ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌: ಪೋಗಟ್‌ ಸಹೋದರಿಯರ ಮೇಲೆ ಕಣ್ಣು

Last Updated 10 ನವೆಂಬರ್ 2021, 15:10 IST
ಅಕ್ಷರ ಗಾತ್ರ

ಗೊಂಡಾ, ಉತ್ತರಪ್ರದೇಶ: ಸುಮಾರು ಮೂರು ವರ್ಷಗಳ ಬಳಿಕ ಕಣಕ್ಕಿಳಿಯುತ್ತಿರುವ ಗೀತಾ ಪೋಗಟ್‌ ಹಾಗೂ ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತೆ ಸರಿತಾ ಮೋರ್‌ ನಡುವಣ ಪೈಪೋಟಿಗೆ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ ವೇದಿಕೆಯಾಗುವ ನಿರೀಕ್ಷೆಯಿದೆ.

ಗುರುವಾರ ಇಲ್ಲಿ ಆರಂಭವಾಗಲಿರುವ ಚಾಂಪಿಯನ್‌ಷಿಪ್‌ನಲ್ಲಿ ನರಸಿಂಗ್ ಯಾದವ್ (74 ಕೆಜಿ ವಿಭಾಗ) ಮತ್ತು ಗೌರವ್ ಬಲಿಯಾನ್ (79) ಮೇಲೂ ಕಣ್ಣು ನೆಟ್ಟಿದೆ.

ಗೀತಾ ಅವರ ಸಹೋದರಿ, ಟೋಕಿಯೊ ಒಲಿಂಒಪಿಕ್ಸ್ ಕಂಚಿನ ಪದಕ ವಿಜೇತ ಬಜರಂಗ್ ಪೂನಿಯಾ ಅವರ ಪತ್ನಿ ಸಂಗೀತಾ ಫೋಗಟ್ ಅವರು ಗಾಯದಿಂದ ಚೇತರಿಸಿಕೊಂಡ ಬಳಿಕ ವಿಶ್ವ ಚಾಂಪಿಯನ್‌ಷಿಪ್‌ ಟ್ರಯಲ್ಸ್ ಗೆದ್ದಿದ್ದರು. 62 ಕೆಜಿ ವಿಭಾಗದಲ್ಲಿ ಅವರು ಕಣಕ್ಕಿಳಿಯುತ್ತಿದ್ದು ಉತ್ತಮ ಸಾಮರ್ಥ್ಯ ತೋರುವ ವಿಶ್ವಾಸದಲ್ಲಿದ್ದಾರೆ.

2018ರಲ್ಲಿ ಪುತ್ರ ಅರ್ಜುನ್‌ಗೆ ಜನ್ಮ ನೀಡಿದ್ದ ಗೀತಾ ಆ ಬಳಿಕ ಸ್ಪರ್ಧಾತ್ಮಕ ಕುಸ್ತಿಗೆ ಮರಳಿರಲಿಲ್ಲ. ಈ ಚಾಂಪಿಯನ್‌ಷಿಪ್‌ನಲ್ಲಿ 59 ಕೆಜಿ ವಿಭಾಗದಲ್ಲಿ ಅವರು ಸ್ಪರ್ಧಿಸುತ್ತಿದ್ದು, 2024ರ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ಗುರಿಯಿಟ್ಟುಕೊಂಡಿದ್ದಾರೆ.

ರಾಜ್ಯ ತಂಡದ ಆಯ್ಕೆ ಟ್ರಯಲ್ಸ್‌ನಲ್ಲಿ ಹರಿಯಾಣದ ನಾಲ್ವರು ಪಟುಗಳನ್ನು ಗೀತಾ ಚಿತ್ ಮಾಡಿದ್ದರು. ಒಸ್ಲೊದಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಸರಿತಾ ಮೋರ್ ಅವರು ಗೀತಾ ಅವರ ಪ್ರಬಲ ಪ್ರತಿಸ್ಪರ್ಧಿಯಾಗಿದ್ದಾರೆ.

ಉದ್ದೀಪನಾ ಮದ್ದು ಸೇವಿಸಿ ಸಿಕ್ಕಿಬಿದ್ದುನಾಲ್ಕು ವರ್ಷಗಳ ನಿಷೇಧ ಶಿಕ್ಷೆ ಪೂರ್ಣಗೊಳಿಸಿದ ಬಳಿಕನರಸಿಂಗ್ ಯಾದವ್‌, ವಿಶ್ವ ಚಾಂಪಿಯನ್‌ಷಿಪ್‌ಗಾಗಿ ನಡೆದ ಟ್ರಯಲ್ಸ್‌ನಲ್ಲಿ ಪಾಲ್ಗೊಂಡಿದ್ದರೂ ಯುವ ಕುಸ್ತಿಪಟುಗಳ ಎದುರು ನಿರಾಸೆ ಅನುಭವಿಸಿದ್ದರು.

ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಸೋನಮ್ ಮಲಿಕ್‌, ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಅನ್ಷು ಮಲಿಕ್ ಹಾಗೂ ವಿನೇಶಾ ಪೋಗಟ್ ಕೂಡ ಕಣಕ್ಕಿಳಿಯುತ್ತಿಲ್ಲ. ಬಜರಂಗ್ ಪೂನಿಯಾ, ರವಿ ದಹಿಯಾ ಮತ್ತು ದೀಪಕ್ ಪೂನಿಯಾ ಕೂಡ ಸ್ಪರ್ಧಿಸುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT