ಅಡ್ವಾಣಿಗೆ ಸತತ ಎರಡನೇ ಪ್ರಶಸ್ತಿ ನಿರೀಕ್ಷೆ

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಬೆಂಗಳೂರಿನಲ್ಲಿ ಇಂದಿನಿಂದ ಎಸಿಬಿಎಸ್‌ ಏಷ್ಯನ್ ಸ್ನೂಕರ್‌ ಟೂರ್‌ ಟೆನ್ ರೆಡ್ಸ್‌ ಚಾಂಪಿಯನ್‌ಷಿಪ್‌

ಅಡ್ವಾಣಿಗೆ ಸತತ ಎರಡನೇ ಪ್ರಶಸ್ತಿ ನಿರೀಕ್ಷೆ

Published:
Updated:

ಬೆಂಗಳೂರು: ಎಸಿಬಿಎಸ್‌ (ಏಷ್ಯನ್‌ ಕಾನ್ಫೆಡರೇಷನ್ ಆಫ್‌ ಬಿಲಿಯರ್ಡ್ ಸ್ಪೋರ್ಟ್ಸ್‌) ಏಷ್ಯನ್‌ ಸ್ನೂಕರ್ ಟೂರ್‌ 10 ರೆಡ್ಸ್ ಚಾಂಪಿಯನ್‌ಷಿಪ್‌ಗೆ ನಗರ ಸಜ್ಜಾಗಿದೆ. ವಸಂತ ನಗರದಲ್ಲಿರುವ ಕರ್ನಾಟಕ ರಾಜ್ಯ ಬಿಲಿಯರ್ಡ್ಸ್‌ ಸಂಸ್ಥೆ ಆವರಣದಲ್ಲಿ ಸೋಮವಾರ ಆರಂಭವಾಗಲಿರುವ ಸ್ಪರ್ಧೆಗಳು ಏಪ್ರಿಲ್‌ 25ರ ವರೆಗೆ ನಡೆಯಲಿವೆ.

ಏಷ್ಯನ್ ಸ್ನೂಕರ್ ಟೂರ್ ರ‍್ಯಾಂಕಿಂಗ್‌ನ ಅಗ್ರ ಸ್ಥಾನದಲ್ಲಿರುವ ಬೆಂಗಳೂರಿನ ಪಂಕಜ್ ಅಡ್ವಾಣಿ ಮತ್ತು ಮೂರನೇ ಸ್ಥಾನಲ್ಲಿರುವ ಹಾಂಕಾಂಗ್‌ನ ಚಾಂಗ್ ಕಾ ವಾಯ್‌ ಪ್ರಶಸ್ತಿ ಮೇಲೆ ಕಣ್ಣಿಟ್ಟು ಕಣಕ್ಕೆ ಇಳಿಯಲಿದ್ದಾರೆ. ಭಾರತದ ಆಟಗಾರರ ಆಸೆಯೂ ಗರಿಗೆದರಿದೆ.

ಏಷ್ಯನ್ ಟೂರ್ ಪ್ರತಿ ಬಾರಿಯೂ ಮೂರು ಲೆಗ್‌ಗಳಲ್ಲಿ ನಡೆಯುತ್ತದೆ. ಈ ಬಾರಿಯ ಎರಡು ಲೆಗ್‌ಗಳು ಈಗಾಗಲೇ ಮುಕ್ತಾಯಗೊಂಡಿವೆ. ಟೆನ್‌ ರೆಡ್ಸ್‌ ಸ್ನೂಕರ್ ಮಾದರಿಯಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಒಟ್ಟು 23 ಮಂದಿ ಪಾಲ್ಗೊಳ್ಳಲಿದ್ದು ಮೊದಲ ಸುತ್ತಿನಲ್ಲಿ ಎಂಟು ಎಂಟು ಗುಂಪುಗಳು ಇರುತ್ತವೆ. ಪ್ರತಿ ಗುಂಪಿನಿಂದ ಇಬ್ಬರು 16ರ ಹಂತಕ್ಕೆ ಪ್ರವೇಶಿಸಲಿದ್ದಾರೆ.

ಅಡ್ವಾಣಿ ಸೇರಿದಂತೆ ಅಗ್ರ ಕ್ರಮಾಂಕದ ಆಟಗಾರರು ಪ್ರಶಸ್ತಿ ಗೆಲ್ಲುವ ಅಭಿಲಾಷೆಯೊಂದಿಗೆ ಕಣಕ್ಕೆ ಇಳಿಯಲಿದ್ದರೆ, ಇತರ ಆಟಗಾರರು ಮುಂದಿನ ಋತುವಿನಲ್ಲಿ ಆಡುವ ಅವಕಾಶಕ್ಕಾಗಿ ಪಣ ತೊಟ್ಟು ಸ್ಪರ್ಧಿಸಲಿದ್ದಾರೆ.

ದೋಹಾದಲ್ಲಿ ನಡೆದಿದ್ದ ಮೊದಲ ಲೆಗ್‌ನಲ್ಲಿ 121.7 ಪಾಯಿಂಟ್ಸ್ ಗಳಿಸಿದ್ದ ಅಡ್ವಾಣಿ ನಾಲ್ಕನೇ ಸ್ಥಾನ ಗಳಿಸಿದ್ದರು. ಆದರೆ ಚೀನಾದ ಜಿನಾನ್‌ನಲ್ಲಿ ಪುಟಿದೆದ್ದು ಅಗ್ರ ಸ್ಥಾನ ತಮ್ಮದಾಗಿಸಿಕೊಂಡಿದ್ದರು. ದೋಹಾದಲ್ಲಿ ಪ್ರಶಸ್ತಿ ಗೆದ್ದಿದ್ದ ಬಿಲಾಲ್ ದ್ವಿತೀಯ ಸ್ಥಾನಕ್ಕೆ ಕುಸಿದಿದ್ದರು. ಬೆಂಗಳೂರಿನಲ್ಲೂ ಗೆದ್ದರೆ ಸತತ ಎರಡು ಪ್ರಶಸ್ತಿ ಬಗಲಿಗೆ ಹಾಕಿಕೊಂಡ ಸಾಧನೆ ಅಡ್ವಾಣಿ ಅವರದಾಗಲಿದೆ.

ಜಿನಾನ್‌ನಲ್ಲಿ ಅಡ್ವಾಣಿ 323.62 ಪಾಯಿಂಟ್ಸ್ ಗಳಿಸಿದ್ದರು. ಚೀನಾದ ಪಾಂಗ್ ಜುಂಕ್ಸು, ಖತಾರ್‌ನ ಅಹಮ್ಮದ್ ಸೈಫ್‌, ಭಾರತದ ಕಮಲ್ ಚಾವ್ಲಾ, ಇರಾನ್ ಅಮೀರ್ ಸರ್ಖೋಷ್‌, ಪಾಕಿಸ್ತಾನದ ಮೊಹಮ್ಮದ್ ಬಿಲಾಲ್‌ ಮತ್ತು ಚೀನಾದ ಜೂ ರೇತಿ ಅವರನ್ನು ಸೋಲಿಸಿದ್ದರು.

ಭಾರತದ ಆಟಗಾರರಲ್ಲಿ ಮೂಡಿದ ಭರವಸೆ: ಮೊಹಮ್ಮದ್ ಬಿಲಾಲ್‌ ಬೆಂಗಳೂರಿನಲ್ಲಿ ಆಡುತ್ತಿಲ್ಲ. ಆದ್ದರಿಂದ ಭಾರತದ ಮನನ್ ಚಂದ್ರ ಮತ್ತು ಕಮಲ್ ಚಾವ್ಲಾ ಅವರನ್ನು ಒಳಗೊಂಡ ಪ್ರಮುಖ ಆಟಗಾರರಲ್ಲಿ ನಿರೀಕ್ಷೆ ಮೂಡಿದೆ.

ಜಿನಾನ್‌ನಲ್ಲಿ ಮನನ್ ಚಂದ್ರ 86.08 ಪಾಯಿಂಟ್‌ಗಳೊಂದಿಗೆ 18ನೇ ಸ್ಥಾನ ಗಳಿಸಿದ್ದರು. ಕಮಲ್ ಚಂದ್ರ (82.58 ಪಾಯಿಂಟ್ಸ್‌) 21ನೇ ಸ್ಥಾನ ಗಳಿಸಿದ್ದರು. ವರುಣ್ ಮದನ್ (46.75) 27, ಆದಿತ್ಯ ಮೆಹ್ತಾ, ಲಕ್ಷ್ಮಣ್‌ ರಾವತ್‌, ಸೌರವ್ ಕೊಠಾರಿ, ಸಂದೀಪ್‌ ಕುಲಾಟಿ ಮತ್ತು ಯೋಗೇಶ್ ಕುಮಾರ್ ಶೂನ್ಯ ಸಂಪಾದನೆಯೊಂದಿಗೆ ಮರಳಿದ್ದರು.

ಜಿನಾನ್‌ನಲ್ಲಿ ಪಂಕಜ್‌ಗೆ ಪ್ರಬಲ ಪೈಪೋಟಿ ನೀಡಿದ್ದ ಚೀನಾದ ಜೂ ರೇಟಿ ಮೂರನೇ ಲೆಗ್‌ನಲ್ಲಿ ಆಡುತ್ತಿಲ್ಲ. ಆದ್ದರಿಂದ ಭಾರತದ ಆಟಗಾರನ ಹಾದಿ ಸುಗಮವಾಗಿದೆ. 21 ಬಾರಿಯ ವಿಶ್ವ ಚಾಂಪಿಯನ್‌ ಮತ್ತು ದೇಶಿ ಟೂರ್ನಿಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಬಗಲಿಗೆ ಹಾಕಿಕೊಂಡಿರುವ ಅವರು ತವರಿನಲ್ಲಿ ಸುಲಭವಾಗಿ ಗೆಲ್ಲುವ ಭರವಸೆಯಲ್ಲಿದ್ದಾರೆ. 

ಪಾಕ್ ಆಟಗಾರ ಬಿಲಾಲ್‌ ಗೈರು
ಟೂರ್ನಿಯಲ್ಲಿ ಪಾಕಿಸ್ತಾನದ ಆಟಗಾರ ಮೊಹಮ್ಮದ್ ಬಿಲಾಲ್ ಆಡುತ್ತಿಲ್ಲ. ಈಚೆಗೆ ನಡೆದಿದ್ದ ಎರಡನೇ ಲೆಗ್‌ ಟೂರ್ನಿಯಲ್ಲಿ  ಮೊಹಮ್ಮದ್ ಬಿಲಾಲ್ ಅವರು ಅಗ್ರಸ್ಥಾನ ಪಡೆದಿದ್ದರು. ‘ಪಾಕಿಸ್ತಾನದ ಆಟಗಾರ ವೈಯಕ್ತಿಕ ಕಾರಣದಿಂದ ಸ್ಪರ್ಧಿಸುತ್ತಿಲ್ಲ. ವೀಸಾ ಸಮಸ್ಯೆಯೇನೂ ಇಲ್ಲ’ ಎಂದು ಸಂಘಟಕರು ತಿಳಿಸಿದ್ದಾರೆ.

ಮೊಹಮ್ಮದ್ ಬಿಲಾಲ್‌ ಏಷ್ಯನ್‌ ರ‍್ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಹೀಗಾಗಿ ಪ್ರಬಲ ಸ್ಪರ್ಧಿಯೊಬ್ಬರು ಟೂರ್ನಿಗೆ ಅಲಭ್ಯರಾದಂತಾಗಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !