ಶನಿವಾರ, ಮೇ 28, 2022
31 °C

ಸೇಲಿಂಗ್‌ನಲ್ಲಿ ಭಾರತದ ನೇತ್ರಾ ಕುಮನನ್‌ಗೆ ಚಿನ್ನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಟೋಕಿಯೊ ಒಲಿಂಪಿಯನ್ ನೇತ್ರಾ ಕುಮನನ್ ಸ್ಪೇನ್‌ನಲ್ಲಿ ನಡೆದ ಗ್ರಾನ್ ಕೆನರಿಯಾ ಸೇಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದರು.

ಯುರೋಪಿಯನ್ ರೀಜನಲ್ ಓಪನ್ ಸ್ಪರ್ಧೆಗಳ ಭಾಗವಾಗಿರುವ ಈ ಚಾಂಪಿಯನ್‌ಷಿಪ್‌ನಲ್ಲಿ 24 ವರ್ಷದ ನೇತ್ರಾ ಸಾಧನೆ ಮಾಡಿದ್ದಾರೆ.

ಲೇಸರ್ ರೇಡಿಯಲ್ ವಿಭಾಗದಲ್ಲಿ ಅವರು ಮೊದಲಿಗರಾದರು. ಹೋದ ವಾರ ನಡೆದಿದ್ದ ಐಎಲ್‌ಸಿಎ –6 ವಿಭಾಗದ ಆರು ರೇಸ್‌ಗಳ ಪೈಕಿ ಮೂರರಲ್ಲಿ ಗೆದ್ದು 10 ನೆಟ್‌ ಪಾಯಿಂಟ್ಸ್‌ ಗಳಿಸಿದರು.  ಆತಿಥೇಯ ಸ್ಪೇನ್ ದೇಶದ ಬೆನೆಟೊ ಲ್ಯಾಂಚೊ ಮತ್ತು ಮಾರ್ಟಿನಾ ರೀನೊ ಕ್ಯಾಚೊ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

‘ಸೇಲರ್ ನೇತ್ರಾ ಅವರು ಗ್ರಾನ್ ಕನೆರಿಯಾ ಸೇಲಿಂಗ್ ಚಾಂಪಿಯನ್‌ಷಿಪ್‌ನ  ಲೇಸರ್ ರೇಡಿಯಲ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಅಭಿನಂದನೆಗಳು‘ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಟ್ವೀಟ್ ಮಾಡಿದೆ.

’ಮೂರು ದೇಶಗಳ 20 ಸ್ಪರ್ಧಿಗಳು ಇದ್ದರು. ಅದರಲ್ಲಿ ಮೂವರು ಒಲಿಂಪಿಯನ್ನರಿದ್ದರು. ಆರು ರೇಸ್‌ಗಳ ಪೈಕಿ ಮೂರರಲ್ಲಿ ಮೊದಲಿಗರಾದ ಅವರು, ಇನ್ನೆರಡು ಸ್ಪರ್ಧೆಗಳಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದರು’ ಎಂದರು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವರು ಲೇಸರ್‌ ರೇಡಿಯಲ್ ಕ್ಲಾಸ್ ವಿಭಾಗದಲ್ಲಿ 35ನೇ ಸ್ಥಾನ ಪಡೆದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು