ಶುಕ್ರವಾರ, ಸೆಪ್ಟೆಂಬರ್ 24, 2021
21 °C

Tokyo Olympics: ಹಿದಿಲಿನ್‌ ಡಯಾಸ್,ಫಿಲಿಪ್ಪೀನ್ಸ್‌ನ ‘ಚಿನ್ನ’

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಮಹಿಳೆಯರ 55 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಚಾಂಪಿಯನ್ ಆದ ಹಿದಿಲಿನ್ ಡಯಾಸ್ ಅವರು ಫಿಲಿಪ್ಪೀನ್ಸ್‌ಗೆ ಚಿನ್ನದ ಸಂಭ್ರಮ ತಂದುಕೊಟ್ಟರು. ಇದು, ಆ ದೇಶ ಒಲಿಂಪಿಕ್ಸ್‌ನಲ್ಲಿ ಗಳಿಸಿದ ಮೊದಲ ಚಿನ್ನದ ಪದಕವಾಗಿದೆ.

ನಾಲ್ಕನೇ ಬಾರಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವ 30 ವರ್ಷದ ಹಿದಿಲಿನ್ ಒಟ್ಟು 224 ಕೆಜಿ ಭಾರ ಎತ್ತಿ ಒಲಿಂಪಿಕ್ಸ್‌ ದಾಖಲೆಯನ್ನೂ ಬರೆದರು. ಫಲಿತಾಂಶ ಹೊರಬೀಳುತ್ತಿದ್ದಂತೆ ಮುಖವನ್ನು ಕೈಗಳಿಂದ ಒತ್ತಿ ಹಿಡಿದ ಅವರು ಆನಂದಬಾಷ್ಪ ಸುರಿಸಿದರು. ಪದಕ ಪ್ರದಾನ ಸಮಾರಂಭದಲ್ಲೂ ಭಾವುಕರಾಗಿದ್ದ ಅವರು ‘ಅಟೆನ್ಶನ್‌’ನಲ್ಲಿ ನಿಂತು ಸಲ್ಯೂಟ್ ಹೊಡೆದು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು.

ಚೀನಾದ ಲಿಯಾವೊ ಕ್ಯುಯುನ್ ಬೆಳ್ಳಿ ಪದಕ ಮತ್ತು ಕಜಕಸ್ತಾನದ ಜುಲ್ಫಿಯಾ ಕಂಚಿನ ಪದಕ ಗೆದ್ದುಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು