ಪಿಬಿಎಲ್‌: ಎರಡನೇ ಸ್ಥಾನಕ್ಕೇರಿದ ಅವಧ್‌

7

ಪಿಬಿಎಲ್‌: ಎರಡನೇ ಸ್ಥಾನಕ್ಕೇರಿದ ಅವಧ್‌

Published:
Updated:
Prajavani

ಬೆಂಗಳೂರು: ನಿರ್ಣಾಯಕ ಹೋರಾಟದಲ್ಲಿ ಇಂಗ್ಲೆಂಡ್‌ನ ರಾಜೀವ್‌ ಔಸೆಫ್‌ ಅವರನ್ನು ಮಣಿಸಿದ ದಕ್ಷಿಣ ಕೊರಿಯಾದ ಸನ್‌ ವಾನ್‌ ಹೊ, ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ನ ಪಂದ್ಯದಲ್ಲಿ ಅವಧ್‌ ವಾರಿಯರ್ಸ್‌ ತಂಡಕ್ಕೆ ಗೆಲುವಿನ ಸಿಹಿ ಉಣಬಡಿಸಿದರು.

ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹಣಾಹಣಿಯಲ್ಲಿ ಅವಧ್‌ 4–3ಯಿಂದ ಚೆನ್ನೈ ಸ್ಮ್ಯಾಷರ್ಸ್‌ ತಂಡವನ್ನು ಪರಾಭವಗೊಳಿಸಿತು. ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 20ಕ್ಕೆ ಹೆಚ್ಚಿಸಿಕೊಂಡು ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.

ಪುರುಷರ ಡಬಲ್ಸ್‌ ವಿಭಾಗದ ‘ಟ್ರಂಪ್‌’ ಪಂದ್ಯದಲ್ಲಿ ಅವಧ್‌ ತಂಡದ ಯಾಂಗ್ ಲೀ ಮತ್ತು ಮಥಿಯಸ್‌ ಕ್ರಿಸ್ಟಿಯನ್‌ಸನ್‌ ಅವರು 15–8, 15–6ರಲ್ಲಿ ಕ್ರಿಸ್‌ ಅಡ್‌ಕಾಕ್‌ ಮತ್ತು ಬಿ.ಸುಮೀತ್‌ ರೆಡ್ಡಿ ಅವರನ್ನು ಸೋಲಿಸಿದರು.

ಸಿಂಗಲ್ಸ್‌ ವಿಭಾಗದ ಹಣಾಹಣಿಯಲ್ಲಿ ಲೀ ಡಾಂಗ್‌ ಕೆವುನ್‌ 15–7, 15–13ರಲ್ಲಿ ವಿ ಫೆಂಗ್‌ ಚೊಂಗ್‌ ಅವರನ್ನು ಮಣಿಸಿ ಅವಧ್‌ಗೆ 3–0 ಮುನ್ನಡೆ ತಂದುಕೊಟ್ಟರು.

ಮಹಿಳಾ ಸಿಂಗಲ್ಸ್‌ ವಿಭಾಗದ ‘ಟ್ರಂಪ್‌’ ಹೋರಾಟ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಗೆದ್ದ ಚೆನ್ನೈ ತಂಡ 3–3ರಿಂದ ಸಮಬಲ ಸಾಧಿಸಿತು.

ನಿರ್ಣಾಯಕ ಹಣಾಹಣಿಯಲ್ಲಿ ಸನ್‌ ವಾನ್‌ 15–6, 15–6ರಲ್ಲಿ ರಾಜೀವ್‌ ಎದುರು ಗೆದ್ದು ಅವಧ್‌ ತಂಡದ ಸಂಭ್ರಮಕ್ಕೆ ಕಾರಣರಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !