ಗುರುವಾರ , ಜನವರಿ 27, 2022
27 °C
ಸಮಬಲದ ಹೋರಾಟ ಪ್ರದರ್ಶಿಸಿದ ಪೈರೇಟ್ಸ್‌–ತಲೈವಾಸ್‌

ಪ್ರೊ ಕಬಡ್ಡಿ ಲೀಗ್‌: ಬೆಂಗಳೂರು ಬುಲ್ಸ್‌ಗೆ ಜಯ ಗಳಿಸಿಕೊಟ್ಟ ಪವನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರೇಡಿಂಗ್‌ ಚತುರ ಪವನ್ ಶೆರಾವತ್ ಮತ್ತೊಮ್ಮೆ ಕಬಡ್ಡಿ ಅಂಗಣದಲ್ಲಿ ಮಿಂಚು ಹರಿಸಿದರು. ಅವರ ಅಮೋಘ ‘ಸೂಪರ್ ಟೆನ್‌’ ಸಾಧನೆಯ ಬಲದಿಂದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್‌ನ ಎಂಟನೇ ಆವೃತ್ತಿಯಲ್ಲಿ ಮತ್ತೊಂದು ಗೆಲುವು ಸಾಧಿಸಿತು.

ವೈಟ್‌ಫೀಲ್ಡ್‌ನ ಹೋಟೆಲ್ ಶೆರಟಾನ್ ಗ್ರ್ಯಾಂಡ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಗುರುವಾರ ಬೆಂಗಳೂರು ತಂಡ ಜೈಪುರ್ ಪಿಂಕ್ ಪ್ಯಾಂಥರ್ಸ್‌ ವಿರುದ್ಧ 38–31ರ ಜಯ ಸಾಧಿಸಿತು. 13 ಟಚ್ ಪಾಯಿಂಟ್ ಸೇರಿದಂತೆ ಪವನ್ 18 ಪಾಯಿಂಟ್ ಗಳಿಸಿದರು. ಜೈಪುರ ತಂಡದ ಪರ ಅರ್ಜುನ್ ದೇಶ್ವಾಲ್ ಏಕಾಂಗಿ ಹೋರಾಟ ನಡೆಸಿ 13 ಪಾಯಿಂಟ್ ಕಲೆ ಹಾಕಿದರು.

ಪೈರೇಟ್ಸ್‌–ತಲೈವಾಸ್ ಸಮಬಲದ ಹೋರಾಟ

ಸಮಬಲದ ಹೋರಾಟ ಕಂಡ ಮೊದಲ ಪಂದ್ಯದಲ್ಲಿ ಪಟ್ನಾ ಪೈರೇಟ್ಸ್‌ ಮತ್ತು ತಮಿಳ್ ತಲೈವಾಸ್ ತಂಡಗಳು 30–30ರ ಟೈ ಸಾಧಿಸಿದವು. ಮೊದಲಾರ್ಧದ ಮುಕ್ತಾಯಕ್ಕೆ ಪಟ್ನಾ ಆರು ಪಾಯಿಂಟ್‌ಗಳ ಮುನ್ನಡೆ ಸಾಧಿಸಿತ್ತು. ಆದರೆ ದ್ವಿತೀಯಾರ್ಧದಲ್ಲಿ ತಿರುಗೇಟು ನೀಡಿದ ತಮಿಳ್ ತಲೈವಾಸ್ ಪಂದ್ಯವನ್ನು ಸಮಗೊಳಿಸುವಲ್ಲಿ ಯಶಸ್ವಿಯಾಯಿತು.

ಪಟ್ನಾ ಪರವಾಗಿ ಮೋನು ಗೋಯತ್ 5 ಟಚ್ ಪಾಯಿಂಟ್ಸ್ ಮತ್ತು 3 ಬೋನಸ್ ಪಾಯಿಂಟ್ ಗಳಿಸಿದರೆ ತಲೈವಾಸ್‌ಗಾಗಿ ಅಜಿಂಕ್ಯ ಪವಾರ್ ‘ಸೂಪರ್ ಟೆನ್’ ಸಾಧನೆ ಮಾಡಿದರು. 9 ಟಚ್ ಪಾಯಿಂಟ್ಸ್ ಮತ್ತು 3 ಬೋನಸ್ ಪಾಯಿಂಟ್ಸ್ ಸೇರಿದಂತೆ ಅವರು 12 ಪಾಯಿಂಟ್ ಕಲೆ ಹಾಕಿದರು. 

ಅತುಲ್ ಎಂ.ಎಸ್‌ 6 ಪಾಯಿಂಟ್ ಗಳಿಸಿ ಅಜಿಂಕ್ಯ ಅವರಿಗೆ ಉತ್ತಮ ಸಹಕಾರ ನೀಡಿದರು. ಸುರ್ಜೀತ್ ಸಿಂಗ್ 4 ಪಾಯಿಂಟ್ ಕಲೆ ಹಾಕಿದರು. ಸಂಘಟಿತ ಆಟ ಪ್ರದರ್ಶಿಸಿದ ಪಟ್ನಾ ಪರವಾಗಿ ಪ್ರಶಾಂತ್ ಕುಮಾರ್ 7 ಮತ್ತು ಗುಮಾನ್ ಸಿಂಗ್ 4 ಪಾಯಿಂಟ್ ಗಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು