ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್: ಡೈವಿಂಗ್‌ ಟೆಸ್ಟ್‌ ಸ್ಪರ್ಧೆಗಳು ಆರಂಭ

Last Updated 1 ಮೇ 2021, 13:50 IST
ಅಕ್ಷರ ಗಾತ್ರ

ಟೋಕಿಯೊ: ಒಲಿಂಪಿಕ್ಸ್ ಜ್ಯೋತಿಯಾತ್ರೆಯು ಭಾನುವಾರ ಜಪಾನ್‌ನ ಒಕಿನಾವಾವನ್ನು ತಲುಪಿದೆ. ಡೈವಿಂಗ್ ಟೆಸ್ಟ್‌ಗಳೂ ಶನಿವಾರ ಆರಂಭವಾಗಿವೆ.

ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಒಕಿನಾವಾದ ಮಿಯಾಕೊಜಿಮಾ ದ್ವೀಪಕ್ಕೆ ಜ್ಯೋತಿಯಾತ್ರೆಯ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ಆದರೆ ನಗರದ ಇತರ ಕಡೆಗಳಲ್ಲಿ ಪ್ರವೇಶ ದೊರೆತಿದೆ. ಕೋವಿಡ್ ಹಿನ್ನೆಲೆಯಲ್ಲಿ ಜಪಾನ್‌ನಲ್ಲಿ ಕೆಲವು ಪ್ರದೇಶಗಳಲ್ಲಿ 17 ದಿನಗಳ ತುರ್ತುಪರಿಸ್ಥಿತಿ (ಏಪ್ರಿಲ್ 25ರಿಂದ) ಜಾರಿಯಲ್ಲಿದೆ.

‘ನಮ್ಮ ಜೀವ ಅಪಾಯದಲ್ಲಿದ್ದು, ಹೊರಗಿನಿಂದ ಜನ ಬರುವುದನ್ನು ನಾವು ಬಯಸುವುದಿಲ್ಲ‘ ಎಂದು ಮಿಯಾಕೊಜಿಮಾದ ಶಿಕ್ಷಕ ಹಯಾಕೊ ಶಿಮಿಜು ಹೇಳಿದ್ದಾರೆ.

ಜಪಾನ್‌ನ 10 ಸಾವಿರ ಜನರನ್ನು ಒಳಗೊಂಡ ಜ್ಯೋತಿಯಾತ್ರೆಯು, ಆರು ವಾರಗಳ ಹಿಂದೆ ಆರಂಭವಾಗಿದೆ. ಜುಲೈ 23ರಿಂದ ನಡೆಯುವ ಒಲಿಂಪಿಕ್‌ ಕೂಟಕ್ಕಾಗಿ ನಡೆಯುತ್ತಿರುವ ಈ ಯಾತ್ರೆಯನ್ನು ಅನಿಶ್ಚಿತತೆ, ನಿರಂತರ ಬದಲಾವಣೆ, ಯಾಕಾಗಿ ಮತ್ತು ಹೇಗೆ ನಡೆಯುತ್ತಿದೆ ಎಂಬ ಪ್ರಶ್ನೆಗಳು ಸುತ್ತುವರಿದಿವೆ.

ಈ ನಡುವೆ ಆರು ದಿನಗಳ ಡೈವಿಂಗ್ ಟೆಸ್ಟ್‌ಗಳು ಶನಿವಾರ ಟೋಕಿಯೊದಲ್ಲಿ ಆರಂಭವಾಗಿವೆ. 46 ದೇಶಗಳ 225 ಅಥ್ಲೀಟ್‌ಗಳು ಭಾಗವಹಿಸುತ್ತಿದ್ದು, ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿಲ್ಲ.

ಅಥ್ಲೀಟ್‌ಗಳ ವಸತಿ, ಕ್ವಾರಂಟೈನ್ ಸ್ಥಿತಿಗತಿಗಳೇನು, ಡೈವಿಂಗ್ ಪಟುಗಳ ಜೊತೆ ಎಷ್ಟು ನೆರವು ಸಿಬ್ಬಂದಿಗೆ ಅವಕಾಶ ಕಲ್ಪಿಸಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಜಪಾನ್‌ ತಲುಪಿದ ಈಜಿಪ್ಟ್ ತಂಡದ ಡೈವಿಂಗ್ ಕೋಚ್ ಒಬ್ಬರಿಗೆ ಕೋವಿಡ್ ಇರುವುದು ದೃಢಪಟ್ಟಿದೆ ಎಂದು ಜಪಾನ್‌ನ ಕ್ಯುಡೊ ಸುದ್ದಿಸಂಸ್ಥೆ ವರದಿ ಮಾಡಿದೆ. ಆದರೆ ಆ ತಂಡದ ಉಳಿದ ಸದಸ್ಯರ ಕೋವಿಡ್ ವರದಿ ‘ನೆಗೆಟಿವ್‘ ಬಂದಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT