ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ದು ಕಂಡು ಹಿಡಿಯದೇ ಆಟ ಕಷ್ಟ: ಸಾಯಿ ಪ್ರಣೀತ್‌

ವಾಡಾ ಪಾತ್ರವೂ ಮುಖ್ಯ
Last Updated 30 ಏಪ್ರಿಲ್ 2020, 20:15 IST
ಅಕ್ಷರ ಗಾತ್ರ

ನವದೆಹಲಿ: ಕ್ರೀಡೆಗಳು ಮತ್ತೆ ಆರಂಭವಾಗಲು ಕೊರೊನಾ ವೈರಸ್‌ಗೆ ಚುಚ್ಚುಮದ್ದು ಕಂಡುಹಿಡಿಯುವುದು ತುರ್ತು ಅಗತ್ಯ. ಆದರೆ ಈ ಚುಚ್ಚುಮದ್ದಿಗೆ ವಿಶ್ವ ಉದ್ದೀಪನ ಮದ್ದು ಸೇವನೆ ತಡೆ ಘಟಕದ (ವಾಡಾ) ಸಮ್ಮತಿಯೂ ಅಗತ್ಯ. ಇಲ್ಲದಿದ್ದರೆ ಅಥ್ಲೀಟುಗಳು ವಿನಾ ಕಾರಣ ಸಮಸ್ಯೆ ಎದುರಿಸಬೇಕಾದೀತು ಎಂದು ಭಾರತದ ಬ್ಯಾಡ್ಮಿಂಟನ್‌ ಆಟ ಗಾರ ಬಿ.ಸಾಯಿ ಪ್ರಣೀತ್‌ ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ವೈರಸ್‌ ಚುಚ್ಚು ಮದ್ದು ತೆಗೆದುಕೊಳ್ಳು ವುದನ್ನು ಕಡ್ಡಾಯ ಮಾಡುವುದಕ್ಕೆ ತಮ್ಮ ವಿರೋಧವಿದೆ ಎಂದು ಟೆನಿಸ್‌ ತಾರೆ ನೊವಾಕ್‌ ಜೊಕೊವಿಚ್ ಇತ್ತೀಚೆಗಷ್ಟೇ ಹೇಳಿದ್ದರು.

‘ನನಗೆ ಅಂಥ ಕಳವಳಗಳಿಲ್ಲ. ಆದರೆ ಒಟ್ಟಾರೆ ಕ್ರೀಡಾಪಟುಗಳಿಗೆ ತೊಂದರೆಯಾಗಬಾರದಷ್ಟೇ. ಚುಚ್ಚುಮದ್ದಿನಲ್ಲಿ ಸಾಮರ್ಥ್ಯವೃದ್ಧಿಸುವ ಮಾದಕ ವಸ್ತು ಇಲ್ಲದಿದ್ದರೆ ವಾಡಾ ಅದನ್ನು ಪಟ್ಟಿಯಲ್ಲಿ ಸೇರಿಸಬಹುದು’ ಎಂದು ಪ್ರಣೀತ್‌ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT