ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಳ ಮದುವೆಯಾದ ದೀಪಿಕಾ–ಅತಾನು: ಅತಿಥಿಗಳಿಗೆ ಮಾಸ್ಕ್‌, ಸ್ಯಾನಿಟೈಸರ್ ಕಾಣಿಕೆ

Last Updated 27 ಜೂನ್ 2020, 16:15 IST
ಅಕ್ಷರ ಗಾತ್ರ

ಕೋಲ್ಕತ್ತ: ಒಲಿಂಪಿಯನ್ ಆರ್ಚರಿಪಟು ದೀಪಿಕಾ ಕುಮಾರಿ ಮತ್ತು ಅತಾನು ದಾಸ್ ಅವರ ವಿವಾಹವು ಮಂಗಳವಾರ ರಾಂಚಿಯ ಮೊರಾಬಾದಿಯಲ್ಲಿ ಸರಳವಾಗಿ ನೆರವೇರಿತು.

’ಕೋವಿಡ್‌ –19 ಸೋಂಕು ಪ್ರಸರಣವನ್ನು ತಡೆಯಲು ನಮ್ಮ ಕಾರ್ಯಕ್ರಮದಲ್ಲಿ ಎಲ್ಲ ಕ್ರಮಗಳನ್ನು ಪಾಲಿಸಿದ್ದೇವೆ. ಕೇವಲ 60 ಆಹ್ವಾನ ಪತ್ರಗಳನ್ನು ಮಾತ್ರ ಮುದ್ರಿಸಿ ಹಂಚಲಾಗಿತ್ತು. ಬಂದವರಿಗೆಲ್ಲ ಮಾಸ್ಕ್‌, ಸ್ಯಾನಿಟೈಸರ್‌ಗಳನ್ನು ನೀಡಿದ್ದೆವು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ದೊಡ್ಡ ಸಭಾಂಗಣದಲ್ಲಿ ಮದುವೆ ನಡೆಯಿತು. ಯಾರೂ ಯಾವುದೇ ವಸ್ತು ಅಥವಾ ಪರಸ್ಪರ ಸ್ಪರ್ಶ ಮಾಡದಂತೆ ನೋಡಿಕೊಳ್ಳಲಾಯಿತು. ರೀತಿ, ರಿವಾಜುಗಳನ್ನು ಸಾಂಗವಾಗಿ ನೆರವೇರಿಸಲಾಯಿತು‘ ಎಂದು ದೀಪಿಕಾ ಕುಮಾರಿ ತಿಳಿಸಿದ್ದಾರೆ. ‌

’ನಮ್ಮ ಅತಿಥಿಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಿದ್ದೆವು. 50–50 ರ ಎರಡು ಬ್ಯಾಚ್‌ಗಳಿದ್ದವು ಮೊದಲ ಬ್ಯಾಚ್‌ ಸಂಜೆ 5.30ರಿಂದ 7 ಗಂಟೆ ಮತ್ತು ಎರಡನೇ ಬ್ಯಾಚ್‌ನಲ್ಲಿನವರು ನಂತರದ ಅವಧಿಯಲ್ಲಿ ಬಂದು ಶುಭ ಹಾರೈಸಿದರು. ನಮ್ಮಿಬ್ಬರ ಕುಟುಂಬದ ಸದಸ್ಯರು ಮನೆಯಲ್ಲಿಯೇ ಇದ್ದರು. ಇಲ್ಲಿಂದ ಅತಿಥಿಗಳು ನಿರ್ಗಮಿಸಿದ ನಂತರ ಅವರು ಬಂದರು‘ ಎಂದು ದೀಪಿಕಾ ವಿವರಿಸಿದರು.

’ಕೆಲವೇ ಅತಿಥಿಗಳನ್ನು ಆಹ್ವಾನಿಸಿದ್ದೆವು. ಸ್ನೇಹಿತರು, ಸಹ ಆರ್ಚರಿ ಪಟುಗಳು ಮತ್ತು ಮಾಧ್ಯಮದವರಿಗೆ ಆಹ್ವಾನ ನೀಡಿರಲಿಲ್ಲ‘ ಎಂದು ಸ್ಪಷ್ಟಪಡಿಸಿದರು.

2018ರಲ್ಲಿ ದೀಪಿಕಾ ಮತ್ತು ಅತಾನು ಅವರು ನಿಶ್ಚಿತಾರ್ಥ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT