ಗುರುವಾರ , ಅಕ್ಟೋಬರ್ 24, 2019
21 °C
ಪ್ರೊ ಕಬಡ್ಡಿ ಲೀಗ್‌

ಪಲ್ಟನ್‌ ಎದುರು ಹೋರಾಡಿ ಸೋತ ಟೈಟನ್ಸ್

Published:
Updated:

ಪಂಚಕುಲಾ: ಮಂಜಿತ್ ಮತ್ತು ಸುಶಾಂತ್‌ ಸೇಯ್ಲ್‌ ಅವರ ಉತ್ತಮ ರೇಡಿಂಗ್‌ ಬಲದಿಂದ ಪುಣೇರಿ ಪಲ್ಟನ್ ತಂಡ, ಗುರುವಾರ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ತೆಲುಗು ಟೈಟನ್ಸ್‌ ತಂಡವನ್ನು 53–50 ಪಾಯಿಂಟ್‌ಗಳಿಂದ ಸೋಲಿಸಿತು.

ತಾವು ದೇವಿಲಾಲ್‌ ಕ್ರೀಡಾ ಕಾಂಪ್ಲೆಕ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಪಲ್ಟನ್‌ ವಿರಾಮದ ವೇಳೆ 31–16 ಪಾಯಿಂಟ್‌ಗಳ ಭರ್ಜರಿ ಮುನ್ನಡೆ ಪಡೆದಿತ್ತು. ವಿರಾಮದ ನಂತರ ಟೈಟನ್ಸ್‌ ಪೈಪೋಟಿ ನೀಡಿತು.

ಮಂಜಿತ್‌ 12 ಪಾಯಿಂಟ್‌ ಗಳಿಸಿದರೆ, ಸುಶಾಂತ್‌ 11 ಪಾಯಿಂಟ್‌ ಗಳಿಸಿದರೆ, ಇಮದ್‌ ಸೆಡಗಾಟ್ನಿಯಾ ಆರು ಪಾಯಿಂಟ್ಸ್‌ ಗಳಿಸಿದರು. ಸುರ್ಜಿತ್‌ ಸಿಂಗ್‌ ಟ್ಯಾಕ್ಲಿಂಗ್‌ನಲ್ಲಿ ಮಿಂಚಿ ಏಳು ಪಾಯಿಂಟ್ಸ್‌ ಗಳಿಸಿದರು. 

ಟೈಟನ್ಸ್‌ ಪರ ರಾಕೇಶ ಗೌಡ 17 ಪಾಯಿಂಟ್ಸ್‌ ಗಳಿಸಿ ಮಿಂಚಿದರು. ಫರಾದ್‌ ಮಿಲಗಾರ್ದಿನ್ 10 ಪಾಯಿಂಟ್‌ ಗಳಿಸಿದರು. ಟ್ಯಾಕ್ಲಿಂಗ್‌ನಲ್ಲಿ ಆಕಾಶ್‌ ದತ್ತು, ಕ್ರಷ್ಣ ಮದಾನೆ ತಲಾ ಐದು ಪಾಯಿಂಟ್‌ ಗಳಿಸಿ ಪ್ರತಿ ಹೋರಾಟದಲ್ಲಿ ಮಿಂಚಿದರು.

ಶುಕ್ರವಾರದ ಪಂದ್ಯಗಳು: ಹರಿಯಾಣ ಸ್ಟೀಲರ್ಸ್– ತೆಲುಗು ಟೈಟನ್ಸ್‌ (ರಾತ್ರಿ 7.30); ಜೈಪುರ ಪಿಂಕ್‌ ಪ್ಯಾಂಥರ್ಸ್‌– ಬೆಂಗಳೂರು ಬುಲ್ಸ್‌ (8.30).

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)