02.51 ಸೆ.)
100 ಮೀ ಫ್ರೀಸ್ಟೈಲ್‌: ಅಭಿಲಾಷ್‌ ಸಿ.ಎಚ್‌. (ಡಾಲ್ಫಿನ್‌ ಅಕ್ವೆಟಿಕ್ಸ್‌, 57.47 ಸೆ.)

ಗ್ರೂಪ್‌ 2
100 ಮೀ. ಬ್ರೆಸ್ಟ್‌ ಸ್ಟ್ರೋಕ್‌: ಪ್ರಣವ್‌ ಭಾರತಿ (ಪೂಜಾ ಅಕ್ವೆಟಿಕ್‌ ಸೆಂಟರ್‌, 1ನಿ.15.74 ಸೆ.)
100 ಮೀ. ಬ್ಯಾಕ್‌ಸ್ಟ್ರೋಕ್‌: ಆರ್‌.ಅಕ್ಷಯ್‌ ಶೇಟ್‌ (ಬಿಎಸ್‌ಆರ್‌ಸಿ, 1ನಿ.05.23 ಸೆ.)
200 ಮೀ. ವೈಯಕ್ತಿಕ ಮೆಡ್ಲೆ: ಅನಿಶ್‌ ಅಚ್ಯುತ (ಪೂಜಾ ಅಕ್ವೆಟಿಕ್ ಸೆಂಟರ್‌, 2ನಿ.32.12ಸೆ.)
4x100 ಮೀ. ಫ್ರೀಸ್ಟೈಲ್‌ ರಿಲೆ: ಪೂಜಾ ಅಕ್ವೆಟಿಕ್ ಸೆಂಟರ್‌ (4ನಿ.10.69 ಸೆ.)
4x50 ಮೀ. ಫ್ರೀಸ್ಟೈಲ್‌: ಪೂಜಾ ಅಕ್ವೆಟಿಕ್‌ ಸೆಂಟರ್‌ (2ನಿ.19.28 ಸೆ.)
100 ಮೀ. ಬಟರ್‌ಫ್ಲೈ: ಅನುಭವ್‌ ಪ್ರಶಾರ್‌ (ಡಾಲ್ಫಿನ್‌ ಅಕ್ವೆಟಿಕ್ಸ್‌, 1ನಿ.03.21 ಸೆ.)
100 ಮೀ. ಫ್ರೀಸ್ಟೈಲ್‌: ಆರ್‌.ಅಕ್ಷಯ್‌ ಶೇಟ್‌ (ಬಿಎಸ್‌ಆರ್‌ಸಿ, 59.14 ಸೆ.).

ಗುಂಪು–3
200 ಮೀ. ವೈಯಕ್ತಿಕ ಮೆಡ್ಲೆ: ರೇಣುಕಾಚಾರ್ಯ ಹಾದಿಮನಿ (ಡಾಲ್ಫಿನ್‌; 2ನಿ.40.81 ಸೆ.)
100 ಮೀ.ಬ್ರೆಸ್ಟ್‌ಸ್ಟ್ರೋಕ್‌: ಆರ್‌.ನವನೀತ್‌ ಗೌಡ (ಡಾಲ್ಫಿನ್‌; 1:26.84ಸೆ.)
100 ಮೀ.ಬ್ಯಾಕ್‌ಸ್ಟ್ರೋಕ್‌: ತನಯ್‌ ಸುರೇಶ್‌ (ವಿಜಯನಗರ ಈಜು ಕೇಂದ್ರ; 1:17.37ಸೆ.)
100 ಮೀ.ಬಟರ್‌ಫ್ಲೈ: ರೇಣುಕಾಚಾರ್ಯ ಹಾದಿಮನಿ (ಡಾಲ್ಫಿನ್‌;1:11.81ಸೆ.)
100 ಮೀ.ಫ್ರೀಸ್ಟೈಲ್‌: ರೇಣುಕಾಚಾರ್ಯ ಹಾದಿಮನಿ (1:06.72ಸೆ.).

ಗುಂಪು–4
50 ಮೀ.ಬ್ರೆಸ್ಟ್‌ಸ್ಟ್ರೋಕ್‌: ಜೆ. ಡೇನಿಯಲ್‌ ಪಾಲ್‌ (ಡಾಲ್ಫಿನ್‌; 44.04ಸೆ.)
50 ಮೀ.ಬ್ಯಾಕ್‌ಸ್ಟ್ರೋಕ್‌: ಶ್ರೀಹರಿ ಕಟ್ಟಿ (ಡಾಲ್ಫಿನ್‌; 38.95ಸೆ.)
200 ಮೀ.ವೈಯಕ್ತಿಕ ಮೆಡ್ಲೆ: ಪಿ.ವಿ.ಮೋನಿಷ್‌ (ಪೂಜಾ ಈಜು ಕೇಂದ್ರ; 2:51.00ಸೆ.)
50 ಮೀ.ಬಟರ್‌ಫ್ಲೈ: ಹರಿ ಕಾರ್ತಿಕ್‌ ವೇಲು (ಜಿಎಫ್‌ಎಸ್‌ಸಿ; 34.90ಸೆ.)
50 ಮೀ.ಫ್ರೀಸ್ಟೈಲ್‌: ಪಿ.ವಿ.ಮೋನಿಷ್‌ (ಪೂಜಾ ಕೇಂದ್ರ; 31.67ಸೆ.).

ಬಾಲಕಿಯರು
18 ಮತ್ತು ಅದಕ್ಕಿಂತ ಮೇಲ್ಪಟ್ಟವರು:
100 ಮೀ.ಬ್ರೆಸ್ಟ್‌ಸ್ಟ್ರೋಕ್: ರಿಯಾ ಸಿಂಗ್‌ (ಎನ್‌ಎಸಿ; 1:30.65ಸೆ.)
100 ಮೀ.ಬ್ಯಾಕ್‌ಸ್ಟ್ರೋಕ್‌: ಸುಷ್ಮಾ ಎಸ್‌.ಭಾರದ್ವಾಜ್‌ (ಅಕ್ವಾ ಕೇಂದ್ರ;1:26.67ಸೆ.)
200 ಮೀ.ಮೆಡ್ಲೆ: ರಿಯಾ ಸಿಂಗ್‌ (ಎನ್‌ಎಸಿ; 2:53.47ಸೆ.)
100 ಮೀ.ಫ್ರೀಸ್ಟೈಲ್‌: ರಿಯಾ ಸಿಂಗ್‌ (ಎನ್‌ಎಸಿ; 1:11.65ಸೆ.).

ಗುಂಪು–1
100 ಮೀ.ಬ್ರೆಸ್ಟ್‌ಸ್ಟ್ರೋಕ್‌: ಜಾರ ಇವಾ ವಿಲಿಯಮ್ಸ್‌ (ಡಾಲ್ಫಿನ್‌; 1:33.31ಸೆ.)
100 ಮೀ.ಬ್ಯಾಕ್‌ಸ್ಟ್ರೋಕ್‌: ಪಿ.ವೈಷ್ಣವಿ (ಎನ್‌ಎಸಿ; 1:15.87ಸೆ.)
4X100 ಮೀ.ಫ್ರೀಸ್ಟೈಲ್‌: ಎನ್‌ಎಸಿ (5:05.15ಸೆ.)
200 ಮೀ.ವೈಯಕ್ತಿಕ ಮೆಡ್ಲೆ: ಎನ್‌.ವಿದ್ಯಾಶ್ರೀ (ವಿಎಸಿ; 1:11.70ಸೆ.)
100 ಮೀ.ಫ್ರೀಸ್ಟೈಲ್‌: ಪಿ.ವೈಷ್ಣವಿ (1:05.68ಸೆ.).

ಗುಂಪು–2
100ಮೀ.ಬ್ರೆಸ್ಟ್‌ಸ್ಟ್ರೋಕ್‌: ವಿ.ಹಿತೈಷಿ (ವಿಎಸಿ; 1:21.9ಸೆ.)
200 ಮೀ.ವೈಯಕ್ತಿಕ ಮೆಡ್ಲೆ: ಎಸ್‌.ಲಕ್ಷ್ಯಾ (ಪೂಜಾ ಕೇಂದ್ರ; 2:44.32ಸೆ.)
100 ಮೀ.ಬ್ಯಾಕ್‌ಸ್ಟ್ರೋಕ್‌: ನೈಶಾ ಶೆಟ್ಟಿ (ಡಾಲ್ಫಿನ್‌; 1:15.63ಸೆ.)
4X100 ಮೀ.ಫ್ರೀಸ್ಟೈಲ್‌: ಪೂಜಾ ಕೇಂದ್ರ (4:38.33ಸೆ.)
4X50 ಮೀ. ಫ್ರೀಸ್ಟೈಲ್‌: ಪೂಜಾ ಕೇಂದ್ರ (2:25.84ಸೆ.)
100 ಮೀ.ಬಟರ್‌ಫ್ಲೈ: ಶಿರಿನ್‌ (ಪೂಜಾ;1:13.06ಸೆ.)
100 ಮೀ.ಫ್ರೀಸ್ಟೈಲ್‌: ಹಿತಾ ಆನಂದ್‌ (ಡಾಲ್ಫಿನ್‌; 1:05.72ಸೆ.).

ಗುಂಪು–3
100 ಮೀ.ಬ್ರೆಸ್ಟ್‌ಸ್ಟ್ರೋಕ್‌: ವಿಹಿತಾ ನಯನಾ (ಪೂಜಾ ಕೇಂದ್ರ)
200 ಮೀ.ವೈಯಕ್ತಿಕ ಮೆಡ್ಲೆ: ವಿಹಿತಾ ನಯನಾ (ಪೂಜಾ; 2:46.73ಸೆ.)
100 ಮೀ.ಬ್ಯಾಕ್‌ಸ್ಟ್ರೋಕ್‌: ಮಾನವಿ ವರ್ಮಾ (ಡಾಲ್ಫಿನ್‌; 1:16.07ಸೆ.)
100 ಮೀ.ಬಟರ್‌ಫ್ಲೈ: ಆರ್‌.ಹಶಿಕಾ (ವಿಎಸಿ; 1:14.20ಸೆ.)
100 ಮೀ.ಫ್ರೀಸ್ಟೈಲ್‌: ವಿಹಿತಾ ನಯನಾ (ಪೂಜಾ; 1:08.51ಸೆ.).

ಗುಂಪು–4
50 ಮೀ.ಬ್ರೆಸ್ಟ್‌ಸ್ಟ್ರೋಕ್‌: ಧಿನಿದಿ ದೇಸಿಂಗು (ಡಾಲ್ಫಿನ್‌; 41.95ಸೆ.)
50 ಮೀ.ಬ್ಯಾಕ್‌ಸ್ಟ್ರೋಕ್‌: ಧಿನಿದಿ ದೇಸಿಂಗು (ಡಾಲ್ಫಿನ್‌; 37.83ಸೆ.)
200 ಮೀ.ವೈಯಕ್ತಿಕ ಮೆಡ್ಲೆ: ಧಿನಿದು ದೇಸಿಂಗು (ಡಾಲ್ಫಿನ್‌; 2:51.51ಸೆ.)
50 ಮೀ.ಬಟರ್‌ಫ್ಲೈ: ತನಿಶಾ ವಿನಯ್‌ (ಪೂಜಾ; 38.40ಸೆ.)
50 ಮೀ.ಫ್ರೀಸ್ಟೈಲ್‌: ಮೋನ್ಯಾ ಕೌಶುಮಿ (ಎನ್‌ಎಸಿ; 33.43ಸೆ.)
4X100 ಮೀ.ಮಿಶ್ರ ರಿಲೇ: 15 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು: ಎನ್‌ಎಸಿ (4:39.52ಸೆ)
11 ಮತ್ತು 14 ವರ್ಷದೊಳಗಿನವರು: ವಿಎಸಿ (4:54.07ಸೆ.)
4X50 ಮೀ. ಮಿಶ್ರ ರಿಲೆ (9–10 ವರ್ಷದೊಳಗಿನವರು): ಡಾಲ್ಫಿನ್‌ (2:34.56ಸೆ.).

**

ನಗದು ಬಹುಮಾನ ನೀಡಿದ್ದು ಸ್ವಾಗತಾರ್ಹ. ಇದರಿಂದ ಜೂನಿಯರ್‌ ಮತ್ತು ಸಬ್‌ ಜೂನಿಯರ್‌ ಈಜುಪಟುಗಳಲ್ಲಿ ಹೊಸ ಹುಮ್ಮಸ್ಸು ಮೂಡುತ್ತದೆ.
-ಶ್ರೀಹರಿ ನಟರಾಜ್‌, ಒಲಿಂಪಿಯನ್‌ ಈಜುಪಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT