ಸೋಮವಾರ, ಜುಲೈ 26, 2021
22 °C

ಒಲಿಂಪಿಕ್ಸ್ ಟಿಕೆಟ್ ನಿರೀಕ್ಷಿಸಿರಲಿಲ್ಲ: ಅನಿರ್ಬನ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕ್ರೋಮ್‌ವೆಲ್‌ : ಈ ವರ್ಷ ಸಾಮರ್ಥ್ಯಕ್ಕಿಂತ ಕಡಿಮೆ ಸಾಧನೆ ತೋರಿದ ಕಾರಣ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುತ್ತೇನೆಂಬ ನಿರೀಕ್ಷೆಯಿರಲಿಲ್ಲ. ಇದು ನನಗೆ ದೊರೆತ ಕಾಣಿಕೆ ಮತ್ತು ಅವಕಾಶ ಎಂದು ಭಾರತದ ಗಾಲ್ಫ್ ಆಟಗಾರ ಅನಿರ್ಬನ್ ಲಾಹಿರಿ ಅಭಿಪ್ರಾಯಪಟ್ಟಿದ್ದಾರೆ.

ಟೋಕಿಯೊ ಕೂಟದ ರ‍್ಯಾಂಕಿಂಗ್ ಪ್ರಕಾರ ಕೊನೆಯದಾಗಿ ಲಭ್ಯವಿದ್ದ 60ನೇ ಸ್ಥಾನವು ಮಂಗಳವಾರ ಅನಿರ್ಬನ್‌ಗೆ ಒಲಿದಿತ್ತು. ಭಾರತದಲ್ಲಿ ಗರಿಷ್ಠ ರ‍್ಯಾಂಕ್ ಹೊಂದಿರುವ ಆಟಗಾರ ಅವರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 340ನೇ ಸ್ಥಾನದಲ್ಲಿದ್ದಾರೆ.

ಅನಿರ್ಬನ್ ಸತತ ಎರಡನೇ ಬಾರಿ ಒಲಿಂಪಿಕ್‌ ಕೂಟಕ್ಕೆ ತೆರಳಲಿದ್ದಾರೆ. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಎಸ್‌ಎಸ್‌ಪಿ ಚೌರಾಸಿಯಾ ಹಾಗೂ ಲಾಹಿರಿ ಆಡಿದ್ದರು.

‘ಇದು ದೊಡ್ಡ ಅಚ್ಚರಿ. ಟೋಕಿಯೊ ಒಲಿಂಪಿಕ್ಸ್ ಪ್ರವೇಶದ ನಿರೀಕ್ಷೆಯಿರಲಿಲ್ಲ. ಆದರೆ ಪದಕದೊಂದಿಗೆ ದೇಶಕ್ಕೆ ಹಿಂದಿರುಗುವ ಮೂಲಕ ಋಣ ತೀರಿಸುತ್ತೇನೆ‘ ಎಂದು ಸದ್ಯ ಕನೆಕ್ಟಿಕಟ್‌ನಲ್ಲಿ ಪಿಜಿಎ ಟೂರ್ ಚಾಂಪಿಯನ್‌ಷಿಪ್‌ಗೆ ಸಜ್ಜುಗೊಳ್ಳುತ್ತಿರುವ ಅನಿರ್ಬನ್ ಹೇಳಿದ್ದಾರೆ.

ಏಷ್ಯಾ ಆಟಗಾರರಲ್ಲಿ ಈ ಹಿಂದೆ ಅಗ್ರಸ್ಥಾನದಲ್ಲಿದ್ದ ಲಾಹಿರಿ, ರಿಯೊ ಕೂಟದಲ್ಲಿ, ಗಾಯದ ನಡುವೆಯೂ ಆಡಿ 57ನೇ ಸ್ಥಾನ ಗಳಿಸಿದ್ದರು. ಇತ್ತೀಚಿನ ಕೆಲವು ಟೂರ್ನಿಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದು ಅವರ ಆತ್ಮವಿಶ್ವಾಸ ಹೆಚ್ಚಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು