ಶುಕ್ರವಾರ, ಸೆಪ್ಟೆಂಬರ್ 24, 2021
21 °C

ಹಾಕಿ ತಂಡಗಳಿಗೆ ಇನ್ನೂ 10 ವರ್ಷ ಒಡಿಶಾ ಪ್ರಾಯೋಜಕತ್ವ: ಸಿಎಂ ನವೀನ್‌ ಪಾಟ್ನಾಯಕ್

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಭುವನೇಶ್ವರ: ಮುಂದಿನ 10 ವರ್ಷಗಳವರೆಗೆ ಪುರುಷರು ಹಾಗೂ ಮಹಿಳೆಯರ ರಾಷ್ಟ್ರೀಯ ಹಾಕಿ ತಂಡದ ಅಧಿಕೃತ ಪ್ರಾಯೋಜಕತ್ವವನ್ನು ಒಡಿಶಾ ಸರ್ಕಾರ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ತಿಳಿಸಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಭಾರತೀಯ ಹಾಕಿ ಆಟಗಾರರಿಗೆ ಭುವನೇಶ್ವರದಲ್ಲಿ ಮಂಗಳವಾರ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆಟಗಾರರಿಗೆ ತಲಾ ₹10 ಲಕ್ಷ ಬಹುಮಾನ ನೀಡಿ ಮಾತನಾಡಿರುವ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್, 'ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಮ್ಮ ತಂಡಗಳು ಅದ್ಭುತ ಪ್ರದರ್ಶನ ನೀಡಿವೆ. ಇದೊಂದು ಐತಿಹಾಸಿಕ ಸಾಧನೆಯಾಗಿದೆ' ಎಂದು ತಿಳಿಸಿದ್ದಾರೆ.

2018ರಿಂದ ಎರಡೂ ತಂಡಗಳ ಪ್ರಾಯೋಜಕತ್ವವನ್ನು ಒಡಿಶಾ ವಹಿಸಿಕೊಂಡಿದೆ. ಇನ್ನೂ 10 ವರ್ಷಗಳವರೆಗೆ ಇದು ಮುಂದುವರೆಯಲಿದೆ ಎಂದು ಪಾಟ್ನಾಯಕ್ ಘೋಷಿಸಿದ್ದಾರೆ.

ಪುರುಷರು ಮತ್ತು ಮಹಿಳೆಯರ ರಾಷ್ಟ್ರೀಯ ಹಾಕಿ ತಂಡದ ಅಧಿಕೃತ ಪ್ರಾಯೋಜಕತ್ವ ಪಡೆದಿರುವ ಒಡಿಶಾ, 2018ರಿಂದಲೂ ಎರಡೂ ತಂಡಗಳಿಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತಿದೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತೀಯ ಪುರುಷರ ಹಾಕಿ ತಂಡವು 41 ವರ್ಷಗಳ ನಂತರ ಪದಕ ಗೆಲ್ಲುವಲ್ಲಿ ಸಫಲವಾಗಿದೆ.

ಮಹಿಳಾ ಹಾಕಿ ತಂಡವು ಕ್ರೀಡಾ ಕೂಟದಲ್ಲಿ ಅಚ್ಚರಿಯ ಪ್ರದರ್ಶನ ನೀಡಿದ್ದು, ಮೂರನೇ ಸ್ಥಾನದ ಪೈಪೋಟಿಯಲ್ಲಿ ಗ್ರೇಟ್‌ ಬ್ರಿಟನ್‌ ವಿರುದ್ಧ ವೀರೋಚಿತ ಸೋಲು ಕಂಡಿದೆ. ಆದರೂ, ಉತ್ತಮ ಪ್ರದರ್ಶನಕ್ಕಾಗಿ ಮಹಿಳಾ ಹಾಕಿ ತಂಡವು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು