ಭಾನುವಾರ, ಜುಲೈ 25, 2021
28 °C
ರಾಷ್ಟ್ರೀಯ ರೈಫಲ್‌ ಅಸೋಸಿಯೇಷನ್‌ನಿಂದ ಶೂಟರ್‌ಗಳಿಗೆ ಸೂಚನೆ

ಶೂಟಿಂಗ್‌: ಅನಧಿಕೃತ ಆನ್‌ಲೈನ್‌ ಲೀಗ್‌ಗಳಿಂದ ದೂರವಿರಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅನಧಿಕೃತ ಆನ್‌ಲೈನ್‌ ಲೀಗ್‌ಗಳಿಂದ ದೂರವಿರುವಂತೆ ಭಾರತ ರಾಷ್ಟ್ರೀಯ ರೈಫಲ್‌ ಅಸೋಸಿಯೇಷನ್‌ (ಎನ್‌ಆರ್‌ಎಐ) ದೇಶದ ಶೂಟರ್‌ಗಳಿಗೆ ಸೂಚಿಸಿದೆ. ಒಂದೊಮ್ಮೆ ಅಂತಹ ಟೂರ್ನಿಗಳಲ್ಲಿ ಪಾಲ್ಗೊಂಡರೆ ಶಿಸ್ತು ಕ್ರಮ ಎದುರಿಸಬೇಕಾದೀತು ಎಂದೂ ಎಚ್ಚರಿಸಿದೆ.

ತಾನು ಅಂತಹ ಯಾವುದೇ ಟೂರ್ನಿಗಳಿಗೆ ಅನುಮತಿ ನೀಡಿಲ್ಲ ಎಂದು ಎನ್‌ಆರ್‌ಎಐ ಸ್ಪಷ್ಟಪಡಿಸಿದೆ.

‘ಅಸೋಸಿಯೇಷನ್‌ನ ಅನುಮತಿಯಿಲ್ಲದೆ ಅನಧಿಕೃತ ಆನ್‌ಲೈನ್‌ ಲೀಗ್‌ಗಳು ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇಂತಹ ಯಾವುದೇ ಲೀಗ್‌ ಪಂದ್ಯಗಳಲ್ಲಿ ಭಾಗವಹಿಸುವುದು ಅಥವಾ ಸಹಕಾರ ನೀಡುವುದನ್ನು ಮಾಡುವಂತಿಲ್ಲ ಎಂದು ಶೂಟರ್‌ಗಳಿಗೆ ಸೂಚಿಸಲಾಗಿದೆ’ ಎಂದು ಎನ್‌ಆರ್‌ಎಐ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ದೇಶದ ಶೂಟರ್‌ಗಳಿಗಾಗಿ ಭಾರತದ ಹಿರಿಯ ಶೂಟರ್‌ ಶಿಮೊನ್‌ ಶರೀಫ್‌ ಅವರು ಇತ್ತೀಚೆಗೆ ಅಂತರರಾಷ್ಟ್ರೀಯ ಲೀಗ್‌ ನಡೆಸಿದ್ದರು. ಎನ್‌ಆರ್‌ಎಐನ ಹೇಳಿಕೆಗೆ ಸಂಬಂಧಿಸಿದ ಅನಧಿಕೃತ ಲೀಗ್‌ ಇದೇ ಎಂದು ಹೇಳಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು