ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲದ ಒಲಿಂಪಿಕ್ಸ್‌: ಸ್ಲೊವಾಕಿಯಾಗೆ ಸಂಭ್ರಮ ತಂದ ಪೆಟ್ರಾ ಹೋವ

Last Updated 10 ಫೆಬ್ರುವರಿ 2022, 4:25 IST
ಅಕ್ಷರ ಗಾತ್ರ

ಬೀಜಿಂಗ್‌: ಮಹಿಳೆಯರ ಸ್ಲಾಲೊಮ್ ಕ್ರೀಡೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಮೋಘ ಸಾಧನೆ ಮಾಡುತ್ತಿರುವ ಪೆಟ್ರಾ ಹೋವ ಒಲಿಂಪಿಕ್ಸ್‌ನಲ್ಲೂ ಚಿನ್ನದ ಸಾಧನೆ ಮಾಡಿದರು. ಇಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಬುಧವಾರ ಅಮೋಘ ಸಾಧನೆ ಮಾಡಿದ ಅವರು ಸ್ಲೊವಾಕಿಯಾಗೆ ಅಲ್ಪೈನ್ ಸ್ಕೀಯಿಂಗ್‌ನಲ್ಲಿ ಮೊದಲ ಚಿನ್ನ ಗೆದ್ದುಕೊಟ್ಟರು.

ಎರಡು ಬಾರಿಯ ಒಲಿಂಪಿಕ್ ಚಾಂಪಿಯನ್ ಮಿಕೇಲಾ ಶಿಫ್ರಿನ್ ನಿರಾಶೆಗೊಳಗಾದರು. ವಿಶ್ವಕಪ್ ಸ್ಲಾಲೊಮ್ ಬುಧವಾರ ಆರಂಭದಲ್ಲಿ ನೀರಸ ಆಟವಾಡಿದರೂ ನಂತರ ಚೇತರಿಸಿಕೊಂಡು ಲೇನಾ ಡೂರ್ ಅವರನ್ನು ಹಿಂದಿಕ್ಕಿದರು.

ಮೊದಲ ಡೋಪಿಂಗ್ ಪ್ರಕರಣ
ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಇರಾನ್‌ನ ಏಕೈಕ ಪುರುಷ ಅಥ್ಲೀಟ್ ಹೊಸೇನ್ ಶವೆಯ್ ಶಮ್‌ಶಾಕಿ ಅವರು ಡೋಪಿಂಗ್ ಪ್ರಕರಣದಲ್ಲಿ ಸಿಲುಕಿದ್ದಾರೆ. ಆಲ್ಪೈನ್ ಸ್ಕೀಯಿಂಗ್‌ನಲ್ಲಿ ಸ್ಪರ್ಧಿಸಲು ಬಂದಿದ್ದ ಅವರು ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾಗಿದೆ ಎಂದು ಅಂತರರಾಷ್ಟ್ರೀಯ ಡೋಪ್‌ ಟೆಸ್ಟಿಂಗ್ ಏಜನ್ಸಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT