ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್: ಒಲಿಂಪಿಯನ್ ಚಂದ್ರಶೇಖರ್ ಇನ್ನಿಲ್ಲ

Last Updated 24 ಆಗಸ್ಟ್ 2021, 17:01 IST
ಅಕ್ಷರ ಗಾತ್ರ

ಕೊಚ್ಚಿ (ಪಿಟಿಐ): ಒಲಿಂಪಿಯನ್ ಫುಟ್‌ಬಾಲ್ ಅಟಗಾರ ಒ. ಚಂದ್ರಶೇಖರ್ (85) ನಿಧನರಾದರು. 1962ರಲ್ಲಿ ಚಿನ್ನದ ಪದಕ ಜಯಿಸಿದ್ದ ಭಾರತ ತಂಡದಲ್ಲಿ (ಏಷ್ಯನ್ ಗೇಮ್ಸ್‌ನಲ್ಲಿ) ಅವರು ಆಡಿದ್ದರು.

ಅವರು ಕೆಲವು ದಿನಗಳಿಂದ ವಯೊಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮಂಗಳವಾರ ತಮ್ಮ ನಿವಾಸದಲ್ಲಿಯೇ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ ಮೂವರು ಮಕ್ಕಳು ಇದ್ದಾರೆ.

ತಿರುವಾಂಕೂರು ಕೊಚ್ಚಿ ಸಂತೋಷ್ ಟ್ರೋಫಿ ತಂಡದ ಆಟಗಾರರಾಗಿದ್ದರು. ಡಿಫೆಂಡರ್ ಅಗಿ ಗಮನ ಸೆಳೆದಿದ್ದರು. 1960ರ ರೋಮ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಭಾರತ ತಂಡದಲ್ಲಿ ಅವರು ಆಡಿದ್ದರು.‌

1958 ರಿಂದ 1966ರವರೆಗೆ ಅವರು ಭಾರತ ತಂಡವನ್ನು ಪ್ರತಿನಿಧಿಸಿದ್ದರು. 1959ರಲ್ಲಿ ಏಷ್ಯಾ ಕಪ್ ಕ್ವಾಲಿಫೈಯರ್ ಮೂಲಕ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಪದಾರ್ಪಣೆ ಮಾಡಿದರು. ಮರ್ಡೆಕಾ ಕಪ್ ಟೂರ್ನಿಯಲ್ಲಿಯೂ ಆಡಿದ್ದರು. ಮಹಾರಾಷ್ಟ್ರ ತಂಡವನ್ನೂ ಅವರು ಕೆಲವು ವರ್ಷ ಪ್ರತಿನಿಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT