ಶನಿವಾರ, ಡಿಸೆಂಬರ್ 3, 2022
26 °C

ಪ್ರೊ ಕಬಡ್ಡಿ ಲೀಗ್ ಟೂರ್ನಿ: ಬೆಂಗಾಲ್‌ಗೆ ಭರ್ಜರಿ ಗೆಲುವು

ಪಿಟಿಐ Updated:

ಅಕ್ಷರ ಗಾತ್ರ : | |

ಪುಣೆ: ಅತ್ಯುತ್ತಮ ಆಟವಾಡಿದ ಬೆಂಗಾಲ್ ವಾರಿಯರ್ಸ್ ತಂಡದವರು ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಜಯ ಗಳಿಸಿದರು.

ಇಲ್ಲಿನ ಶಿವ ಛತ್ರಪತಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಾಲ್‌ 46–27ರಿಂದ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿತು. ವಿಜೇತ ತಂಡದ ಪರ ಮಣಿಂದರ್ ಸಿಂಗ್‌ (12 ಪಾಯಿಂಟ್ಸ್) ಮತ್ತು ಶ್ರೀಕಾಂತ್ ಜಾಧವ್‌ (10) ಭರ್ಜರಿ ಆಟವಾಡಿದರು.

ಜಿದ್ದಾಜಿದ್ದಿನ ಪೈಪೋಟಿ ನಡೆದ ಪಂದ್ಯದ ಪ್ರಥಮಾರ್ಧದಲ್ಲಿ ಗುಜರಾತ್ 15–14ರಿಂದ ಮುಂದಿತ್ತು. ಆದರೆ ದ್ವಿತೀಯಾರ್ಧದಲ್ಲಿ ಬೆಂಗಾಲ್ ತಿರುಗೇಟು ನೀಡಿ ಗೆಲುವು ಒಲಿಸಿಕೊಂಡಿತು.

ಇನ್ನೊಂದು ಪಂದ್ಯದಲ್ಲಿ ಯುಪಿ ಯೋಧಾಸ್‌ 41–30ರಿಂದ ತೆಲುಗು ಟೈಟನ್ಸ್ ತಂಡವನ್ನು ಸೋಲಿಸಿತು.

ಇಂದಿನ ಪಂದ್ಯಗಳು

ಯು ಮುಂಬಾ– ಪುಣೇರಿ ಪಲ್ಟನ್‌

ತಮಿಳ್ ತಲೈವಾಸ್‌– ಬೆಂಗಳೂರು ಬುಲ್ಸ್

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು