ಗಾಲ್ಫ್‌: ಮೂರನೇ ಸ್ಥಾನದಲ್ಲಿ ಗಗನಜೀತ್‌

ಶನಿವಾರ, ಮಾರ್ಚ್ 23, 2019
28 °C

ಗಾಲ್ಫ್‌: ಮೂರನೇ ಸ್ಥಾನದಲ್ಲಿ ಗಗನಜೀತ್‌

Published:
Updated:
Prajavani

ಮಸ್ಕತ್‌: ಉತ್ತಮ ಸಾಮರ್ಥ್ಯ ತೋರಿದ ಭಾರತದ ಗಗನಜೀತ್ ಭುಲ್ಲರ್‌ ಇಲ್ಲಿ ನಡೆಯುತ್ತಿರುವ ಒಮಾನ್ ಓಪನ್ ಗಾಲ್ಫ್‌ ಚಾಂಪಿಯನ್‌ಷಿಪ್‌ನ ಎರಡನೇ ಸುತ್ತಿನಲ್ಲಿ ಜಂಟಿ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ.

ಶನಿವಾರ ಭಾರಿ ಗಾಳಿ ಬೀಸುತ್ತಿದ್ದುದರಿಂದ ಪಾಯಿಂಟ್‌ಗಳನ್ನು ಗಳಿಸಲು ಆಟಗಾರರು ಪರದಾಡಿದರು. ಮೊದಲ ಸುತ್ತಿನಲ್ಲಿ 70 ಪಾಯಿಂಟ್ ಕಲೆ ಹಾಕಿದ್ದ ಗಗನಜೀತ್‌ ಪ್ರತಿಕೂಲ ಪರಿಸ್ಥಿತಿಯಲ್ಲೂ 69 ಪಾಯಿಂಟ್ ಗಳಿಸಿ ಮಿಂಚಿದರು.

ಭಾರತದ ಶುಭಂಕರ್ ಶರ್ಮಾ ಕೂಡ ಶನಿವಾರ ಉತ್ತಮ ಸಾಮರ್ಥ್ಯ ಮೆರೆದರು. ಮೊದಲ ಸುತ್ತಿನಲ್ಲಿ 72 ಪಾಯಿಂಟ್‌ ಗಳಿಸಿದ್ದ ಅವರು ನಂತರ 74  ಪಾಯಿಂಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡರು. ಈ ಮೂಲಕ 31ನೇ ಸ್ಥಾನದಲ್ಲಿ ಉಳಿದರು. ಆದರೆ ಭರವಸೆ ಮೂಡಿಸಿದ್ದ ಎಸ್‌ಎಸ್‌ಪಿ ಚೌರಾಸಿಯ ಬೇಗನೇ ಹೊರಬಿದ್ದರು.

ಮೊದಲ ಎರಡು ಸ್ಥಾನಗಳಲ್ಲಿರುವ ಮ್ಯಾಕ್ಸ್ ಕೀಫರ್‌ ಮತ್ತು ಜೊಕಿಮ್ ಹ್ಯಾನ್ಸೆನ್ ಅವರಿಗಿಂತ ಗಗನಜೀತ್‌ ಕೇವಲ ಒಂದೇ ಶಾಟ್‌ ಹಿಂದೆ ಉಳಿದಿದ್ದಾರೆ.

‘ವಾತಾವರಣ ಪೂರಕವಾಗಿರಲಿಲ್ಲ. ವೃತ್ತಿ ಜೀವನದಲ್ಲಿ ಇಂಥ ಸ್ಥಿತಿಯನ್ನು ಎದುರಿಸಿದ್ದು ಇದೇ ಮೊದಲು. ಎದೆಗುಂದದೆ ಆಡಲು ನಿರ್ಧರಿಸಿದ್ದೆ. ಆದ್ದರಿಂದ ಈ ಸಾಧನೆ ಮೂಡಿ ಬಂತು’ ಎಂದು ಗಗನಜೀತ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !