ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡೊನೇಷ್ಯಾ ಜಿಪಿ: ಪ್ರಶಸ್ತಿಗೆ ಮುತ್ತಿಕ್ಕಿದ ಒಲಿವೆರಾ

ಇಂಡೊನೇಷ್ಯಾ ಮೋಟೊ ಜಿಪಿ: ವಿಶ್ವ ಚಾಂಪಿಯನ್ ಫ್ರಾನ್ಸ್‌ನ ಫ್ಯಾಬಿಯೊ ಕ್ವಾರ್ಟರರೊಗೆ ನಿರಾಸೆ
Last Updated 20 ಮಾರ್ಚ್ 2022, 19:41 IST
ಅಕ್ಷರ ಗಾತ್ರ

ಮಾಂಡಲಿಕ, ಇಂಡೊನೇಷ್ಯಾ: ಧಾರಾಕಾರ ಮಳೆಯಿಂದ ಉಂಟಾದ ಪ್ರತಿಕೂಲ ಸನ್ನಿವೇಶದಲ್ಲೂ ಎದೆಗುಂದದೆ ಮುನ್ನುಗ್ಗಿದ ಪೋರ್ಚುಗಲ್‌ನ ಮಿಗೇಲ್ಒಲಿವೆರಾ ಅವರು ಇಂಡೊನೇಷ್ಯಾ ಮೋಟೊ ಜಿಪಿ ರೇಸ್‌ನ ಪ್ರಶಸ್ತಿ ಗೆದ್ದುಕೊಂಡರು.

ಕೆಎಂಟಿ ಚಾಲಕ ಇಲಿವೆರಾ ಅವರು ಭಾನುವಾರ ಮಾಂಡಲಿಕ ಅಂತರರಾಷ್ಟ್ರೀಯ ಸರ್ಕಿಟ್‌ನಲ್ಲಿ ನಡೆದ ಮುಖ್ಯ ಸುತ್ತಿನ ಸ್ಪರ್ಧೆಯಲ್ಲಿ ವಿಶ್ವ ಚಾಂಪಿಯನ್ ಫ್ರಾನ್ಸ್‌ನ ಫ್ಯಾಬಿಯೊ ಕ್ವಾರ್ಟರರೊ ಅವರನ್ನು 2.205 ಸೆಕೆಂಡುಗಳ ಅಂತರದಲ್ಲಿ ಹಿಂದಿಕ್ಕಿದರು. ಯಮಾಹಾ ವಾಹನದಲ್ಲಿ ಮುನ್ನುಗ್ಗಿದ ಅವರು ಪ್ರಶಸ್ತಿಯನ್ನು ಈಚೆಗೆ ಜನಿಸಿದ ಪುತ್ರಿಗೆ ಅರ್ಪಿಸುವುದಾಗಿ ತಿಳಿಸಿದರು.

ಅಪಘಾತಗಳು ಸಂಭವಿಸುವ ಸಾಧ್ಯತೆ ಇದ್ದುದರಿಂದ 27 ಲ್ಯಾಪ್‌ಗಳ ಬದಲಿಗೆ 20 ಲ್ಯಾಪ್‌ಗಳಿಗೆ ರೇಸ್ ಸೀಮಿತಗೊಳಿಸಲಾಗಿತ್ತು. ಫ್ರಾನ್ಸ್‌ನ ಮತ್ತೊಬ್ಬ ಚಾಲಕ ಜೊಹಾನ್ ಜರ್ಕೊ ಕೂಡ ಅಗ್ರ 10ರಲ್ಲಿ ಸ್ಥಾನ ಗಳಿಸಿದರು.ಮಳೆಯಿಂದಾಗಿ ರೇಸ್ 75 ನಿಮಿಷ ತಡವಾಗಿ ಆರಂಭಗೊಂಡಿತ್ತು.

ಮೊದಲ ಲ್ಯಾಪನ್‌ ಆರಂಭದಲ್ಲಿ ಕ್ವಾರ್ಟರರೊ ಮುನ್ನಡೆ ಸಾಧಿಸಿದ್ದರು. ಆದರೆ ಲ್ಯಾಪ್‌ನ ಕೊನೆಯ ಹಂತದಲ್ಲಿ ಒಲಿವೆರಾ ಮತ್ತು ಆಸ್ಟ್ರೇಲಿಯಾದ ಜ್ಯಾಕ್ ಮಿಲ್ಲರ್ ಮೇಲುಗೈ ಸಾಧಿಸಿದರು. ನಂತರ ಆಧಿಪತ್ಯ ಸ್ಥಾಪಿಸಿದ ಒಲಿವೆರಾ ಪ್ರಶಸ್ತಿಯತ್ತ ಮುನ್ನುಗ್ಗಿದರು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅಗ್ರಸ್ಥಾನ ಗಳಿಸಿದ್ದ ಇಟಲಿಯ ಎನಿಯಾ ಬಸ್ಟಿಯಾನಿನಿ ಒದ್ದೆಯಾದ ಟ್ರ್ಯಾಕ್‌ನಲ್ಲಿ ಮೋಡ ತುಂಬಿದ ವಾತಾವರಣದಲ್ಲಿ ತೊಂದರೆ ಅನುಭವಿಸಿದರು. ಹೀಗಾಗಿ ಅವರು 11ನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು. ಕತಾರ್‌ನಲ್ಲಿ ಎರಡು ವಾರಗಳ ಹಿಂದೆ ನಡೆದಿದ್ದ ಈ ಋತುವಿನ ಮೊದಲ ರೇಸ್‌ನಲ್ಲಿ ಅವರು ಪ್ರಶಸ್ತಿ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT