ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಒಎನಲ್ಲಿ ಮುಂದುವರಿದ ‘ಮುಸುಕಿನ ಗುದ್ದಾಟ’

ಮರು ಸೇರ್ಪಡೆ ಮಾಡುವಂತೆ ಮೆಹ್ತಾಗೆ ಸೂಚಿಸಿದ ಬಾತ್ರಾ
Last Updated 22 ಜೂನ್ 2020, 10:00 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಒಲಿಂಪಿಕ್‌ ಸಂಸ್ಥೆಯಲ್ಲಿ (ಐಒಎ) ಅಧಿಕಾರದ ಚುಕ್ಕಾಣಿ ಹಿಡಿದಿರುವವರ ನಡುವಣ ‘ಮುಸುಕಿನ ಗುದ್ದಾಟ’ ಮುಂದುವರಿದಿದೆ.

ಸಹಾಯಕ ಸದಸ್ಯರ ಹೆಸರುಗಳನ್ನು ಐಒಎ ವೆಬ್‌ಸೈಟ್‌ನಿಂದ ತೆಗೆದು ಹಾಕಿರುವುದಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲರ ಹೆಸರನ್ನೂ ಮರು ಸೇರ್ಪಡೆ ಮಾಡುವಂತೆ ಅಧ್ಯಕ್ಷ ನರಿಂದರ್ ಬಾತ್ರಾ ಅವರು ಮಹಾ ಕಾರ್ಯದರ್ಶಿ ರಾಜೀವ್‌ ಮೆಹ್ತಾ ಅವರಿಗೆ ಸೂಚಿಸಿದ್ದಾರೆ.

‘ಸಹಾಯಕ ಉಪಾಧ್ಯಕ್ಷರು, ಸಹಾಯಕ ಜಂಟಿ ಕಾರ್ಯದರ್ಶಿಗಳು ಹಾಗೂ ಸಹಾಯಕ ಕಾರ್ಯಕಾರಿ ಮಂಡಳಿ ಸದಸ್ಯರ ಹೆಸರುಗಳನ್ನು ವೆಬ್‌ಸೈಟ್‌ನಿಂದ ತೆಗೆದುಹಾಕಿದ್ದನ್ನು ಖಂಡಿಸಿ ಸಹದೇವ್‌ ಯಾದವ್‌ ಅವರು ನನಗೆ ಪತ್ರ ಬರೆದಿದ್ದಾರೆ. ಅದನ್ನು ನಿಮಗೂ ಕಳಿಸಿದ್ದೇನೆ.ಗೊತ್ತಿಲ್ಲದೆಯೇ ಈ ಪ್ರಮಾದ ಆಗಿರಬಹುದು ಎಂದು ಭಾವಿಸಿದ್ದೇನೆ. ದಯವಿಟ್ಟು ಎಲ್ಲರ ಹೆಸರುಗಳನ್ನು ಮರು ಸೇರ್ಪಡೆ ಮಾಡಿ’ ಎಂದು ಮೆಹ್ತಾಗೆ ರವಾನಿಸಿರುವ ಇ–ಮೇಲ್‌ನಲ್ಲಿ ಬಾತ್ರಾ ಹೇಳಿದ್ದಾರೆ.

‘ನಿಮ್ಮ ಸೂಚನೆಯ ಅನುಸಾರವೇ ಅವರ ಹೆಸರುಗಳನ್ನು ತೆಗೆದುಹಾಕಿದ್ದರೆ ಆದಷ್ಟು ಬೇಗ ಮರು ಸೇರ್ಪಡೆ ಮಾಡಿ. ಇದನ್ನು ಸಲಹೆ ಎಂದೇ ‍ಪರಿಗಣಿಸಿ’ ಎಂದೂ ಅವರು ತಿಳಿಸಿದ್ದಾರೆ.

‘ಐಒಎ ನಿಯಮಾವಳಿಗಳ ಅನುಸಾರ ಚುನಾಯಿತ ಸದಸ್ಯರ ಹೆಸರುಗಳನ್ನಷ್ಟೇ ಕಾರ್ಯಕಾರಿ ಮಂಡಳಿ ವಿಭಾಗದಲ್ಲಿ ಉಳಿಸಿಕೊಳ್ಳಲಾಗಿದೆ.ಸಹಾಯಕ ಸದಸ್ಯರ ಹೆಸರುಗಳಿಗಾಗಿಯೇ ವೆಬ್‌ಸೈಟ್‌ನಲ್ಲಿ ಪ್ರತ್ಯೇಕ ವಿಭಾಗವೊಂದನ್ನು ತೆರೆದಿದ್ದೇವೆ. ಈ ಕುರಿತು ಸಹದೇವ್‌ ಯಾದವ್‌ ಅವರಿಗೂ ಮಾಹಿತಿ ನೀಡಿದ್ದೇವೆ’ ಎಂದು ಮೆಹ್ತಾ ವಿವರಣೆ ನೀಡಿದ್ದಾರೆ.

ಮೆಹ್ತಾ ಅವರಿಂದ ಕೆಲ ಜವಾಬ್ದಾರಿಗಳನ್ನು ಹಿಂಪಡೆದು ಅವುಗಳನ್ನು ತಾವೇ ನಿರ್ವಹಿಸಲು ಬಾತ್ರಾ ಆಸಕ್ತಿ ತೋರಿದ್ದರು. ಈ ವಿಷಯವನ್ನು ಅವರು ಮೆಹ್ತಾ ಗಮನಕ್ಕೂ ತಂದಿದ್ದರು. ಅಂದಿನಿಂದ ಮೆಹ್ತಾ ಮತ್ತು ಐಒಎ ಉಪಾಧ್ಯಕ್ಷ ಸುಧಾಂಶು ಮಿತ್ತಲ್‌ ಅವರ ಬಣವು ಬಾತ್ರಾ ವಿರುದ್ಧ ತಿರುಗಿ ಬಿದ್ದಿದೆ. ಹೀಗಾಗಿ ಸಂಸ್ಥೆಯಲ್ಲಿ ಹಗ್ಗ ಜಗ್ಗಾಟ ಶುರುವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT