ಪ್ರೀಮಿಯರ್‌ ಬ್ಯಾಡ್ಮಿಂಟನ್ ಲೀಗ್‌ ಅವಧ್‌ ವಾರಿಯರ್ಸ್ ಮುನ್ನಡೆ

7

ಪ್ರೀಮಿಯರ್‌ ಬ್ಯಾಡ್ಮಿಂಟನ್ ಲೀಗ್‌ ಅವಧ್‌ ವಾರಿಯರ್ಸ್ ಮುನ್ನಡೆ

Published:
Updated:
Prajavani

ಅಹಮದಾಬಾದ್‌: ಟ್ರಂಪ್ ಪಂದ್ಯದಲ್ಲಿ ಎದುರಾಳಿಯನ್ನು ಮಣಿಸಿದ ಬಿವೆನ್ ಜಾಂಗ್, ಪ್ರೀಮಿಯರ್‌ ಬ್ಯಾಡ್ಮಿಂಟನ್ ಲೀಗ್‌ನ (ಪಿಬಿಎಲ್‌) ಶುಕ್ರವಾರದ ಹಣಾಹಣಿಯಲ್ಲಿ ಅವಧ್‌ ವಾರಿಯರ್ಸ್‌ಗೆ ಮುನ್ನಡೆ ಗಳಿಸಿಕೊಟ್ಟರು.

ಅಹಮದಾಬಾದ್ ಸ್ಮ್ಯಾಷ್ ಮಾಸ್ಟರ್ಸ್ ಎದುರಿನ ಹಣಾಹಣಿಯಲ್ಲಿ ಬಿವೆನ್ ಜಾಂಗ್ 10–15, 15–11, 15–11ರಲ್ಲಿ ಕ್ರಿಸ್ಟೀ ಗಿಲ್ಮರ್ ವಿರುದ್ಧ ಗೆದ್ದರು. ಈ ಮೂಲಕ ಎರಡು ಪಾಯಿಂಟ್‌ಗಳನ್ನು ಗಳಿಸಿಕೊಟ್ಟರು.

ಎರಡನೇ ಪಂದ್ಯದಲ್ಲಿ ಲೀ ಯಾಂಗ್‌ ಮತ್ತು ಮಥಾಯಸ್ ಕ್ರಿಸ್ಟಿಯನ್‌ಸೆನ್‌ ಜೋಡಿ ಅಹಮದಾಬಾದ್ ಸ್ಮ್ಯಾಷ್ ಮಾಸ್ಟರ್ಸ್‌ನ ಕಿದಂಬಿ ನಂದಗೋಪಾಲ್ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿ ರಡ್ಡಿ ವಿರುದ್ಧ 15–12, 10–15, 15–6ರಿಂದ ಗೆದ್ದು ಮುನ್ನಡೆ ಹೆಚ್ಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !