ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರ್ವೆ ಚೆಸ್‌ ಟೂರ್ನಿ: ವಿಶ್ವನಾಥನ್‌ ಆನಂದ್‌ಗೆ ಕರುವಾನ ಎದುರಾಳಿ

Last Updated 12 ಜೂನ್ 2019, 17:34 IST
ಅಕ್ಷರ ಗಾತ್ರ

ಸ್ಟಾವಂಜರ್‌ (ನಾರ್ವೆ): ಐದು ಬಾರಿಯ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌, ಆಲ್ಟಿಬಾಕ್ಸ್‌ ನಾರ್ವೆ ಚೆಸ್‌ ಟೂರ್ನಿಯ ಏಳನೇ ಸುತ್ತಿನಲ್ಲಿ ಗುರುವಾರ ಅಮೆರಿಕದ ಫ್ಯಾಬಿಯಾನೊ ಕರುವಾನ ಎದುರು ಆಡಲಿದ್ದಾರೆ. ಬುಧವಾರ ಈ ಟೂರ್ನಿಗೆ ವಿಶ್ರಾಂತಿ ದಿನವಾಗಿತ್ತು.

ಭಾರತದ ಆಗ್ರಮಾನ್ಯ ಆಟಗಾರ 5.5 ಅಂಕಗಳೊಂದಿಗೆ ಟೂರ್ನಿಯಲ್ಲಿ ಜಂಟಿಯಾಗಿ ಐದನೇ ಸ್ಥಾನ ಹಂಚಿಕೊಂಡಿದ್ದಾರೆ. ಆರಂಭದ ಹಿನ್ನಡೆಯಿಂದ ಚೇತರಿಸಿಕೊಳ್ಳಲು ಆನಂದ್‌ ಇನ್ನುಳಿದ ಪಂದ್ಯಗಳಲ್ಲಿ ಉತ್ತಮ ಸಾಧನೆ
ತೋರಲೇಬೇಕಾಗಿದೆ.

ಈ ಟೂರ್ನಿಯ ಪ್ರತಿ ಸುತ್ತಿನಲ್ಲಿ ನಿರ್ಣಾಯಕ ಫಲಿತಾಂಶ ಪಡೆಯಬೇಕಾಗುತ್ತದೆ. ಇಲ್ಲದಿದ್ದರೆ ಸುತ್ತಿನ ವಿಜಯಿಯನ್ನು ನಿರ್ಧರಿಸಲು ಟೈಬ್ರೇಕ್‌ ಪಂದ್ಯ ಆಡಬೇಕಾಗುತ್ತದೆ. ಆನಂದ್‌ ಮೊದಲ ಎರಡು ಸುತ್ತುಗಳಲ್ಲಿ ಕ್ರಮವಾಗಿ ವಿಶ್ವ ಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್‌ಸನ್‌ ಮತ್ತು ಶಕ್ರಿಯಾರ್‌ ಮೆಮೆಡ್ಯರೋವ್‌ ವಿರುದ್ಧ ಸೋಲನುಭವಿಸಿದ್ದರು. ನಂತರ ಸತತ ಮೂರು ಗೆಲುವಿನೊಡನೆ ಚೇತರಿಸಿಕೊಂಡಿದ್ದರು. ಆದರೆ, ಭಾರತದ ಆಟಗಾರ ಆರನೇ ಸುತ್ತಿನಲ್ಲಿ ಯು ಯಾಂಗಿ ವಿರುದ್ಧ ಸೋಲನುಭವಿಸಿದ್ದರು.

ಕಾರ್ಲ್‌ಸನ್‌ ವರ್ಷದ ಆರನೇ ಪ್ರಶಸ್ತಿಯತ್ತ ದಾಪುಗಾಲಿಟ್ಟಿದ್ದು, 9.5 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಚೀನಾದ ಯಾಂಗಿ ಎಂಟು ಪಾಯಿಂಟ್‌ಗಳೊಡನೆ ಎರಡನೇ ಒಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ.

ಅರ್ಮೇನಿಯಾದ ಲೆವೊನ್‌ ಅರೋನಿಯನ್‌ 7.5 ಅಂಕಗಳೊಂದಿಗೆ ಮೂರನೇ ಮತ್ತು ಅಮೆರಿಕದ ವೆಸ್ಲಿ ಸೊ (6.5) ನಾಲ್ಕನೇ ಸ್ಥಾನದಲ್ಲಿದ್ದಾರೆ.

ಅಗ್ರ ಕ್ರಮಾಂಕದ ಆಟಗಾರ ಕಾರ್ಲ್‌ಸನ್‌ ಎರಡು ಬಾರಿ ಅದೃಷ್ಟದ ಬೆಂಬಲವನ್ನೂ ಪಡೆದಿದ್ದಾರೆ. ಅರೋನಿಯನ್ ಎದುರು ಟೈಬ್ರೇಕರ್‌ನ ಕೊನೆಯಲ್ಲಿ ಅವರು ಸೋಲಿನ ಸುಳಿಯಿಂದ ಸ್ವಲ್ಪದರಲ್ಲೇ ಪಾರಾಗಿದ್ದರು. ಡಿಂಗ್‌ ಲಾರೆನ್‌ ಅವರು ಕಾರ್ಲ್‌ಸನ್‌ ಎದುರು ಬಹುತೇಕ ಉತ್ತಮ ಸ್ಥಿತಿಯಲ್ಲಿದ್ದರೂ ಅಂತಿಮ ಕೆಲಕ್ಷಣಗಳಲ್ಲಿ ಎಡವಿದ್ದರು. ಕಾರ್ಲ್‌ಸನ್‌ ಮುಂದಿನ ಪಂದ್ಯವನ್ನು ವೆಸ್ಲಿ ಸೊ ವಿರುದ್ಧ ಆಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT