ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ಗೆ ರಹದಾರಿ ಗಿಟ್ಟಿಸಿದ ಇರ್ಫಾನ್

Last Updated 17 ಮಾರ್ಚ್ 2019, 20:24 IST
ಅಕ್ಷರ ಗಾತ್ರ

ನವದೆಹಲಿ: ಅಥ್ಲೀಟ್ ಕೆ.ಟಿ. ಇರ್ಫಾನ್ ಮುಂದಿನ ವರ್ಷ ಟೊಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ್ದಾರೆ. ಇದರೊಂದಿಗೆ ಒಲಿಂಪಿಕ್ಸ್‌ ಕೂಟಕ್ಕೆ ರಹದಾರಿ ಪಡೆದ ಭಾರತದ ಮೊದಲ ಅಥ್ಲೀಟ್‌ ಆಗಿದ್ದಾರೆ.

ಜಪಾನ್‌ನ ನೊಮಿಯಲ್ಲಿ ಭಾನುವಾರ ನಡೆದ ಏಷ್ಯನ್ ರೇಸ್‌ ವಾಕಿಂಗ್ 20 ಕಿ.ಮೀ ವಿಭಾಗದಲ್ಲಿ ಅವರು ನಾಲ್ಕನೇ ಸ್ಥಾನ ಪಡೆದರು. ಒಂದು ಗಂಟೆ, 20 ನಿಮಿಷ ಮತ್ತು 57 ಸೆಕೆಂಡುಗಳಲ್ಲಿ ಅವರು ಗುರಿ ಮುಟ್ಟಿದರು. ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಲು ಒಂದು ಗಂಟೆ 21 ನಿಮಿಷಗಳನ್ನು ನಿಗದಿ ಮಾಡಲಾಗಿತ್ತು.

ಜಪಾನಿನ ತೊಷಿಕಾಜು ಯಮನಿಶಿ 1ಗಂಟೆ,17 ನಿಮಿಷ, 15 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಮೊದಲಿಗರಾದರು. ಕಜಕಸ್ತಾನದ ಜಾರ್ಜಿಯಾ ಶೀಕೊ ಮತ್ತು ಕೊರಿಯಾದ ಬ್ಯಾಂಗ್‌ವಾಂಗ್ ಚೋ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು.

ರೇಸ್‌ ವಾಕಿಂಗ್‌ ಸ್ಪರ್ಧೆಗೆ ಒಲಿಂಪಿಕ್ಸ್‌ ಅರ್ಹತಾ ಸುತ್ತುಗಳನ್ನು ಜನವರಿ ಒಂದರಿಂದ ಆರಂಭಿಸಲಾಗಿದೆ. ಮೇ 31ರವರೆಗೂ ಇನ್ನೂ ಅವಕಾಶವಿದೆ.

ಇಲ್ಲಿಯವರೆಗೂ ಭಾರತದ ಯಾವ ಅಥ್ಲೀಟ್‌ ಕೂಡ ಇನ್ನೂ ಅರ್ಹತೆ ಗಿಟ್ಟಿಸಿಲ್ಲ. 29 ವರ್ಷದ ಇರ್ಫಾನ್ ಅವರು ರಾಷ್ಟ್ರೀಯ ದಾಖಲೆ (1ಗಂಟೆ; 20ನಿ, 21ಸೆ) ಹೊಂದಿದ್ದಾರೆ. 2012ರಲ್ಲಿ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಅವರು ಹತ್ತನೇ ಸ್ಥಾನ ಪಡೆದಿದ್ದರು. ಇದೇ ವರ್ಷದ ಸೆಪ್ಟೆಂಬರ್ 27ರಿಂದ ದೋಹಾದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅವರು ಸ್ಪರ್ಧಿಸಲಿದ್ದಾರೆ.

ಕೇರಳದ ಇರ್ಫಾನ್ ಅವರು ಹೋದ ವರ್ಷ ರಾಷ್ಟ್ರೀಯ ಓಪನ್ ರೇಸ್ ವಾಕ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

2018ರ ಗೋಲ್ಡ್‌ಕೋಸ್ಟ್‌ ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಇರ್ಫಾನ್ ಅವರನ್ನು ಸಿರಿಂಜ್ ಬಳಕೆ ನಿಷೇಧ ನಿಯಮವನ್ನು ಉಲ್ಲಂಘಿಸಿದ್ದರಿಂದ ಅಮಾನತುಗೊಳಿಸಲಾಗಿತ್ತು. ಅದೇ ವರ್ಷ ಏಷ್ಯನ್ ಗೇಮ್ಸ್‌ನಲ್ಲಿಯೂ ಅವರು ತಂಡದೊಂದಿಗೆ ಸಂಪರ್ಕ ನಿರ್ವಹಿಸದೇ ಇದ್ದ ಕಾರಣ ಮೂರು ಬಾರಿ ಎಚ್ಚರಿಕೆ ನೀಡಲಾಗಿತ್ತು. ನಂತರ ಅನರ್ಹಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT