ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿ: ವಾರಿಯರ್ಸ್‌ ವಿರುದ್ಧ ಪಟ್ನಾ ಪೈರಟ್ಸ್‌ಗೆ ಭರ್ಜರಿ ಜಯ

Last Updated 10 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಮುಂಬೈ: ದೀಪಕ್ ನರ್ವಾಲ್ (13 ಪಾಯಿಂಟ್‌) ಮತ್ತು ಪ್ರದೀಪ್ ನರ್ವಾಲ್ (13 ಪಾಯಿಂಟ್‌) ಅವರ ಭರ್ಜರಿ ರೈಡಿಂಗ್‌ ನೆರವಿನಿಂದ
ಪಟ್ನಾ ಪೈರೇಟ್ಸ್ ತಂಡ ಭಾರಿ ಜಯ ಸಾಧಿಸಿತು. ಇಲ್ಲಿನ ರಾಷ್ಟ್ರೀಯ ಕ್ರೀಡಾ ಕೇಂದ್ರದಲ್ಲಿ ಶನಿವಾರ ರಾತ್ರಿ ನಡೆದ ಪ್ರೊ ಕಬಡ್ಡಿ ಲೀಗ್‌ನಲ್ಲಿ ಪೈರೇಟ್ಸ್‌, ಬೆಂಗಾಳ್‌ ವಾರಿಯರ್ಸ್‌ ತಂಡವನ್ನು 50–30ರಿಂದ ಮಣಿಸಿತು.

ಜೈದೀಪ್‌ ಐದು ಪಾಯಿಂಟ್ ಗಳಿಸಿದರೆ ವಿಕಾಸ್ ಕಾಳೆ ಮತ್ತು ರವಿಂದರ್ ಕುಮಾರ್‌ ತಲಾ ಮೂರು ಪಾಯಿಂಟ್‌ಗಳ ಕಾಣಿಕೆ ನೀಡಿದರು.

ವಾರಿಯರ್ಸ್‌ ಪರ ಮಣಿಂದರ್ ಸಿಂಗ್ ಮಾತ್ರ ಸ್ವಲ್ಪ ಮಿಂಚಿದರು. ಅವರು ಆರು ಪಾಯಿಂಟ್ ಬಗಲಿಗೆ ಹಾಕಿಕೊಂಡರು. ರಣ್ ಸಿಂಗ್, ಬಲದೇವ್ ಸಿಂಗ್‌ ಮತ್ತು ಆದರ್ಶ್‌ ತಲಾ ಮೂರು ಪಾಯಿಂಟ್ ಗಳಿಸಿದರು. ಜಾಂಗ್ ಕುನ್‌ಲೀ ಕೇವಲ ಎರಡು ಪಾಯಿಂಟ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT