ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Paralympics: ಹೈಜಂಪ್‌ನಲ್ಲಿ ಮರಿಯಪ್ಪನ್‌ಗೆ ಬೆಳ್ಳಿ, ಶರದ್‌ ಕುಮಾರ್‌ಗೆ ಕಂಚು

Last Updated 31 ಆಗಸ್ಟ್ 2021, 13:18 IST
ಅಕ್ಷರ ಗಾತ್ರ

ಟೋಕಿಯೊ: ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಪುರುಷರ ಹೈಜಂಪ್ ಟಿ 42 ಸ್ಪರ್ಧೆಯಲ್ಲಿ ಭಾರತದ ಹಾಲಿ ಚಾಂಪಿಯನ್ ಮರಿಯಪ್ಪನ್ ತಂಗವೇಲು ಮತ್ತು ಶರದ್ ಕುಮಾರ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು. ಈ ಮೂಲಕ ಈ ವರ್ಷದ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆ ಮಂಗಳವಾರ 10ಕ್ಕೆ ತಲುಪಿದೆ.

ಮರಿಯಪ್ಪನ್ 1.86 ಮೀ. ಪೂರ್ಣಗೊಳಿಸಿದರೆ, ಚಿನ್ನ ಗೆದ್ದ ಅಮೆರಿಕದ ಸ್ಯಾಮ್ ಗ್ರೀವ್ ತನ್ನ ಮೂರನೇ ಪ್ರಯತ್ನದಲ್ಲಿ 1.88 ಮೀಗಿಂತ ಮೇಲೇರುವಲ್ಲಿ ಯಶಸ್ವಿಯಾದರು.

1.83 ಮೀಟರ್ ಪೂರ್ಣಗೊಳಿಸಿದ ಕುಮಾರ್ ಕಂಚು ಪಡೆದರು.

ಸ್ಪರ್ಧೆಯಲ್ಲಿದ್ದ ಮೂರನೇ ಭಾರತೀಯ ಮತ್ತು 2016ರ ರಿಯೋ ಪ್ಯಾರಾಲಿಂಪಿಕ್ಸ್‌ನ ಕಂಚಿನ ಪದಕ ವಿಜೇತ, ವರುಣ್ ಸಿಂಗ್ ಭಾಟಿ ಅವರು 1.77 ಮೀಟರ್‌ನೊಂದಿಗೆ ಒಂಬತ್ತು ಸ್ಪರ್ಧಿಗಳಲ್ಲಿ ಏಳನೇ ಸ್ಥಾನ ಪಡೆದರು.

ಇಂದು ಬೆಳಗ್ಗೆ, ಶೂಟರ್ ಸಿಂಗರಾಜ್ ಅದಾನ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಎಸ್ಎಚ್‌1 ಸ್ಪರ್ಧೆಯಲ್ಲಿ ಕಂಚು ಗೆದ್ದಿದ್ದರು.

ಭಾರತವು ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇದುವರೆಗೆ ಎರಡು ಚಿನ್ನ, ಐದು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳನ್ನು ಗೆದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT