ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲದ ಒಲಿಂಪಿಕ್ಸ್: ಚಿನ್ನ ಗೆದ್ದ ಆನ್ನಾ ಗ್ಯಾಸೆರ್‌

ಸ್ನೋ ಬೋರ್ಡಿಂಗ್‌ನಲ್ಲಿ ಸಾಧನೆ
Last Updated 15 ಫೆಬ್ರುವರಿ 2022, 13:02 IST
ಅಕ್ಷರ ಗಾತ್ರ

ಬೀಜಿಂಗ್‌: ಅನುಭವಿ ಸ್ನೋ ಬೋರ್ಡಿಂಗ್‌ ಸ್ಪರ್ಧಿ ಆಸ್ಟ್ರೇಲಿಯಾದ ಆನ್ನಾ ಗ್ಯಾಸೆರ್‌ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಯುವ ಅಥ್ಲೀಟ್‌ಗಳೇ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಕ್ರೀಡೆಯಲ್ಲಿ ಆನ್ನಾ 12 ವರ್ಷಗಳಿಂದ ಸ್ಪರ್ಧಿಸುತ್ತಿದ್ದಾರೆ.

ಮಹಿಳೆಯರಸ್ನೋ ಬೋರ್ಡಿಂಗ್‌ನ ‘ಬಿಗ್‌ ಏರ್‘ ವಿಭಾಗದಲ್ಲಿ ಆನ್ನಾ ಅವರಿಗೆ ಚಿನ್ನ ಒಲಿಯಿತು. ನಾಲ್ಕು ವರ್ಷಗಳ ಹಿಂದೆ ಪಿಯೊಂಗ್‌ಚಾಂಗ್‌ ಕ್ರೀಡಾಕೂಟದಲ್ಲಿ ಈ ವಿಭಾಗವನ್ನು ಮೊದಲ ಬಾರಿಗೆ ಸೇರಿಸಲಾಗಿತ್ತು. ಆಗ ಕೂಡ ಆನ್ನಾ ಅವರು ಚಾಂಪಿಯನ್ ಆಗಿದ್ದರು.

ಮಂಗಳವಾರ ನಡೆದ ಸ್ಪರ್ಧೆಯ ಫೈನಲ್‌ನಲ್ಲಿ ಆನ್ನಾ 185.5 ಸ್ಕೋರ್ ದಾಖಲಿಸಿದರೆ, ನ್ಯೂಜಿಲೆಂಡ್‌ನ 17 ವರ್ಷದ ಜೊಯಿ ಸ್ಯಾಡೊವಸ್ಕಿ ಸಿನಾಟ್‌ (177) ಬೆಳ್ಳಿ ಪದಕ ಗೆದ್ದರು. ಜಪಾನ್‌ನ ಮುರಾಸೆ ಕೊಕೊಮೊ (171.50) ಕಂಚು ಜಯಿಸಿದರು.

ಅಪಘಾತದಲ್ಲಿ ಗಾಯಗೊಂಡಿದ್ದ ಸೋಫಿಯಾ ಬೆಳ್ಳಿ ನಗು: ಮೂರು ವಾರಗಳ ಹಿಂದೆ ಅಫಘಾತದಲ್ಲಿ ಗಂಭೀರ ಗಾಯಗೊಂಡು ಒಲಿಂಪಿಕ್ಸ್ ಸ್ಪರ್ಧೆಯ ಅವಕಾಶವನ್ನು ಕಳೆದುಕೊಳ್ಳುವ ಹಂತದಲ್ಲಿದ್ದ ಇಟಲಿಯ ಸೋಫಿಯಾ ಗೊಗಿಯಾ ಅವರಿಗೆ ಬೆಳ್ಳಿ ಪದಕ ಒಲಿದಿದೆ.

ಮಹಿಳೆಯರ ಸ್ಕೀಯಿಂಗ್‌ನ ಡೌನ್‌ಹಿಲ್‌ ವಿಭಾಗದಲ್ಲಿ ಮಂಗಳವಾರ ಅವರು ಎರಡನೇ ಸ್ಥಾನ ಗಳಿಸಿದರು. 2018ರಲ್ಲಿ ಸೋಫಿಯಾ ಚಾಂಪಿಯನ್ ಆಗಿದ್ದರು. ಜನವರಿಯ ಅಂತ್ಯದಲ್ಲಿ ತವರಿನಲ್ಲಿ ನಡೆದ ವಿಶ್ವಕಪ್‌ ರೇಸ್‌ನಲ್ಲಿ ಅಪಘಾತಕ್ಕೀಡಾಗಿ ಮೊಣಕಾಲು ಗಂಭೀರ ಗಾಯಗೊಂಡು ಊರುಗೋಲು ಹಿಡಿಯುವಂತಾಗಿತ್ತು.

ಸ್ಪರ್ಧೆಯಲ್ಲಿ ಸೋಫಿಯಾ 1 ನಿಮಿಷ 32.03 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಸ್ವಿಟ್ಜರ್ಲೆಂಡ್‌ನ ಸ್ಯುಟರ್‌ ಕೊರಿನ್‌ (1.31.87) ಚಿನ್ನ ಮತ್ತು ಇಟಲಿಯ ನಾದಿಯಾ ಡಿಲಾಗೊ ಕಂಚು ಜಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT