ಮಂಗಳವಾರ, ಮಾರ್ಚ್ 28, 2023
31 °C
ಬಿಲಿಯರ್ಡ್ಸ್‌: ಬೆಂಗಳೂರು ‘ತಾರೆ’ಯ ಸಾಧನೆ

ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌: ಪಂಕಜ್‌ ಅಡ್ವಾಣಿಗೆ 22ನೇ ಪ್ರಶಸ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮ್ಯಾಂಡಲೆ, ಮ್ಯಾನ್ಮಾರ್ (ಪಿಟಿಐ): ಬೆಂಗಳೂರಿನ ಬಿಲಿಯರ್ಡ್ಸ್‌ ತಾರೆ ಪಂಕಜ್ ಅಡ್ವಾಣಿ ಭಾನುವಾರ 22ನೇ ವಿಶ್ವ ಕಿರೀಟವನ್ನು ಮುಡಿಗೇರಿಸಿಕೊಂಡರು.

ಇಲ್ಲಿ ನಡೆದ ಐಬಿಎಸ್‌ಎಫ್ ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ನಲ್ಲಿ 34 ವರ್ಷದ ಪಂಕಜ 6–2ರಿಂದ ಆತಿಥೇಯ ಮ್ಯಾನ್ಮಾರ್‌ನ ನೇ ಥಾವೇ ವಿರುದ್ಧ ಜಯಿಸಿದರು. 150 ಅಪ್ ಮಾದರಿಯಲ್ಲಿ ಅವರು ಸತತವಾಗಿ ಪ್ರವೇಶಿಸಿದ ನಾಲ್ಕನೇ ಫೈನಲ್ ಇದಾಗಿತ್ತು.

ಪಂಕಜ್ ತಮ್ಮ ಎದುರಾಳಿಯ ಪೈಪೋಟಿಯನ್ನು ಚಾಣಾಕ್ಷತನದಿಂದ ಮೀರಿ ನಿಂತರು. ಅವರು 150–4,  151-66, 150-50, 7-150, 151-69, 150-0, 133-150, 150-75 ಫ್ರೇಮ್‌ಗಳನ್ನು ತಮ್ಮ ಗೆಲುವನ್ನು ಖಚಿತಪಡಿಸಿಕೊಂಡರು. ಹೋದ  ಆರು ವರ್ಷಗಳಲ್ಲಿ ಈ ‘ಚುಟುಕು ಮಾದರಿ’ಯಲ್ಲಿ ಇದು ಅವರು ಗೆದ್ದ  ಐದನೇ ಪ್ರಶಸ್ತಿಯಾಗಿದೆ.

‘ಅನಿರೀಕ್ಷಿತ ತಿರುವುಗಳು ರೋಚಕತೆ ಹೆಚ್ಚಿಸುವ ಇದು ಆಸಕ್ತಿಕರ ಮಾದರಿಯಾಗಿದೆ. ಹೀಗಾಗಿ ವಿಶೇಷ ಅನುಭವ ನೀಡಿದೆ’ ಎಂದು ಪಂಕಜ್ ಹೇಳಿದರು.

ಅತಿ ಹೆಚ್ಚು ವಿಶ್ವ ಪ್ರಶಸ್ತಿಗಳನ್ನು ಗೆದ್ದ ದಾಖಲೆಯನ್ನೂ  ಪಂಕಜ್ ಬರೆದರು. ಅವರು ಸೋಮವಾರ ಆರಂಭವಾಗಲಿರುವ ಸಿಕ್ಸ್‌ ರೆಡ್ ವಿಶ್ವ ಸ್ನೂಕರ್‌ ಟೀಮ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು